ಬಸವನಬಾಗೇವಾಡಿ: Basavana Bagewadi) ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುವಾಗ ಯಾವುದೇ ರೀತಿ ಆಕರ್ಷಣೆಗೆ ಒಳಗಾಗದೆ ಅಭ್ಯಸಿಸುವುದನ್ನು ಕಲಿವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು (Personality Development Training) ಅರಿತುಕೊಂಡಾಗ ಮಾತ್ರ ಜೀವನದಲ್ಲಿ ಒಳ್ಳೇಯ ರೀತಿಯಿಂದ ಬದುಕಲು ಸಾಧ್ಯ ಎಂದು ಬೆಳಗಾವಿಯ ರಾಣಿ ಚನ್ನಮ್ಮ ವಿವಿ ಸಂಶೋಧನಾರ್ಥಿ ಬಸವರಾಜ ಹಡಪದ (Basavaraj Hadapad) ಹೇಳಿದರು.
ಪಟ್ಟಣದ ಬಿ.ಜಿ.ಎಸ್ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಯುವಕರಿಗಾಗಿ ವ್ಯಕ್ತಿತ್ವ ವಿಕಸನ ತರಬೇತಿಯನ್ನು ಅರಿವು ಯುವ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಪ್ರಾಯೋಗಿಕವಾಗಿ ವ್ಯಕ್ತಿತ್ವ ವಿಕಸನ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ನಿವೇದಿತಾ ಶಾಲೆಯ ಮುಖ್ಯಸ್ಥ ಕಾಶೀನಾಥ ಅವಟಿ ಅವರು ಮಾತನಾಡಿ ಯುವಕರು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಭಾಕರ್ ಖೇಡದ ಅವರು ಮಾತನಾಡಿ ವಿದ್ಯಾರ್ಥಿಗಳು ಒಳ್ಳೆಯ ವಿಚಾರಗಳೊಂದಿಗೆ (Personality Development Training) ಇರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅರಿವು ಯುವ ಕೇಂದ್ರದ ಅಧ್ಯಕ್ಷರಾದ ಸಂಗಮೇಶ ಬಾಗೇವಾಡಿ, ಸದಸ್ಯರಾದ ಸಂತೋಷ, ಶರಣು, ಹಾಗೂ ಪದವಿ ಪೂರ್ವ ಮಹಾವಿದ್ಯಾಲಯದ ಸಿಬ್ಬಂದಿ ವರ್ಗ, ಕಾರ್ಯಕ್ರಮದಲ್ಲಿ ಅರಿವು ಯುವ ಕೇಂದ್ರದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ನಾಗೇಶ ನಾಗೂರ