- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಭೀಮಾತೀರದಲ್ಲಿ ಮತ್ತೇ ಹರಿದ ನೆತ್ತರು

ಭೀಮಾತೀರದಲ್ಲಿ ಮತ್ತೇ ಹರಿದ ನೆತ್ತರು

ವಿಜಯಪುರ : ಆಲಮೇಲ ಪಟ್ಟಣ ಪಂಚಾಯತಿ‌ ಮಾಜಿ ಸದಸ್ಯ ಪ್ರದೀಪ ಎಂಟಮಾನ ಭೀಕರ ಕೊಲೆಯಾಗುವ ಮೂಲಕ ಭೀಮಾತೀರದಲ್ಲಿ ಮತ್ತೇ ನೆತ್ತರು ಹರಿದಿದೆ.

ವಿಜಯಪುರ ಜಿಲ್ಲೆಯ ಆಲಮೇಲ್ ಪಟ್ಟಣದಲ್ಲಿ ಭೀಕರ ಕೊಲೆಯಾಗಿದ್ದು, ಪಟ್ಟಣದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಸ್ನೇಹಿತರೊಂದಿಗೆ ಪ್ರದೀಪ ತೆರಳಿದ್ದ, ಇದೇ ವೇಳೆ ನಾಲ್ಕೈದು‌ ಜನರ ಗುಂಪಿನಿಂದ ಪ್ರದೀಪ್ ಮೇಲೆ ಅಟ್ಯಾಕ್ ಮಾಡಿ, ಕಲ್ಲು ಹಾಗೂ ಬಡಿಗೆಗಳಿಂದ ಹೊಡೆದಿದ್ದರಿಂದ ಪ್ರದೀಪ ಎಂಟಮಾನ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

https://gadinaadakranti.com/i-have-sincerely-arrested-the-accused-dysp-sridhara-doddy/

ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸರ ದೌಡಾಯಿಇಸಿದ್ದಾರೆ. ಈ ಘಟನೆಯು ಆಲಮೇಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹಿನ್ನೆಲೆ:  ಪ್ರದೀಪ ಯಂಟಮಾನ್ ಆಲಮೇಲ ಪ.ಪಂ ಮಾಜಿ ಸದಸ್ಯನು ಆಗಿದ್ದ. ಭೀಮಾತೀರದ ಹಲವು ಕೊಲೆ ಪ್ರಕರಣಗಳಲ್ಲಿಆರೋಪಿಯಾಗಿದ್ದ. ಕಳೆದ ಸಲ 13ನೇ ವಾರ್ಡ್ ನಿಂದ ಆಯ್ಕೆಯಾಗಿದ್ದ ಪ್ರದೀಪ ಈ ಭಾರಿ 17ನೇ ವಾರ್ಡ್ ನಿಂದ ಸ್ಪರ್ಧೆಗೆ ರೆಡಿಯಾಗಿದ್ದ. ಬರುವ ದಿನಾಂಕ 8 ರಂದು ನಾಮಪತ್ರ ಸಲ್ಲಿಸಲು ತಯಾರಿ ನಡೆಸಿದ್ದ. ಪ.ಪಂ ಚುನಾವಣೆ ಹೊಸ್ತಿಲಲ್ಲೇ ಮಾಜಿ ಸದಸ್ಯನ ಬರ್ಬರ ಹತ್ಯೆಯಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.

https://gadinaadakranti.com/ravanasiddhayya-the-englishmans-uppercase-self-esteem/

ಆಲಮೇಲ ಪಟ್ಟಣದ ಗಣೇಶ ನಗರದ ಖಾಸಗಿ ಶಾಲೆ ಎದುರು ಹತ್ಯೆಯಾಗಿರುವ ಪ್ರದೀಪ್ ಎಂಟಮಾನ್, 2008ರಲ್ಲಿ ಬಾಗಪ್ಪ ಹರಿಜನ್ ಅಳಿಯಂದಿರ ಹತ್ಯೆ ಪ್ರಕರಣ, 2009 ಸಂಜು ಡಾಕ್ಟರ್ ಮೇಲೆ ಪೈರಿಂಗ್ ಪ್ರಕರಣ, 2008ರಲ್ಲಿ ಪರಶುರಾಮ್ ಮೇಸ್ತ್ರಿ ಹತ್ಯೆ ಪ್ರಕರಣ ಸೇರಿದಂತೆ ಹಲವು ಪ್ರಕರಣದಲ್ಲಿ ಆರೋಪಿಯಾಗಿದ್ದ. 2016ರಲ್ಲಿ ಪ್ರದೀಪ್ ಯಂಟಮಾನ್ ಮೇಲೆ ಆಲಮೇಲ ಪೊಲೀಸರು ರೌಡಿಶೀಟ್ ಓಪನ್ ಮಾಡಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!