- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಶಾಸಕ ಯತ್ನಾಳ ಉದ್ಘಾಟಿಸಿದ್ದ ಈಜುಕೊಳದ ಶುಲ್ಕ ವಿಚಾರಕ್ಕೆ ಪರ-ವಿರೋಧ...!

ಶಾಸಕ ಯತ್ನಾಳ ಉದ್ಘಾಟಿಸಿದ್ದ ಈಜುಕೊಳದ ಶುಲ್ಕ ವಿಚಾರಕ್ಕೆ ಪರ-ವಿರೋಧ…!

ವಿಜಯಪುರ: ವಿಜಯಪುರ ನಗರದ ಕನಕದಾಸ ಬಡಾವಣೆಯಲ್ಲಿರುವ ಒಳಾಂಗಣ ಈಜುಕೊಳ ಉದ್ಘಾಟನೆಗೊಂದು ಕೇವಲ ಒಂದು ತಿಂಗಳಲ್ಲಿಯೇ  ಶುಲ್ಕ ವಿಚಾರವಾಗಿ ಪರ ವಿರೋಧ ಇದೀಗ ಶುರುವಾಗಿದೆ.

ನಗರದ ಜನತೆಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ವಿಜಯಪುರ ನಗರದಲ್ಲಿ ಈಜುಕೊಳ ನಿರ್ಮಾಣ ಮಾಡಲಾಗಿತ್ತು. 1994 ರಿಂದಲೂ ಈ ಭಾಗದಲ್ಲಿ ಒಳಾಂಗಣ ಈಜುಕೊಳ ಮಾಡಬೇಕೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಯತ್ನ ನಡೆಸಿದ್ದರು. ಆದರೆ ಕೊನೆಗೂ ಕಳೆದ ತಿಂಗಳು ಏಪ್ರಿಲ್ 18 ರಂದು ಖುದ್ದು ಶಾಸಕ ಯತ್ನಾಳ್ ಅವರೇ ಈಜಾಡುವ ಮೂಲಕ ಈಜುಕೊಳ ಉದ್ಘಾಟನೆ ಮಾಡಿರುವುದು ತಮಗೆಲ್ಲಾ ಗೊತ್ತಿರುವ ಮಾಹಿತಿ. ಆದರೆ, ಈಜುಕೊಳ ಆರಂಭವಾಗಿ ಒಂದು ತಿಂಗಳ ಪೂರ್ಣವಾಗಿಲ್ಲ. ಈಗಲೇ ವಿವಾದ ಆರಂಭವಾಗಿದೆ. ಜೊತೆಗೆ ಮೂಲ ಸೌಕರ್ಯ ಇಲ್ಲ ಎಂಬ ಆರೋಪ ಕೂಡಾ ಕೇಳಿ ಬಂದಿದೆ.

ಇಲ್ಲಿ ಸಾಮಾನ್ಯ ಜನರಿಗೆ ತಿಂಗಳಿಗೆ 1200 ರೂಪಾಯಿ ಪಾಸ್ ದರ ನಿಗಧಿ ಮಾಡಲಾಗಿದೆ. ಅದೇ ಸರ್ಕಾರಿ ನೌಕರರಿಗೆ ಕೇವಲ 600 ರೂಪಾಯಿ ಮಾಡಲಾಗಿದೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ನಮಗ್ಯಾಕೆ 1200 ಸರಕಾರಿ ನೌಕರರಿಗ್ಯಾಕೆ 600 ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ನಮಗೂ ಕೂಡಾ 600 ರೂಪಾಯಿ ಶುಲ್ಕ ಮಾಡುವ ಮನವಿ ಮಾಡಿದ್ದಾರೆ.

ಈ ಶುಲ್ಕ ಬಗ್ಗೆ ಅಧಿಕಾರಿಗಳನ್ನ ವಿಚಾರಿಸಿದಾಗ, ಸರಕಾರಿ ನೌಕರರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಈ ರೀತಿ ಶುಲ್ಕ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಈಜುಕೊಳ ಆರಂಭವಾದಾಗಿನಿಂದ ಸುಮಾರು 500 ಜನ ಪಾಸ್ ಪಡೆದಿದ್ದಾರೆ. ಅದನ್ನ ಬಿಟ್ಟು ಗಂಟೆಗೆ 100 ರೂಪಾಯಿ ನೀಡಿ ಟಿಕೆಟ್ ಪಡೆದು ಸಹ ಜನ ಬರುತ್ತಾರೆ. ಅಂದಾಜು ಪ್ರತಿದಿನ 8000 ಸಾವಿರ ರೂಪಾಯಿ ಆದಾಯ ಬರುತ್ತದೆ. ಇಷ್ಟಾದರೂ ಮೂಲ ಸೌಲಭ್ಯಗಳು ಹಾಗೂ ಸ್ವಚ್ಚತೆ ಇಲ್ಲ ಅನ್ನೋ ಆರೋಪ ಕೇಳಿ ಬಂದಿದೆ.

ಈಜುಕೊಳಕ್ಕೆ ಬರುವ ಜನ ಸರಿಯಾಗಿ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಹೀಗಾಗಿ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!