- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಜಿಲ್ಲೆಯಾದ್ಯಂತ ಶಾಲಾ ಪ್ರಾರಂಭೋತ್ಸವ

ಜಿಲ್ಲೆಯಾದ್ಯಂತ ಶಾಲಾ ಪ್ರಾರಂಭೋತ್ಸವ

ವಿಜಯಪುರ: ಇಂದಿನಿಂದ ಪ್ರಾಥಮಿಕ ಶಾಲೆಗಳು ಆರಂಭಗೊಂಡಿವೆ. ಪ್ರತಿ ವರ್ಷ ಜೂನ್ 1ರಿಂದ ಆರಂಭವಾಗುತ್ತಿದ್ದವು, ಆದರೆ ಈ ಬಾರಿ ಹದಿನೈದು ದಿನ ಮುಂಚಿತವಾಗಿಯೇ ಆರಂಭಗೊಂಡಿವೆ.

ಜಿಲ್ಲೆಯಲ್ಲಿ ಒಟ್ಟು 1927ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, ಇಲ್ಲಿ 2,56,587. ವಿದ್ಯಾರ್ಥಿಗಳು ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಲು ಶಾಲೆಗೆ ದಾಖಲಾತಿ ಪಡೆದುಕೊಂಡಿದ್ದಾರೆ. ಇವರಿಗೆ ಒಟ್ಟು 9050 ಶಿಕ್ಷಕರು ಭೋದನೆ ಮಾಡಲಿದ್ದಾರೆ.

ಪೊರಕೆ ಹಿಡಿದ ಮುಖ್ಯಗುರು: ಇಂದು ಶಾಲೆ ಆರಂಭ ಗೊಳ್ಳುತ್ತಿರುವ ಹಿನ್ನಲೆಯಲ್ಲಿ ಶಾಲೆಯನ್ನು ಖುದ್ದು ಶಿಕ್ಷಕರು ಮುಂದೆ ನಿಂತು ತಳಿಲು ತೋರಣ, ರಂಗೋಲಿ ಬಿಡಿಸಿ ಮಕ್ಕಳನ್ನು ಬರ ಮಾಡಿ ಕೊಳ್ಳುತ್ತಿದ್ದಾರೆ.

ವಿಜಯಪುರ ನಗರದ ಶಿಕಾರಿಖಾನೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಖುದ್ದು ಮುಖ್ಯಗುರುಗಳೇ ಪೊರೆಕೆ ಹಿಡಿದು ಶಾಲೆ ಆವರಷವನ್ನು ಸ್ವಚ್ಚಗೊಳಿಸಿದರು.

ಸ್ವಚ್ಛತೆ ತದನಂತರ ಶಾಲಾ ಮಕ್ಕಳನ್ನು ಹೂವು ನೀಡಿ ಬರ ಮಾಡಿಕೊಂಡರು. ಅಲ್ಲದೇ, ಹೆಡ್ ಮಾಸ್ಟರ್ ಜಗದೀಶ ಅಕ್ಕಿಗೆ ಶಾಲಾ ಆಡಳಿತ ಮಂಡಳಿ ಸಾಥ್  ನೀಡಿದರು. ಇನ್ನು ಮಕ್ಕಳ ಸ್ವಾಗತಕ್ಕೆ ಶಾಲೆಯಲ್ಲಿ ತೆಂಗಿನಗರಿ ಕಟ್ಟಿ, ರಂಗೋಲಿ ಹಾಕಿ ಮುದ್ದು ಮಕ್ಕಳನ್ನು ಶಿಕ್ಷಕರು ಸ್ವಾಗತಿಸಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!