- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಪ.ಪಂ. 1 ಬಿಜೆಪಿಗೆ 3 ಕಾಂಗ್ರೆಸ್ ಪಾಲು

ಪ.ಪಂ. 1 ಬಿಜೆಪಿಗೆ 3 ಕಾಂಗ್ರೆಸ್ ಪಾಲು

ವಿಜಯಪುರ: ಜಿಲ್ಲೆಯ 6 ಪಟ್ಟಣ ಪಂಚಾಯಿತಿಗಳ 97 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ಹಾಕಿಕೊಳ್ಳುವ ಪಾರುಪತ್ಯ ಸಾಧಿಸಿದೆ.

ಬಿಜೆಪಿ 1 ಹಾಗೂ 2 ಪಟ್ಟಣ ಪಂಚಾಯಿತಿ ಅತಂತ್ರ ಫಲಿತಾಂಶ ಬಂದಿದ್ದು, ಅತಂತ್ರ ಪಟ್ಟಣ ಪಂಚಾಯತಿಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳಲು ಕಾಂಗ್ರೆಸ್ ಹಾಗೂ ಬಿಜೆಪಿ ತೆರೆಮರೆ ಕಾರ್ಯತಂತ್ರ ರೂಪಿಸುತ್ತಿವೆ.

ಸಿಎಂ ಬೊಮ್ಮಾಯಿ ಸೂಚನೆ ಪಾಲಿಸಿದ ವಿಜುಗೌಡ

ಜಿಲ್ಲೆಯ ನಿಡಗುಂದಿ ಪಟ್ಟಣ ಪಂಚಾಯತ 16ಕ್ಷೇತ್ರಗಳ ಪೈಕಿ ಕಾಂಗ್ರೆಸ್ 9, ಬಿಜೆಪಿ 6, ಪಕ್ಷೇತರ1ಕ್ಷೇತ್ರದಲ್ಲಿ ಜಯಗಳಿಸಿದ್ದು, ಈ ಪಂಚಾಯಿತಿಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಸಾಧಿಸಿ ತನ್ನ ವಶಕ್ಕೆ ಪಡೆದುಕೊಂಡಿದೆ.‌ ಮನಗೂಳಿ ಪಟ್ಟಣ ಪಂಚಾಯಿತಿ ಯಲ್ಲಿ ಕಾಂಗ್ರೆಸ್ 4 ಹಾಗೂ ಬಿಜೆಪಿ 12 ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿ ಅಧಿಕಾರದ ಗದ್ದುಗೆ ಹಿಡಿದಿದೆ.

ಬಿಜೆಪಿ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಪ್ರತಿನಿಧಿಸುವ ಮುದ್ದೇಬಿಹಾಳ ವಿಧಾನಸಭೆ ವ್ಯಾಪ್ತಿಯ ನಾಲತವಾಡ ಪಟ್ಟಣ ಪಂಚಾಯತನಲ್ಲಿ ಬಿಜೆಪಿ ಮುಗ್ಗರಿಸಿದೆ. 14 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 9, ಬಿಜೆಪಿ 0, ಜೆಡಿಎಸ್ 1 ಹಾಗೂ ಪಕ್ಷೇತರರು 4 ರಲ್ಲಿ ಜಯಗಳಿಸಿದ್ದು ಕಾಂಗ್ರೆಸ್ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಕೊಲ್ಹಾರ ಪಟ್ಟಣ ಪಂಚಾಯತನ 17 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 11, ಬಿಜೆಪಿ 3, ಎಐಎಂಐಎಂ 2 ಹಾಗೂ ಪಕ್ಷೇತರ 1 ಗೆಲುವು ಸಾಧಿಸಿವೆ. ಇಲ್ಲಿಯೂ ಸಹ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದು ಗದ್ದುಗೆ ಏರಿದೆ.

ಯತ್ನಾಳ್ ಡಬಲ್‌ ಇಂಜಿನ್ ಲೀಡರ್. ಸಿಎಂ ಬೊಮ್ಮಾಯಿ

ದೇವರಹಿಪ್ಪರಗಿ ಪಟ್ಟಣ ಪಂಚಾಯತ 17ಕ್ಷೇತ್ರಗಳ ಪೈಕಿ ಕಾಂಗ್ರೆಸ್ 7, ಬಿಜೆಪಿ 4 ಜೆಡಿಎಸ್ 4ಹಾಗೂ ಪಕ್ಷೇತರರು ಇಬ್ಬರು ಜಯಗಳಿಸಿದ್ದಾರೆ. ಬಿಜೆಪಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಕ್ಷೇತ್ರವಾಗಿದ್ದು ಸ್ಪಷ್ಟ ಬಹುಮತಕ್ಕೆ ಬಿಜೆಪಿ ಜೆಡಿಎಸ್ ಹಾಗೂ ಪಕ್ಷೇತರರನ್ನು ಅವಲಂಬಿಸಿದೆ. ಆದರೆ ಕಾಂಗ್ರೆಸ್ ಗೆ ಜೆಡಿಎಸ್ ಬೆಂಬಲ ನೀಡಿದರೆ ದೇವರ ಹಿಪ್ಪರಗಿಯಲ್ಲಿ  ಕಾಂಗ್ರೆಸ್ ಧ್ವಜ ಹಾರಿಸಬಲ್ಲದು.

ಬಿಜೆಪಿ ಶಾಸಕ ರಮೇಶ ಭೂಸನೂರ ಕ್ಷೇತ್ರ ವ್ಯಾಪ್ತಿಯ ಆಲಮೇಲ ಪಟ್ಟಣ ಪಂಚಾಯತಿಯಲ್ಲಿ 19 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 7, ಬಿಜೆಪಿ 9 ಹಾಗೂ ಪಕ್ಷೇತರರು 3 ಜಯ ಸಾಧಿಸಿದ್ದಾರೆ. ಇಲ್ಲಿ ಪಕ್ಷೇತರರು ಯಾವ ಪಕ್ಷಕ್ಕೆ ಬೆಂಬಲ ನೀಡುತ್ತಾರೆ, ಅವರೇ ಅಧಿಕಾರ ಹಿಡಿಯಲಿದ್ದಾರೆ. ಇಲ್ಲಿ ಪಕ್ಷೇತರರು ಕಿಂಗ್ ಮೇಕರ್ ಆಗಿದ್ದಾರೆ.

ಒಟ್ಟು 6 ಪಟ್ಟಣ ಪಂಚಾಯಿತಿಯ 99 ಕ್ಷೇತ್ರಗಳ ಪೈಕಿ ಎರಡು  ಕ್ಷೇತ್ರಗಳು ಚುನಾವಣಾ ಪೂರ್ವ ಅವಿರೋಧ ಆಯ್ಕೆಯಾಗಿದ್ದು, 97 ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದೆ. ಮೇಲ್ನೋಟಕ್ಕೆ ಕಾಂಗ್ರೆಸ್    ಜಿಲ್ಲೆಯಲ್ಲಿ ತನ್ನ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ 2 ಪಟ್ಟಣ ಪಂಚಾಯತಿಗಳಲ್ಲಿ ಅತಂತ್ರ ಫಲಿತಾಂಶದ ಬಂದಿದ್ದು ರಾಜಕೀಯ ಚಟುವಟಿಕೆ ಜೋರಾಗಲಿವೆ.

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!