- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಆರ್.ಕೆ.ಎಮ್ ಆಸ್ಪತ್ರೆಯು ವಿಜಯಪುರದ ಜನತೆಗೆ ವರದಾನ; ಬಿ.ಎಸ್. ಯಡಿಯೂರಪ್ಪ

ಆರ್.ಕೆ.ಎಮ್ ಆಸ್ಪತ್ರೆಯು ವಿಜಯಪುರದ ಜನತೆಗೆ ವರದಾನ; ಬಿ.ಎಸ್. ಯಡಿಯೂರಪ್ಪ

ವಿಜಯಪುರ: ನಗರದ (Vijayapura) ಪ್ರತಿಷ್ಠಿತ  ಆರ್.ಕೆ. ಎಮ್ ಆಸ್ಪತ್ರೆಯಲ್ಲಿ (RKM Hospital) ನೂತನವಾಗಿ ನಿರ್ಮಿಸಿದ ಸ್ರ್ತೀ ರೋಗ ಮತ್ತು ಪ್ರಸೂತಿ ವಿಭಾಗದ ಶಸ್ತ್ರ ಚಿಕಿತ್ಸಾಗಾರ ಹಾಗೂ ಚಿಕ್ಕ ಮಕ್ಕಳ ತೀವ್ರ ನಿಗಾ ಘಟಕವನ್ನು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು (BSY) ಲೋಕಾರ್ಪಣೆ ಗೊಳಿಸಿದರು.

ನಂತರ ಮಾತನಾಡಿದ ಬಿಎಸ್ ವೈ ಆರ್.ಕೆ.ಎಮ್ (RKM Hospital) ಸಂಸ್ಥೆಯು ಮಾಡುತ್ತಿರುವ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು.

More Read: ದೊಡ್ಡ ಅಂತರದಿಂದ ಗೆಲ್ಲುತ್ತೇವೆ. ವಿಶ್ವಾಸ ವ್ಯಕ್ತಪಡಿಸಿದ ಮಾಜಿ ಸಿಎಂ ಬಿ ಎಸ್ ವೈ

ಈ ಭಾಗದಲ್ಲಿ ವೈದ್ಯರ ಹಾಗೂ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳ ಕೊರತೆಯನ್ನು ನೀಗಿಸುವಲ್ಲಿ ಸಂಸ್ಥೆಯ ಕಾರ್ಯ ಪ್ರಶಂಸನೀಯ. ವಿಜಯಪುರದ ಜನತೆಗೆ ಇದು ವರದಾನ. ಈ ಕಾರ್ಯದಲ್ಲಿ ಭಗವಂತನ ಕೃಪೆ ಸಂಸ್ಥೆಯ ಮೇಲಿರಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ  ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವರಾದ ಗೋವಿಂದ್ ಕಾರಜೋಳ, ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಡಾ॥ ಮುರುಗೇಶ ಆರ್ ನಿರಾಣಿ, ವಿಧಾನ ಪರಿಷತ್ ಸದಸ್ಯರಾದ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಮಾಜಿ ಸಚಿವರಾದ ಅಪ್ಪಾಸಾಬ ಪಟ್ಟಣಶೆಟ್ಟಿ ಮುಖಂಡರಾದ ಸುರೇಶ ಬಿರಾದಾರ, 2022 ರ ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿಗಳಾದ ಹನಮಂತ ಆರ್ ನಿರಾಣಿ, ಅರುಣ್ ಶಹಾಪುರ್, ಸಂಜೀವ ಕರ್ಪೂರಮಠ, ಆರ್. ಕೆ.ಎಮ್ ಆಸ್ಪತ್ರೆಯ ಅಧ್ಯಕ್ಷರಾದ ಶಂಭುಲಿಂಗಯ್ಯ ಕರ್ಪೂರಮಠ ಹಾಗೂ ಸಮಸ್ತ  ಸಿಬ್ಬಂದಿಗಳು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!