- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಮಲೆನಾಡಾದ ಬಿಸಿಲೂರು ವಿಜಯಪುರ

ಮಲೆನಾಡಾದ ಬಿಸಿಲೂರು ವಿಜಯಪುರ

ವಿಜಯಪುರ: ಬರದನಾಡು, ಬಿಸಿಲೂರು ವಿಜಯಪುರ ಈಗ ಅಕ್ಷರಶ ಮಲೆನಾಡಾಗಿದೆ. ವಿಜಯಪುರ ನಗರದಲ್ಲಿ ವರುಣನ ಅಬ್ಬರ ಮುಂದುವರೆದಿದ್ದು, ಜನಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಕಳೆದ ಸಂಜೆಯಿಂದ ಪ್ರಾರಂಭವಾಗಿರುವ ಮಳೆ ಮುಂಜಾನೆಯೂ ಮುಂದುವರೆದಿದ್ದು ನಗರದಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಕಟ್ ಮಾಡಲಾಗಿದೆ. ನಗರದಲ್ಲಿ ರಾತ್ರಿಯಿಡಿ ಪವರ್ ಕಟ್ ಆಗಿದ್ದು ಮುಂಜಾನೆಯು ವಿದ್ಯುತ್ ಬಂದಿರಲಿಲ್ಲ. ಮಳೆಯಿಂದಾಗಿ ವಿದ್ಯಾರ್ಥಿಗಳು ಶಾಲೆಗೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನೂ ಪ್ರತಿದಿನ ವಾಕಿಂಗ್ ಗೆ ಹೋಗ್ತಿದ್ದ ವಾಯುವಿಹಾರಿಗಳು ವಾಕಿಂಗ್ ಹೋಗದೆ ಮನೆಯಲ್ಲಿ ಕುಳಿತಿದ್ದಾರೆ. ರಸ್ತೆ ತುಂಬೆಲ್ಲಾ ನೀರು ಹರಿಯುತ್ತಿದ್ದು ಹಾಲು, ದಿನಸಿ ತರಲು ಮಳೆ ಅಡ್ಡಿಯಾಗಿರೊದ್ರಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ.

ವಾತಾವರಣವು ಉಲ್ಲಾಸಮಯ ವಾಗಿದ್ದು, ಮನೆಯಲ್ಲಿ ಅಟ್ಟಣಿಕೆ ಏರಿದ್ದ ರೇನ್ ಕೋರ್ಟ್ ಛತ್ರಿ ಹೊರಬಂದಿವೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!