- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯPFI ಬ್ಯಾನ್…! ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ವಾಗತ

PFI ಬ್ಯಾನ್…! ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ವಾಗತ

ವಿಜಯಪುರ: PFI ಬ್ಯಾನ್ ವಿಚಾರವನ್ನು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ (Basanagouda Patil Yatnal) ಸ್ವಾಗತಿಸಿದ್ದಾರೆ. (PFI Ban)

ವಿಜಯಪುರ ನಗರದಲ್ಲಿ ಪ್ರತಿಕ್ರಿಯಿಸಿದ ಯತ್ನಾಳ್,  ಈ ಪ್ರಧಾನಿಗಳು, ಕೇಂದ್ರ ಗೃಹ ಸಚಿವರು PFI ಬ್ಯಾನ್ ಮಾಡಿದ್ದಾರೆ. ದೇಶ ವಿರೋಧಿ ಚಟುವಟಿಕೆ, ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ PFI ಬ್ಯಾನ್ ಮಾಡಲು ಆಗ್ರಹ ಇತ್ತು. ಇಂದು ನಮ್ಮ ಜನ ನೆಮ್ಮದಿಯಿಂದ ಬದುಕಲು ಐತಿಹಾಸಿಕ ನಿರ್ಣಯ ತೆಗೆದುಕೊಂಡಿದ್ದಾರೆ ಎಂದು ನಿರ್ಧಾರವನ್ನು ಸಮರ್ಥಿಸಿಕೊಂಡರು.

Watch Video:

ಅಲ್ಲದೇ,  ಸಾಕ್ಷ್ಯಾಧಾರ ಸಹಿತವಾಗಿ ಕೇಂದ್ರ ಬ್ಯಾನ್ ಮಾಡಿದೆ. ದೇಶಾಧ್ಯಂತ ದಾಖಲೆ ರೀತಿಯಲ್ಲಿ ರೇಡ್ ಮಾಡಿದ್ದಾರೆ. ಪುರಾವೆಗಳು ಸಿಕ್ಕಿವೆ, ದೇಶ ಒಡೆಯಲು ಸಾವಿರಾರು‌ ಕೋಟಿ ವಿದೇಶದಿಂದ ಬರ್ತಿತ್ತು, ಪಾಕಿಸ್ತಾನ, ಯುಎಇ ಜೊತೆಗೆ PFI ಸಂಬಂಧ ಇತ್ತು ಎಂದು ಆರೋಪಿಸಿದರು.

More Read: ಬಿಜೆಪಿ ಕಾರ್ಯಕರ್ತರ ಜಟಾಪಟಿ

RSS ಬ್ಯಾನ್ ಮಾಡಬೇಕೇಂಬ ಕೂಗಿನ ವಿಚಾರವಾಗಿ ಮಾತನಾಡಿದ ಶಾಸಕ ಬಸನಗೌಡ, RSS ದೇಶಭಕ್ತರ ಸಂಘಟನೆ, ದೇಶದ ಉನ್ನತಸ್ಥಾನದಲ್ಲಿರೋದು RSS ನಿಂದ ಬಂದವರು, ಆರ್ ಎಸ್ ಎಸ್ ಹಿಂಸಾಕೃತ್ಯದಲ್ಲಿ ತೊಡಗಿಲ್ಲ, ಮದ್ದು ಗುಂಡು ಸಂಗ್ರಹಿಸಿಲ್ಲ, ದೇಶವಿರೋಧಿ ಚಟುವಟಿಕೆ ಮಾಡಿಲ್ಲ, ಬೇರೆ ಧರ್ಮದ ಮೇಲೆ ಪ್ರಹಾರ ಮಾಡಿಲ್ಲ ಎಂದು ಹೇಳಿದರು.

RSS ಮೇಲಿದ್ದ ನಿಷೇಧವನ್ನ ಸುಪ್ರೀಂ ಕೋರ್ಟೆ ವಾಪಸ್ ತೆಗೆದುಕೊಂಡಿದೆ. ಐದು ವರ್ಷದಲ್ಲಿ PFI ಯನ್ನ (PFI Ban) ಬುಡದಿಂದ ಕಿತ್ತು ಹಾಕಬೇಕು. ಯಾವ ಹುತ್ತದಿಂದ ಯಾವ ಹಾವು ಬರುತ್ತೊ ಗೊತ್ತಿಲ್ಲ. ಅಧ್ಯಯನ ಮಾಡಿ ಸಂಪೂರ್ಣ ಸರ್ವನಾಶ ಮಾಡಬೇಕೆಂದ ಯತ್ನಾಳ್ ಆಗ್ರಹಿಸಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!