ಸಂವಿಧಾನ ರಕ್ಷಣೆಗೆ ಒಗ್ಗಟ್ಟಿನ ಹೋರಾಟ ಅಗತ್ಯ. ಲಕ್ಷ್ಮೀನಾರಾಯಣ ನಾಗವಾರ

0
170
Savita Ambedkar - Ambedkar Sahavasadalli Kannada Book
Savita Ambedkar - Ambedkar Sahavasadalli Kannada Book

ಹಿರಿಯ ಪತ್ರಕರ್ತ ಅನಿಲ ಹೊಸಮನಿ (Anil Hosamani) ಅವರು ಕನ್ನಡಕ್ಕೆ ಅನುವಾದಿಸಿರುವ ಡಾ. ಸವಿತಾ ಭೀಮರಾವ್ (Savita Ambedkar) ಅಂಬೇಡ್ಕರ್ ಅವರ ಆತ್ಮಚರಿತ್ರೆ “ಡಾ. ಅಂಬೇಡ್ಕರ್ ಸಹವಾಸದಲ್ಲಿ” (Ambedkar Sahavasadalli) ಕೃತಿಯ ಬಿಡುಗಡೆ ಮಾಡಲಾಯಿತು.

ವಿಜಯಪುರ: ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಇವುಗಳ ರಕ್ಷಣೆಗಾಗಿ ದಲಿತ ಸಂಘಟನೆಗಳ ಒಗ್ಗಟ್ಟಿನ ಹೋರಾಟದ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಕರೆ ನೀಡಿದರು.

Must Watch :

ನಗರದ ಕಂದಗಲ್ಲ ಹನುಮಂತ್ರಾಯ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ಚಂದ್ರಶೇಖರ ಹೊಸಮನಿ ಫೌಂಡೇಶನ್, ಲಡಾಯಿ ಪ್ರಕಾಶನ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ, ಹಿರಿಯ ಪತ್ರಕರ್ತ ಅನಿಲ ಹೊಸಮನಿ ಅವರು ಕನ್ನಡಕ್ಕೆ ಅನುವಾದಿಸಿರುವ ಡಾ. ಸವಿತಾ ಭೀಮರಾವ್ ಅಂಬೇಡ್ಕರ್ ಅವರ ಆತ್ಮಚರಿತ್ರೆ “ಡಾ. ಅಂಬೇಡ್ಕರ್ ಸಹವಾಸದಲ್ಲಿ” ಕೃತಿಯ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

More Read: ಎಸ್.ಜಿ. ಪಾಟೀಲರ ಸೇವೆ ಅನನ್ಯ. ಡಾ. ಎಸ್.ಎಸ್. ಪಾಟೀಲ ಕಡೂರ  

ಮನುವಾದಿ ಸರಕಾರಗಳು ಸರಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಒಂದೊಂದಾಗಿ ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಹಂತಹಂತವಾಗಿ ಮೀಸಲಾತಿಯನ್ನು ರದ್ದುಗೊಳಿಸುತ್ತಿದ್ದಾರೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಮನುವಾದಿಗಳು ನಡೆಸಿರುವ ಈ ಕುತಂತ್ರವನ್ನು ತಡೆಬೇಕಾದರೆ ಹರಿದು ಹಂಚಿ ಹೋಗಿರುವ ದಲಿತ ಸಂಘಟನೆಗಳು ಒಂದೇ ವೇದಿಕೆಯಡಿಯಲ್ಲಿ ಬಂದು ಹೋರಾಟ ಮಾಡಬೇಕಿದೆ ಎಂದು ಹೇಳಿದರು.

Savita Ambedkar - Ambedkar Sahavasadalli Kannada Book
Savita Ambedkar – Ambedkar Sahavasadalli Kannada Book

ಮುಸಲ್ಮಾನರ ವಿರುದ್ಧ ದಲಿತರನ್ನು ಎತ್ತಿಕಟ್ಟುವ ಹುನ್ನಾರ ನಡೆಯುತ್ತಿದೆ. ಆಸೆ ಆಮಿಷಗಳ ಮುಖಾಂತರ ದಲಿತ ನಾಯಕರ ದಿಕ್ಕುತಪ್ಪಿಸುವ ಕೆಲಸ ವ್ಯವಸ್ಥಿತವಾಗಿ ಜಾರಿಯಲ್ಲಿದೆ. ಇವತ್ತು ಮುಸಲ್ಮಾನರನು ಟಾರ್ಗೆಟ್ ಮಾಡುತ್ತಿರುವ ಸಂಘಪರಿವಾರದ ಮುಂದಿನ ಟಾರ್ಗೆಟ್ ದಲಿತರೇ ಆಗಿದ್ದಾರೆ. ಮನುವಾದಿಗಳ ಈ ಹುನ್ನಾರವನ್ನು ದಲಿತ ಮುಸ್ಲಿಂ ಮತ್ತು ಮುಖಂಡರು ಅರ್ಥಮಾಡಿಕೊಳ್ಳಬೇಕಿದೆ. ದಲಿತರು ಮತ್ತು ಮುಸಲ್ಮಾನರು ಒಂದಾದರೆ ಈ ದೇಶವನ್ನು ನಾವೇ ಆಳಬಹುದು ಎಂದು ಅವರು ಹೇಳಿದರು.

