- Advertisement -Newspaper WordPress Theme
ಅಂಕಣಗಳುಯುವ ಭಾರತ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ…

ಯುವ ಭಾರತ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ…

ಗುರುಬ್ಯೋ ನಮಃ… (Swami Vivekananda)

ಪ್ರಪಂಚದ ಯಾವುದೇ ಪರಂಪರೆಯನ್ನು ಗಮನಿಸಿದಾಗ ಗುರುವಿಗೆ ಅತ್ಯುನ್ನತ ಸ್ಥಾನ ಮತ್ತು ಗೌರವವನ್ನು ಕಾಯ್ದಿರಿಸಿರುವುದು ನಾವೆಲ್ಲರೂ ಒಪ್ಪಿಕೊಳ್ಳುವ ವಿಚಾರವಾಗಿದೆ. ಭೌತಿಕವಾಗಿ ಶಿಕ್ಷಕ ಏನನ್ನು ತಯಾರಿಸದಿರಬಹುದು ಆದರೆ ವಿದ್ಯಾರ್ಥಿಗಳಲ್ಲಿ ಸಮಾಜ ಕಟ್ಟುವ  ಮನಸ್ಸನ್ನು ಗಟ್ಟಿಗೋಳಿಸಿ ತನ್ಮೂಲಕ ದೇಶ ಕಟ್ಟುವ ಕಾರ್ಯವನ್ನು ನಿರಂತರವಾಗಿ ಚಾಲನೆಯಲ್ಲಿಟ್ಟಿರುವ ಶಕ್ತಿ ಆತನಲ್ಲಿದೆ.

ಸಿಡಿಲ ಸನ್ಯಾಸಿ ಸ್ವಾಮಿ ವಿವೇಕಾಂದರು ಯುವಕರ ಕುರಿತು “ನನಗೆ ನೂರೇ ನೂರು ಜನ ಯುವಕರನ್ನು ನೀಡಿ, ನಾನು ದೇಶದ ಚಿತ್ರಣವನ್ನೇ ಬದಲಿಸುತ್ತೇನೆ.” ಎಂದು ಹೆಳಿದ್ದನ್ನು ನೋಡಿದರೆ, ಸ್ವಾಮಿಜೀ ಯುವಕರ ಮೇಲಿಟ್ಟಿರುವ ನಂಬಿಕೆ, ವಿಶ್ವಾಸ ಎಂತದ್ದು ಎಂದು ಗೋಚರಿಸುತ್ತದೆ, ಅಂತಹ ಜಗತ್ತಿನ ಅತಿ ದೊಡ್ಡ ಯುವಪಡೆಯೇ ನಮ್ಮ ರಾಷ್ಟ್ರದಲ್ಲಿದೆ, ಅನ್ನೋದು ಹೆಮ್ಮೆಯ ಸಂಗತಿ. ಆದರೆ ಈ ಯುವಶಕ್ತಿಯನ್ನು ಯಾರೊಬ್ಬರು ಸಕಾರಾತ್ಮಕವಾಗಿ ಬದಲಾಯಿಸುವ ಪ್ರಯತ್ನಕ್ಕೆ ಮುಂದಾಗುತ್ತಿಲ್ಲ, ಸಕಾರಾತ್ಮಕವಾಗಿ ನೋಡುತ್ತಿಲ್ಲ ಎನ್ನುವುದು ಸಹ ಅಷ್ಟೇ ನೋವಿನ ಸಂಗತಿಯಾಗಿದೆ.

ಯುವಕರನ್ನು ಪರಿವರ್ತಿಸದ ಕಾರ್ಯದಿಂದ ಯುವಕರು ಬೇಸತ್ತುಕೊಳ್ಳುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ. ನಾವು ಸಮಾಜಕ್ಕೆ ಉಪಯುಕ್ತವಿಲ್ಲ ಎಂದು ಮನೋಭಾವ ಮೂಡತೊಡಗಿದೆ. ಇದರಿಂದ ನಮ್ಮ ಅಪಾರ ಯುವ ಸಮೂಹ ಅನ್ಯತಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು ಜೀವನದ ಅಮೂಲ್ಯವಾದ ಸಮಯವನ್ನು ವ್ಯರ್ಥಗೊಳಿಸುತ್ತಿರುವವರು ಒಂದೆಡೆಯಾದರೆ, (Swami Vivekananda) ಇತ್ತ ಕೆಲ ಯುವಕರು ರಾಷ್ಟ್ರಕ್ಕೆ ಯುವ ಶಕ್ತಿ ಎಂದರೇ ಏನು ಎಂಬುದನ್ನು ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಪಣ ತೊಟ್ಟಿರುವುದು ಹೆಮ್ಮೆ ಪಡುವಂತಾಗಿದೆ.

