ಬಸವನಬಾಗೇವಾಡಿ: ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ಮೈಸೂರು (Pratibha Parishat) ಇವರು ರಾಜ್ಯಮಟ್ಟದ ಉತ್ತಮ ಸಮೂಹ ಸಂಪನ್ಮೂಲ ವ್ಯಕ್ತಿಗಳಿಗೆ ಕೊಡಮಾಡಲಾಗುವ 2022 ನೇ ಸಾಲಿನ ಶಿಕ್ಷಣ ಸಾರಥಿ ಪ್ರಶಸ್ತಿಗೆ (Shikshana Sarathi Award), ತಾಲೂಕಿನ ಜಾಯವಾಡಗಿ ಕ್ಲಸ್ಟರಿನ ಸಿ ಆರ್ ಪಿ ಆಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿ ಸಿದ್ಧಲಿಂಗಮ್ಮ. ಬ. ಚೌಧರಿ (Sidhalingamma Choudhari) ಇವರು ಭಾಜನರಾಗಿದ್ದಾರೆ.
ಇದೇ ಜುಲೈ ತಿಂಗಳು ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಇವರ ಈ ಸಾಧನೆಗೆ ಬಸವನಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಕಚೇರಿಯ ಎಲ್ಲ ಸಿಬ್ಬಂದಿ ವರ್ಗದವರು ಹಾಗೂ ನೌಕರರ ಸಂಘ ಮತ್ತು ಅಖಂಡ ಬಸವನ ಬಾಗೇವಾಡಿ ತಾಲ್ಲೂಕಿನ ಶಿಕ್ಷಕ ಬಳಗದವರು, ವೀರಶೈವ ಲಿಂಗಾಯತ ಹಂಡೆವಜೀರ ಕ್ಷೇಮಾಭಿವೃದ್ಧಿ ಸಂಘ ಜಿಲ್ಲಾ ಘಟಕ ವಿಜಯಪುರ ಮತ್ತು ವೀರಶೈವ ಲಿಂಗಾಯತ ಹಂಡೆವಜೀರ್ ನೌಕರರ ಸಂಘ ವಿಜಯಪುರ ಅಭಿನಂದನೆ ಸಲ್ಲಿಸಿದ್ದಾರೆ.