Must Read: ವಿಜಯಪುರದ ಮಹಾನ್ ದೇಶಭಕ್ತನ ರೋಚಕ ಕಥೆ

ರಾಜ್ಯದಲ್ಲಿ ಒಡೆದು ಹೋಗಿರುವ ಎಲ್ಲ ದಲಿತ ಸಂಘಟನೆಗಳನ್ನು ಜೋಡಿಸುವ ದಿಸೆಯಲ್ಲಿ ಚಿಂತನೆ ನಡೆದಿದೆ. ಡಾ. ಅಂಬೇಡ್ಕರ್ ಅವರ ಆಶಯದಂತೆಯೇ ಎಲ್ಲಾ ದಲಿತ ಸಂಘಟನೆಗಳು ಕೆಲಸ ಮಾಡುತ್ತಿವೆ. ಈ ಎಲ್ಲ ಸಂಘಟನೆಗಳನ್ನು ಒಂದುಗೂಡಿಸುವ ಸಾಮರ್ಥ್ಯ ಪ್ರಭಾವಿ ಮುಖಂಡರಾದ ಡಿ.ಜಿ. ಸಾಗರ್ ಅವರಿಗೆ ಇದೆ. ಅವರು ಎಲ್ಲ ರೀತಿಯಲ್ಲೂ ಸಮರ್ಥ ನಾಯಕರಾಗಿದ್ದಾರೆ. ಅವರು ಈ ದಿಸೆಯಲ್ಲಿ ಮುಂದಾಳತ್ವ ವಹಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

Savita Ambedkar - Ambedkar Sahavasadalli Kannada Book
Savita Ambedkar – Ambedkar Sahavasadalli Kannada Book

ಡಾ. ಅಂಬೇಡ್ಕರ್ ಅವರ ಎರಡನೆಯ ಪತ್ನಿ ಡಾ. ಸವಿತಾ ಅಂಬೇಡ್ಕರ್ ಅವರ ಕುರಿತಾಗಿ ಹಲವಾರು ರೀತಿಯ ಅಪಪ್ರಚಾರ ನಡೆದಿದೆ. ಅದಕ್ಕೆ ಉತ್ತರವಾಗಿ ಅವರು ತಮ್ಮ ಆತ್ಮಚರಿತ್ರೆಯನ್ನು ಬರೆದುಕೊಂಡಿದ್ದಾರೆ. ಅದನ್ನು ಕನ್ನಡದಲ್ಲಿ ತಂದಿರುವ ಹಿರಿಯ ಹೋರಾಟಗಾರ ಅನಿಲ ಹೊಸಮನಿ ಅವರು ಐತಿಹಾಸಿಕ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಭಂತೆ ಬೋಧಿಪ್ರಜ್ಞ, ದಲಿತ ಸಂಘರ್ಷ ಸಮಿತಿಯ ರಾಜ್ಯ ಮುಖಂಡರಾದ ಚಂದ್ರು ಚಕ್ರವರ್ತಿ, ಪ್ರಭು ಮೇಗಳಮನಿ, ಜಿಲ್ಲಾ ಮುಂಖಡರಾದ ಚೆನ್ನು ಕಟ್ಟಿಮನಿ, ಗುರುರಾಜ ಗುಡಿಮನಿ, ನಾಗೇಶ ಕಟ್ಟಿಮನಿ ಮತ್ತಿತರರು ವೇದಿಕೆ ಮೇಲಿದ್ದರು.

Savita Ambedkar - Ambedkar Sahavasadalli Kannada Book
Savita Ambedkar – Ambedkar Sahavasadalli Kannada Book

ದಸಂಸ ಜಿಲ್ಲಾ ಸಂಚಾಲಕ ಚಂದ್ರಕಾಂತ ಸಿಂಗೆ ಸ್ವಾಗತಿಸಿದರು. ಜಿಲ್ಲಾ ಸಂಘಟನಾ ಸಂಚಾಲಕ ಹುಯೋಗಿ ತಳ್ಳೊಳ್ಳಿ ವಂದಿಸಿದರು. ಎಂ.ಬಿ. ಕಟ್ಟಿಮನಿ ಕಾರ್ಯುಕ್ರಮ ನಿರೂಪಿಸಿದರು. ಜಿಲ್ಲಾ ಮತ್ತು ತಾಲೂಕಾ ಸಂಚಾಲಕರು, ಕಾರ್ಯಕರ್ತರು ಭಾಗವಹಿಸಿದ್ದರು.


LEAVE A REPLY

Please enter your comment!
Please enter your name here