- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಚಿನ್ನ ಕದ್ದು ಸಿಕ್ಕಿಬಿದ್ದ ಕಳ್ಳರು

ಚಿನ್ನ ಕದ್ದು ಸಿಕ್ಕಿಬಿದ್ದ ಕಳ್ಳರು

ವಿಜಯಪುರ: ರಸ್ತೆ ಬದಿ ನಿಂತಿದ್ದ ಮಹಿಳೆ ಸರಗಳ್ಳತನ ಮಾಡಿ(Robbers of Vijayapur) ಹೋಗುತ್ತಿದ್ದ ವೇಳೆ ಕಳ್ಳರು ಸಿಕ್ಕಿಬಿದ್ದಿರುವ ಘಟನೆ ವಿಜಯಪುರದ (Crime) ಜಾಧವ ನಗರದಲ್ಲಿ ನಡೆದಿದೆ.

ಜಾಧವ ನಗರದ ಅಂಗನವಾಡಿ ಕಾರ್ಯಕರ್ತೆ ಅಕ್ಕೂಬಾಯಿ ರಾಠೋಡ ಎಂಬುವವರ ತಾಳಿ ಚೈನ್ ಕದ್ದಿದ್ದ ಖದೀಮರು, ಕೆಟಿಎಂ ಬೈಕ್ ಮೇಲೆ ಇಬ್ಬರು ಕಳ್ಳರು ಬಂದು ಕೃತ್ಯ ನಡೆಸಿದ್ದು, 40 ಗ್ರಾಂ ತಾಳಿಚೈನ್ ಕದ್ದು ಹೋಗುತ್ತಿದ್ದ ವೇಳೆ ಜನರು ಬೆನ್ನಟ್ಟಿದ್ದಾರೆ.

ತಪ್ಪಿಸಿಕೊಳ್ಳಲು ಬೈಕ್ ಸ್ಪೀಡ್ ಓಡಿಸುತ್ತಿದ್ದಾಗ, ನಾಗಠಾಣ ಗ್ರಾಮದಲ್ಲಿ ಮತ್ತೊಂದು ಬೈಕ್ ಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಬೆನ್ನಟ್ಟಿ ಬಂದು ಇಬ್ಬರು ಕಳ್ಳರನ್ನು ಸ್ಥಳೀಯರು ಹಿಡಿದಿದ್ದದಾರೆ.

ಬೈಕ್ ಮೇಲೆ ಬಿದ್ದು ಕಳ್ಳರಿಗೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಮಾಹಿತಿ ದೊರೆತಿದೆ.

ಈ ಘಟನೆಯು ವಿಜಯಪುರ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!