- Advertisement -Newspaper WordPress Theme
ಹೋರಾಟ ವೀರರುಆಂಗ್ಲರ ಆಪರ್ ದಿಕ್ಕರಿಸಿ, ಸ್ವಾಭಿಮಾನ ಮೆರೆದಿದ್ದ ರೇವಣಸಿದ್ದಯ್ಯನವರು

ಆಂಗ್ಲರ ಆಪರ್ ದಿಕ್ಕರಿಸಿ, ಸ್ವಾಭಿಮಾನ ಮೆರೆದಿದ್ದ ರೇವಣಸಿದ್ದಯ್ಯನವರು

ಅದು ೧೯೩೨ ರ ಸಮಯ, ದೇಶಾದ್ಯಂತ ಸ್ವಾತಂತ್ರ್ಯದ ಕಿಚ್ಚು ಹೆಚ್ಚುತ್ತಲೇ ಇತ್ತು. ಬ್ರೀಟಿಷರನ್ನು ಬಗ್ಗು ಬಡಿದು, ತಾಯಿ ಭಾರತ ಮಾತೆಯನ್ನು ದಾಸ್ಯದಿಂದ ಮುಕ್ತಗೊಳಿಸಬೇಕು, ನಾವು ನಮ್ಮ ಸ್ವಾತಂತ್ರ್ಯ ಪಡೇದೇ ತೀರಬೇಕು ಎನ್ನುವ ತವಕ ಪ್ರಮುಖ ಹೋರಾಟಗಾರರ ಮನದಲ್ಲಿ ಮನೆ ಮಾಡುತ್ತಿತ್ತು. ಅಂತಹ ಸಂದರ್ಭದಲ್ಲಿ ಭಾರತೀಯ ಜನತೆಯಲ್ಲಿ ಸ್ವಾತಂತ್ರ್ಯದ ಬಗ್ಗೆ ಎಚ್ಚರಿಸಲು ಅಂದಿನ ಬಿಜಾಪುರ ಪಟ್ಟಣದ ಲಕ್ಷ್ಮೀ ಚಿತ್ರಮಂದಿರದ ಎದುರುಗಡೆ ಸ್ವಾತಂತ್ರ್ಯ ಹೋರಾಟಗಾರ ಮುರುಳಾರಾಧ್ಯ ಶಾಸ್ತ್ರಿಯವರು ಭಾಷಣ ಮಾಡಿದ್ದರಿಂದ ಕಾಯ್ದೆ ಭಂಗ ಮಾಡಿರುವ ಆರೋಪದ ಮೇಲೆ ಬ್ರಿಟಿಷರು ಶಾಸ್ತ್ರಿಯವರನ್ನ ಗಡಿಪಾರು ಮಾಡುತ್ತಾರೆ. ಸೂಕ್ಷ್ಮ ದೃಷ್ಠಿಯಿಂದ ಈ ಕ್ಷಣಗಳನ್ನು ಗಮನಿಸುತ್ತಿದ್ದ ವಿಜಯಪುರ ಜಿಲ್ಲೆಯ ಹೋರಾಟಗಾರ ನೊರ್ವ ಬ್ರಿಟಿಷರ ಈ ನಿರ್ಧಾರಕ್ಕೆ ದಿಕ್ಕಾರ ಕೂಗುತ್ತಾ, ಬ್ರಿಟಿಷ್ ಸರಕಾರದ ವಿರುದ್ಧ ಬುಲೆಟಿನ್ ಪ್ರತಿಗಳನ್ನು ಲಕ್ಷ್ಮೀ ಚಿತ್ರಮಂದಿರದಲ್ಲಿ ಚಿತ್ರ ನೋಡಿ ಬರುವ ಪ್ರೇಕ್ಷಕರಿಗೆ ಹಂಚುತ್ತಾ ತನ್ನ ಆಕ್ರೋಶ ವ್ಯಕ್ತಪಡಿಸುತ್ತಾನೆ. ಆಂಗ್ಲರ ದುರ್ನೀತಿಗಳ ವಿರುದ್ಧ ಸಿಡಿದೆದ್ದ ಹೋರಾಟಗಾರ ಬೇರೆ ಯಾರೂ ಅಲ್ಲ ಅವರೇ ನಮ್ಮ ರೇವಣಸಿದ್ದಯ್ಯ ಲದ್ದಿಮಠರು (Freedom Fighter Revanasiddhayya).