ಸಮಾಜ ತಪ್ಪು ದಾರಿಯಲ್ಲಿ ನಡೆಯುತ್ತಿದ್ದರೆ ಅದನ್ನು ಸರಿದಾರಿಗೆ ತರುವ ಸರ್ವ ಶಕ್ತಿಯನ್ನು ನಮ್ಮ ಸಮಾಜ ಗುರುಗಳಿಗೆ ನೀಡಿದೆ. ಆದ್ದರಿಂದ ಯುವ ಪಡೆಯನ್ನು ಧನಾತ್ಮಕವಾಗಿ ಬದಲಿಸುವ ಕಠಿಣ ಪ್ರಯತ್ನಕ್ಕೆ ನಮ್ಮ ಶಿಕ್ಷಕರು ಅಣಿಯಾಗಬೇಕು ಮತ್ತು ಆ ಪ್ರಾಮಾಣಿಕ ಪ್ರಯತ್ನಕ್ಕೆ ಸಮಾಜವು ಋಣಿ ಯಾಗಿರಬೇಕು, ಹೀಗೆ ನಮ್ಮ ಸಮಾಜ ಮತ್ತು ದೇಶ ಕಟ್ಟುವ ಕೆಲಸದ ಬಗ್ಗೆ ಸಾಕಷ್ಟು ಮಾತನಾಡಬಹುದು ಆದರೆ ಪ್ರಸ್ತುತ ಸಮಾಜದಲ್ಲಿ  ಯುವಕರೇ ಒಂದು ಸಮಸ್ಯೆ  ಎಂಬುವಷ್ಟರ ಮಟ್ಟಿಗೆ ಬಿಂಬಿತವಾಗಲಾರಂಭಿಸಿದೆ,  ಇದನ್ನು ಅಲ್ಲಗಳೆಯಲು ಶಿಕ್ಷಕರು ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡುವುದರೊಂದಿಗೆ ಪ್ರಸ್ತುತ ಸಮಾಜದ ಬಗ್ಗೆ ಜ್ಞಾನ ನೀಡುವುದು ಅಷ್ಟೇ ಮುಖ್ಯವಾಗಿದೆ ಎಂಬುದು ಪ್ರಮುಖ ಅಂಶವಾಗಿದೆ.

ಇಂತಹ ಜ್ಞಾನ ಸಂಪಾದನೆಗೆ ನಮ್ಮ ಪಠ್ಯಗಳಲ್ಲಿನ ಓದುಗಳಷ್ಟೇ ಸಾಲದು, ರಾಷ್ಟç, ಧರ್ಮ, ಸ್ಪೂರ್ತಿದಾಯಕ ಅನುಭವಗಳು ಹೀಗೆ ಸಕಲ ಜ್ಞಾನ ನೀಡುವುದು ಪ್ರತಿಯೊಬ್ಬ ಗುರುವಿನ ಆದ್ಯ ಕರ್ತವ್ಯವಾಗಿದೆ. ಅದರೊಂದಿಗೆ ಬದುಕುವ ಕಲೆ, ಧೈರ್ಯ, ಆತ್ಮಸ್ಥೈರ್ಯ ಬೆಳೆಸಿ, ಪ್ರತಿಯೊಬ್ಬ ಯುವಕನು ಜೀವನದಲ್ಲಿ ಯಶಸ್ವಿಯಾಗುವಂತೆ ಮಾಡುವ ಶಕ್ತಿ ಗುರುವಿನಲ್ಲಿದೆ. ಇಂದಿನ ಶಿಕ್ಷಕರು, ಸರಕಾರಿ ವೇತನಕ್ಕಾಗಿ ಮಾತ್ರ ಕಾರ್ಯ ನಿರ್ವಹಿಸದೇ, ಸಾಮಾಜಿಕ ಜವಾಭ್ದಾರಿಯನ್ನು ಅರಿತು, ನುಡಿದಂತೆ ನಡೆಯುತ್ತಾ ಯುವಕರ ನಾಡಿ ಮಿಡಿತ ಅರಿತುಕೊಂಡು ಮಾರ್ಗದರ್ಶನ ಮಾಡಿದ್ದೆ ಆದರೆ ಭವ್ಯ ಭಾರತದ (Swami Vivekananda) ನಿರ್ಮಾಣವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಜೈ ಹಿಂದ್

— ರಮೇಶ ವಡ್ಡೋಡಗಿ, ಯುವ ಶಕ್ತಿ ಸಂಸ್ಥೆ, ಮನಗೂಳಿ

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!