- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಇದು ಎಲ್ಲ ಸಮಾಜಗಳಿಗೆ ಸೇರಿದ ಪೀಠ

ಇದು ಎಲ್ಲ ಸಮಾಜಗಳಿಗೆ ಸೇರಿದ ಪೀಠ

ವಿಜಯಪುರ: ನಾಳೆ 13 ರಂದು ನಡೆಯಲಿರುವ ಪೀಠಾರೋಹಣ ಕಾರ್ಯಕ್ರಮಕ್ಕೆ ಎಲ್ಲ ಸಮಾಜದವರಿಗೆ, ಎಲ್ಲಾ ಜನಾಂಗದವರಿಗೆ ಆಹ್ವಾನಿಸುತ್ತೇನೆ ಎಂದು ನಿಯೋಜಿತ ಪೀಠಾಧಿಕಾರಿ ಬಬಲೇಶ್ವರ ಬೃಹನ್ಮಠದ ಮಹಾದೇವ ಶಿವಾಚಾರ್ಯ ಶ್ರೀಗಳು ಹೇಳಿದರು.

More Read: ಖಾಲಿ ಬಿಂದಿಗೆ ಹಿಡಿದು ಪ್ರತಿಭಟಿಸಿದ ಮಹಿಳೆಯರು

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀಗಳು, ಪಂಚಮಸಾಲಿ 3ನೇ ಪೀಠ ಸ್ಥಾಪನೆ, ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಪಂಚಮಸಾಲಿ ಸಮಾಜ ರಾಜ್ಯದಲ್ಲಿ 1 ಕೋಟಿ 20 ಲಕ್ಷ ಜನಸಂಖ್ಯೆ ಇದೆ ಎಂದು ಹೇಳಿದರು.

ಅಲ್ಲದೇ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳಿಗು ಆಹ್ವಾನ ಕೊಡುತ್ತಿದ್ದೇವೆ, ಶದರೆ ಈವರೆಗೆ  ಸ್ವಾಮೀಜಿಗಳು ಸಂಪರ್ಕಕ್ಕೆ ಸಿಕ್ಕಿಲ್ಲ, ಸ್ವಾಮೀಜಿಗಳನ್ನ ಸಂಪರ್ಕಿಸಿ ಎಂದು ಮನಗೂಳಿ ಸಂಗನಬಸವ ಸ್ವಾಮೀಜಿ ಹೇಳಿದರು.

More Read: ಚಳುವಳಿಗೆ ಚುರುಕು ಕೊಟ್ಟ ಮಸಬಿನಾಳ ಸ್ವಾತಂತ್ರ್ಯ ಯೋಧರು

ಯಾವುದೇ ಮನಸ್ತಾಪ ಇಲ್ಲ, ಪೀಠಾರೋಹಣ ಕಾರ್ಯಕ್ರಮಕ್ಕೆ ಸಿಎಂ, ಮಾಜಿ ಸಿಎಂ, ಸಚಿವರು-ಶಾಸಕರುಗಳಿಗೆ ಆಹ್ವಾನ ನೀಡಿದ್ದೇವೆ. ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ. ಜೈನ ಸಮುದಾಯದವರು ಪೀಠಾರೋಹಣಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಲಿದ್ದಾರೆ. ಇದು ಎಲ್ಲ ಸಮಾಜಗಳಿಗೆ ಸೇರಿದ ಪೀಠ ಎಂದು ಸಂಗನಬಸವ ಸ್ವಾಮೀಜಿ ಹೇಳಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!