- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯದುಷ್ಕರ್ಮಿಗಳಿಗೆ ಶಿಕ್ಷೆ ನೀಡಿ. ಬಸವಸೈನ್ಯ ಆಗ್ರಹ

ದುಷ್ಕರ್ಮಿಗಳಿಗೆ ಶಿಕ್ಷೆ ನೀಡಿ. ಬಸವಸೈನ್ಯ ಆಗ್ರಹ

ಬಸವನಬಾಗೇವಾಡಿ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿ ಗ್ರಾಮದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಕಿಡಗೇಡಿಗಳನ್ನು ಬಂಧಿಸಿ,ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಬಸವಸೈನ್ಯ ಹಾಗೂ ಸ್ವಾಮೀಜಿಯವರ ನೇತೃತ್ವದಲ್ಲಿ ಗ್ರೇಡ್ 2ತಹಶೀಲ್ದಾರ ಪಿ.ಪಿ. ಪವಾರ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಎಂಇಎಸ್  ಶಿವಸೇನೆ ಪುಂಡರಿಗೆ ಕ್ಷಮೆ ಇಲ್ಲಾ. ಶಾಸಕ ಯತ್ನಾಳ

ಬಸವಣ್ಣನವರ ಭಾವಚಿತ್ರಕ್ಕೆ ಅಪಮಾನ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದ್ದು ಇಡೀ ಮನುಕುಲವೇ ತಲೆ ತಗ್ಗಿಸುವ ಹಾಗೆ ಆಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿಗೆ ಅಪಮಾನ ಮಾಡುತ್ತಿರುವವರ ವಿರುದ್ಧ ರಾಜ್ಯ ಸರ್ಕಾರ ಉಗ್ರ ಶಿಕ್ಷೆಗೆ ಒಳಪಡಿಸಿ ಕಾಯಂ ಜೈಲಿನಲ್ಲಿರಿಸಬೇಕು ವಚನದ ಮೂಲಕ ಕ್ರಾಂತಿಗೈದು ಸಮಾನತೆಯ ಹರಿಕಾರ ವಿಶ್ವಗುರು ಬಸವಣ್ಣನವರ ತತ್ವ ಆಚಾರವನ್ನು ಇಡೀ ಜಗತ್ತೇ ಒಪ್ಪಿಕೊಂಡಿದೆ ಅಂತವರ ಭಾವಚಿತ್ರಕ್ಕೆ ಅಪಮಾನ ಮಾಡುವುದು ಖೇದಕರ ಸಂಗತಿಯಾಗಿದೆ. ಈ ಘಟನೆಗೆ ಸಂಬಂಧಿಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆ ನೀಡಬೇಕು ಹಾಗೂ ರಾಜ್ಯದಲ್ಲಿರುವ ಮಹಾನ್ ನಾಯಕರ ಪುತ್ಥಳಿಗೆ ಸೂಕ್ತ ಬಂದೋಬಸ್ತಿ ನೀಡುವ ನಿಟ್ಟಿನಲ್ಲಿ ಸಿಸಿ ಕ್ಯಾಮರಗಳನ್ನು ಅಳವಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಮಸಬಿನಾಳ ವಿರಕ್ತಮಠದ ಸಿದ್ಧರಾಮ ಸ್ವಾಮೀಜಿ, ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಸಂಗಮೇಶ ಓಲೇಕಾರ ಮಾತನಾಡಿದರು.

ಶಂಕರಾಚಾರ್ಯರು ಸ್ಥಾಪಿಸಿದ ಶ್ರೀ ಚಕ್ರವಿರುವ ಏಕೈಕ ದೇವಸ್ಥಾನ

ಈ ಸಂದರ್ಭದಲ್ಲಿ ಸುನೀಲಗೌಡ ಚಿಕ್ಕೊಂಡ, ಶ್ರೀಕಾಂತ ಕೊಟ್ರಶೆಟ್ಟಿ, ಪ್ರಶಾಂತ ಮುಂಜಾನೆ, ಮಂಜು ಜಾಲಗೇರಿ, ಜಟ್ಟಿಂಗರಾಯ ಮಾಲಗಾರ, ಗುರುರಾಜ ವಂದಾಲ, ಮಹೇಶ ಜಗದಾಳಿ, ವಿರೇಶ ಗಬ್ಬೂರ, ಅರವಿಂದ ಗೊಳಸಂಗಿ, ವಿನೋದ ಗಬ್ಬೂರ, ಪವನ ರಾಠೋಡ, ರೋಹಿತ ಗಾಯಕವಾಡ, ಸಚಿನ ಗಾಯಕವಾಡ, ದಶರಥ ಗುಡಿಮನಿ, ಚೇತನ ಜಗತಾಪ, ವಿನಯ ರಗಟಿ, ಶಂಕರಸಿಂಗ ರಜಪೂತ, ಅರುಣ ಗೊಳಸಂಗಿ, ಮಂಜು ಕುಂಟೋಜಿ, ಮಂಜು ಹಳ್ಳಿ, ಅಮೀತ ಘೋಪರ್ಡೆ ಸೇರಿದಂತೆ ಇತರರು ಇದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!