ರೇವಣಸಿದ್ದಯ್ಯ ಲದ್ದಿಮಠರು (Freedom Fighter Revanasiddhayya) ಮೂಲತಹ ಇಂದಿನ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನವರು. 19 ಅಕ್ಟೋಬರ್ 1910ರಲ್ಲಿ ಜನಿಸಿದ ರೇವಣಸಿದ್ದಯ್ಯನವರು ತಮ್ಮ ಬಾಲ್ಯದಿಂದಲೂ ದೆಶಭಕ್ತಿಯನ್ನು ರೂಡಿಸಿಕೊಂಡು ಬೆಳೆದವರು. ಜಿಲ್ಲೆ ಸೇರಿದಂತೆ ನಾಡಿನ ಮೂಲೆಮೂಲೆಗಳಿಗೆ ಸಂಚರಿಸಿ, ಸಾವಿರಾರು ಯುವಕರು ಸ್ವಾತಂತ್ರ್ಯದಲ್ಲಿ ಪಾಲ್ಗೊಂಳ್ಳುವಂತೆ ಮಾಡಿದ ಧೀರ ಈ ರೇವಣಸಿದ್ದಯ್ಯನವರು. ಯುವಕನಿರುವಾಗಲೇ ಭಾರತದ ದಾಸ್ಯತ್ವದ ಬಗ್ಗೆ ಅರಿತುಕೊಂಡ ಲದ್ಧಿಮಠರು, ತಮ್ಮ ಅಂತರಾಳದಲ್ಲಿಯೇ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡು, ದೇಶದ ಸ್ವಾತಂತ್ರ್ಯಕ್ಕಾಗಿ ಪಣ ತೊಡುತ್ತಾರೆ. ಆಂಗ್ಲರನ್ನು ಬಗ್ಗು ಬಡಿದು ನವಭಾರತ ನಿರ್ಮಾಣ ಮಾಡಬೇಕೆನ್ನುವ ಕನಸು ಅವರನ್ನು ಇನ್ನಷ್ಟು ಪುಟಿದೇಳುವಂತೆ ಮಾಡುತ್ತದೆ. ಜೀವನದುದ್ದಕ್ಕೂ ಮಹಾತ್ಮ ಗಾಂಧಿಜಿಯ ಸತ್ಯ, ಶಾಂತಿ, ಅಹಿಂಸೆ ಗಳ ಆದರ್ಶಗಳನ್ನು ಅಳವಡಿಸಿಕೊಂಡು ಬಾಳಿದ ಅವರ ಬದುಕು ಒಂದು ರೋಚಕವೇ ಸರಿ.

