- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಗುಡುಗು ಸಹಿತ ಮಳೆ. ಸಿಡಿಲಿಗೆ 14 ಕುರಿ ಬಲಿ

ಗುಡುಗು ಸಹಿತ ಮಳೆ. ಸಿಡಿಲಿಗೆ 14 ಕುರಿ ಬಲಿ

ವಿಜಯಪುರ: ಜಿಲ್ಲೆಯಾದ್ಯಂತ ವಿವಿಧೆಡೆ ಗುಡುಗು ಸಹಿತ ಮಳೆ ಬಂದಿದ್ದು, ಸಿಡಿಲು ಬಡಿದು‌ ಒಟ್ಟು 14 ಕುರಿಗಳ ಸಾವನ್ನಪ್ಪಿದ್ದು, ಇನ್ನೂ 6 ಕುರಿಗಳು ಚಿಂತಾಜನಕ ಸ್ಥಿತಿ ತಲುಪಿವೆ.

ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮದ ಹೊರ ಭಾಗದಲ್ಲಿ ಘಟನೆ ಉಂಟಾಗಿದ್ದು, ಕುರಿಗಳನ್ನು ಮೇಯಿಸೋವಾಗ ಸಿಡಿಲು ಬಡಿದು‌ ದೊಂಡಿಬಾ ಮಲ್ಲಾರಿ ಶೇಂಡ್ಗೆ ಎಂಬುವವರಿಗೆ ಸೇರಿದ  ಒಟ್ಟು 14 ಕುರಿಗಳು ಸಾವನ್ನಪ್ಪಿವೆ.

ಮೂಲತಃ ವಿಜಯಪುರ ತಾಲೂಕಿನ ಅಲಿಯಾಬಾದ ಗ್ರಾಮದ ದೊಂಡಿಬಾ ಅವರು, ಕುರಿಗಳನ್ನು‌ ಮೇಯಿಸಲು ಮಸೂತಿ ಗ್ರಾಮದ ಬಳಿ ಬಂದಿದ್ದಾಗ ಈ ದುರ್ಘಟನೆ ನಡೆದಿದೆ. ಅಪಾರ ಹಾನಿಗೊಳಗಾಗಿರುವ ನನಗೆ ಸರಕಾರರ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಈ ಘಟನೆಯು ಎನ್.ಟಿ.ಪಿ.ಸಿ ಪೊಲೀಸ್ ಠಾಣಾ‌ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನಾಸ್ಥಳಕ್ಕೆ ಪಶುವೈದ್ಯ ಡಾ. ವಾಸುರೆಡ್ಡಿ , ಕೂಡಗಿ ಎನ್ಟಿಪಿಸಿ ಪಿಎಸ್ಐ ದ್ಯಾವಪ್ಪ ಸಂಗಾಪುರ, ಮಸೂತಿ ಗ್ರಾ.ಪಂ ಅಧ್ಯಕ್ಷ ಸಂತೋಷ ಗಣಾಚಾರಿ ಹಾಗೂ ಗ್ರಾಮ ಸಹಾಯಕ ಸಿದ್ದು ಪೂಜಾರಿ ಭೇಟಿ ನೀಡಿ ಪರಿಶಿಲಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!