- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯವಚನ ಸಾಹಿತ್ಯದಿಂದ ಉತ್ತಮ ಬದುಕು. ಪ್ರೊ. ಹಿರೇಮಠ

ವಚನ ಸಾಹಿತ್ಯದಿಂದ ಉತ್ತಮ ಬದುಕು. ಪ್ರೊ. ಹಿರೇಮಠ

ಬಸವನಬಾಗೇವಾಡಿ: ಇಂದಿನ ಕಲಿಯುಗದಲ್ಲಿ ಮಾನವನ ಆಧುನಿಕ ಚಿಂತನೆಗಳು ಸಂಕುಚಿತ ಮನೋಭಾವನೆ ಹುಟ್ಟು ಹಾಕುತ್ತಿವೆ. ವಚನ ಸಾಹಿತ್ಯ (Vachana Sahitya) ಅಧ್ಯಯನ ಮಾಡುವುದರ ಮೂಲಕ ಉತ್ತಮ ಬದುಕನ್ನು ಕಟ್ಟಿಕೊಳ್ಳಬೇಕಿದೆ (Sharana Sahitya Parishat) ಎಂದು ಪ್ರೊ.ಐ.ಬಿ.ಹಿರೇಮಠ (I B Hiremath) ಹೇಳಿದರು.

ಪಟ್ಟಣದ ವಿಠ್ಠಲ ಮಂದಿರದ ಸಮೀಪದಲ್ಲಿರುವ ಯಾತ್ರಿ ನಿವಾಸದಲ್ಲಿ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ ಮಂಗಳವಾರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಇಂದು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿದ ಜನರು ಮಾನವೀಯ ಮೌಲ್ಯಗಳನ್ನು ಮರೆಯುತ್ತಿದ್ದಾರೆ. ಸತ್ಯ, ಅಹಿಂಸೆ, ಪ್ರಾಮಾಣಿಕತೆ, ಕಾಯಕ, ದಾಸೋಹ ಚಿಂತನೆಗಳು ಇಂದು ಮರೆಮಾಚುತ್ತಿವೆ. ಪ್ರತಿಯೊಬ್ಬರೂ 12ನೇ ಶತಮಾನದ ಶರಣರ ವಚನ ಸಾಹಿತ್ಯವನ್ನು ಅಧ್ಯಯನ ಮಾಡಬೇಕಿದೆ. ಶರಣರ ಚಿಂತನೆಗಳನ್ನು ಅಳವಡಿಸಿಕೊಂಡಾಗ ಮಾತ್ರ ಮಾನವ ಜನ್ಮ ಸಾರ್ಥಕತೆ ಪಡೆಯುತ್ತದೆ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಒಬ್ಬರು ಇನ್ನೊಬ್ಬರನ್ನು ಪ್ರೀತಿ ಮಾಡಬೇಕೆ ಹೊರತು ದ್ವೇಷವನ್ನಲ್ಲ. ಶರಣರ ವಾಣಿಗಳನ್ನು ಅರ್ಥಪೂರ್ಣವಾಗಿ ಜೀವನದಲ್ಲಿ ಅಳವಡಿಸಿಕೊಂಡಾಗ ನಿಜವಾದ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ದೇಶವನ್ನು ಮಾನವೀಯ ಮೌಲ್ಯಗಳ ಮೇಲೆ ಕಟ್ಟಲಾಗಿದೆ. ನಮ್ಮದು ಶರಣ ಸಂಸ್ಕೃತಿ, ಅದು ಉನ್ನತ ಮಾನವೀಯ ಮೌಲ್ಯಗಳನ್ನು ಹೊಂದಿದೆ. ಆದರೆ ಇಂದು ಯುವಕರಲ್ಲಿ ಮೌಲ್ಯಗಳು ಮರೆಯಾಗುತ್ತಿರುವುದು ವಿಷಾದನೀಯ. ಶರಣ ಸಂಸ್ಕೃತಿಯ ಮೌಲ್ಯಗಳನ್ನು ಮಕ್ಕಳಲ್ಲಿ ಮೂಡಿಸುವುದು ಹಿರಿಯರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ಶರಣ ಸಾಹಿತ್ಯ ಪರಿಷತ್ (Sharana Sahitya Parishat) ತಾಲೂಕು ಘಟಕದ ಅಧ್ಯಕ್ಷ ವೀರಣ್ಣ ಮರ್ತುರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಗಪ್ಪ ಅಡಗಿಮನಿ, ಎಫ್.ಡಿ.ಮೇಟಿ, ಸಾವಿತ್ರಿ ಕಲ್ಯಾಣಶೆಟ್ಟಿ, ಶರಣು ಬಸ್ತಾಳ, ಸದಾಶಿವ ಕೊಟ್ಲಿ, ಎಸ್.ಐ.ಮನಗೂಳಿ ನಿರೂಪಿಸಿದರು, ಬಸವರಾಜ ಹಡಪದ ವಂದಿಸಿದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!