ವಿಜಯಪುರದ ವೀರ. ದೇಶಮುಖ

ಬ್ರೀಟಿಷರ ದಬ್ಬಾಳಿಕೆಯ ಕ್ರೂರ ನಡತೆಗೆ ರೇವಣಸಿದ್ದಯ್ಯನವರು ಹಲವಾರು ಬಾರಿ ಸಿಲುಕಿ, ಶೋಷಣೆಯ ಸೆರೆಯಾಳಾಗಿ ಬದುಕು ಸೆಣೆಸಿದ್ದಾರೆ. ಅಂದು ಆರಂಭವಾಗಿದ್ದ ಅಸಹಕಾರ ಚಳುವಳಿಯ ಹೋರಾಟದಲ್ಲಿ ಪಾಲ್ಗೊಂಡ ಪ್ರಮುಖರಲ್ಲಿ ಲದ್ದಿಮಠರು ಒಬ್ಬರಾಗಿದ್ದಾರೆ. ಅಸಹಕಾರ ಚಳುವಳಿಯ ಕಾನೂಕಿನ ಕಟ್ಟಳೆಯನ್ನು ಮುರಿದು, ಆಂಗ್ಲರ ಲಾಠಿಯಿಂದ ಪೆಟ್ಟಿಗೆ ಬೆದರದೆ, ದಿಟ್ಟ ಹೋರಾಟಕ್ಕೆ ಮುನ್ನುಗ್ಗಿ ನಡೆಸಿದ ಅವರ ಹೋರಾಟದ ಸಾಹಸ ಪ್ರತಿಯೊಬ್ಬ ಭಾರತೀಯನ ಮೈ ರೋಮಾಂಚನಗೊಳಿಸುತ್ತದೆ. 1932 ರಲ್ಲಿ ವಿಜಯಪುರ ಜಿಲ್ಲೆಯ ಅಲಿಯಾಬಾದ ಗ್ರಾಮದಲ್ಲಿ ಸಿಂದಿ ಗಿಡ ಕಡಿದು, ಪಿಕೇಟಿಂಗ ಮಾಡಿದ ಪರೀಣಾಮ ಪೊಲೀಸರು ಇವರನ್ನು ಬಂಧಿಸಿ, 4ತಿಂಗಳ ಜೈಲು ಶಿಕ್ಷೆ 100 ರೂಪಾಯಿ ದಂಡ ವಿಧಿಸಿ ವಿಜಯಪುರ ಜೈಲಿಗೆ ಕಳುಹಿಸ ಲಾಗುತ್ತದೆ. 4 ತಿಂಗಳ ಶಿಕ್ಷೆ ಮುಗಿಯುತ್ತದೆ, ಇವರಿಗೆ 100 ರೂಪಾಯಿ ದಂಡ ಕಟ್ಟಲು ಆಗದೇ ಇದ್ದಾಗ ಮತ್ತೇ ಇವರಿಗೆ ಹೆಚ್ಚುವರಿ ಶಿಕ್ಷೆಯಾಗಿ ಒಂದು ವರ್ಷ ಇಸಾಪೂರ ಜೈಲಿಗೆ ಕಳುಹಿಸಲಾಗುತ್ತದೆ. ಇಲ್ಲಿ ಅವರಿಗೆ ಮೋರೆ ಹನುಮಂತರಾಯರ ಸ್ನೇಹ ಬೆಳೆಯುತ್ತದೆ, ಜೈಲಿನಲ್ಲಿ ಮತ್ತೀತರ ದೇಶಭಕ್ತರ ಪರಿಚಯ ಆಗಿದ್ದರಿಂದ ಲದ್ದಿಮಠರ ಹೋರಾಟಕ್ಕೆ ಬಲ ಬಂದಂತಾಗುತ್ತದೆ. ಕ್ಷಮೆ ಕೇಳಿದರೆ ಬಿಡುವುದಾಗಿ ಆಂಗ್ಲರು ನೀಡಿದ್ದ ಆಪರ್ ನ್ನು ದಿಕ್ಕರಿಸಿ, ಸೆರೆವಾಸ ಅನುಭವಿಸಿ ಸ್ವಾಭಿಮಾನ ಮೆರೆದ ಕೀರ್ತಿ ರೇವಣಸಿದ್ದಯ್ಯನವರಿಗೆ ಸಲ್ಲುತ್ತದೆ.

ಈ ಸುದ್ದಿಯನ್ನೂ ನೋಡಿ… ವೀರ ಯೋಧನಿಗೆ ಪೊಲೀಸ್ ಗೌರವ

1944 ರಲ್ಲಿ ಲದ್ದಿಮಠರು ಶಾಂತಿಗಾಗಿ ಸತತ ಇಪ್ಪತ್ತು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಕೈಗೊಂಡು ದೇಶಕ್ಕೆ ಶಾಂತಿ ಸಂದೇಶ ಸಾರಿದರು. ಕೌನ್ಸಿಲ್ ಬಹಿಷ್ಕಾರ ಚಳುವಳಿಯಲ್ಲಿ ಭಾಗವಹಿಸಿ, ಉಜ್ವಲ ದೇಶಭಕ್ತರಾಗಿ ಬಾಳಿ ಬದುಕಿದರು. ದೇಶದ ಪ್ರಗತಿಗಾಗಿ ರಾತ್ರಿ ಹಗಲೆನ್ನದೇ ಹಳ್ಳಿ-ಹಳ್ಳಿಗಳಿಗೆ ಸಂಚರಿಸಿ, ಪರದೇಶಿಯ ಬಟ್ಟೆಗಳನ್ನು ಸುಟ್ಟುಹಾಕಿ, ಸ್ವದೇಶಿಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಅಷ್ಟೇ ಅಲ್ಲದೇ ಸಮಾನತೆಯ ಸಮಾಜ ನಿರ್ಮಿಸುವಲ್ಲಿಯೂ ಕೂಡಾ ಲದ್ದಿಮಠರ ಕಾರ್ಯ ಅನನ್ಯ. ಹಗಲಿರುಳೆನ್ನದೇ ಶ್ರಮಿಸಿ 1947 ಆಗಸ್ಟ್ 15ರಂದು ಸ್ವಾತಂತ್ರ್ಯ ದೊರಕುವಂತೆ ಮಾಡಿದ ಪ್ರಮುಖ ಹೋರಾಟಗಾರರಲ್ಲಿ ಇವರು ಒಬ್ಬರಾಗಿದ್ದಾರೆ ಎನ್ನುವುದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯ. ಜೀವನುದ್ದಕ್ಕೂ ಹೋರಾಟ ನಡೆಸಿದ ರೇವಣಸಿದ್ದಯ್ಯನವರು ದಶಕದ ಹಿಂದೆ ಅಂದರೆ, 05 ನವೆಂಬರ್ 2007 ರಲ್ಲಿ ಮರಣ ಹೊಂದಿದರು. ಅವರು ಇಂದು ನಮ್ಮಿಂದ ಅಗಲಿದರು ಕೂಡಾ ಅವರ ಹೋರಾಟದ ಬದುಕು ಇಂದಿಗೂ ಪ್ರತಿಯೊಬ್ಬ ದೇಶಾಭಿಮಾನಿಯ ಮನದಲ್ಲಿ ಹೆಜ್ಜೆಯ ಗುರುತಾಗಿದ್ದಾರೆ.

ಇವರ ಹೋರಾಟ, ದೇಶಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿ ಸರಕಾರ ಹಾಗೂ ಹಲವಾರು ಸಂಘ ಸಂಸ್ಥೆಯವರು ಅನೇಕ ಪ್ರಶಸ್ತಿಗಳನ್ನು ನೀಡಿ, ಗೌರವ ಸಮರ್ಪಿಸಿದ್ದಾರೆ. ರೇವಣಸಿದ್ದಯ್ಯ (Freedom Fighter Revanasiddhayya)ಮಡದಿ ಸಂಗಮ್ಮ ದಂಪತಿಗಳ ಸಂಸಾರಿಕ ಬದುಕಿಗೆ ಸುಪುತ್ರರಾದ ಗುರುಶಾಂತಯ್ಯ, ಶಿವಶಂಕರಯ್ಯ, ಅರವಿಂದ ಸುಪುತ್ರಿಯರಾದ ನೀಲಮ್ಮ, ಪ್ರೇಮಾ ಸಾಕ್ಷಿಯಾಗಿದ್ದಾರೆ. ಸದ್ಯ ಇವರ ಕುಟುಂಬಸ್ಥರು ಮುದ್ದೇಬಿಹಾಳ ಪಟ್ಟಣ, ಬೆಂಗಳೂರು ನಗರದಲ್ಲಿ ವಾಸ ಮಾಡುತ್ತಿದ್ದಾರೆ. ತಂದೆಯ ತತ್ವಾದರ್ಶಗಳನ್ನು ಮಕ್ಕಳು ಪಾಲನೆ ಮಾಡುತ್ತಾ ಜೀವನ ಸಾಗಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.

— ಗಡಿನಾಡ ಕ್ರಾಂತಿ ಟೀಮ್

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!