- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಭೀಮಾತೀರದ ಕೀರ್ತಿ ಹೆಚ್ಚಿಸಿದ ಸಾಗರ ವಾಡಿ

ಭೀಮಾತೀರದ ಕೀರ್ತಿ ಹೆಚ್ಚಿಸಿದ ಸಾಗರ ವಾಡಿ

ವಿಜಯಪುರ: ಯುಪಿಎಸ್ಸಿ ಪರೀಕ್ಷೆಯಲ್ಲಿ 385 ನೇ ರ್ಯಾಂಕ್ ಪಡೆಯುವ ಮೂಲಕ ಜಿಲ್ಲೆಯ ವಿದ್ಯಾರ್ಥಿಯೊಬ್ಬ ಭೀಮಾತೀರದ ಕೀರ್ತಿಯನ್ನು ಹೆಚ್ಚಿಸಿದ್ದಾನೆ.

ಇಂಡಿ ತಾಲೂಕಿನ ಚವಡಿಹಾಳ ಗ್ರಾಮದ ಸಾಗರ ವಾಡಿ ಯುಪಿಎಸ್ಸಿ ಪರೀಕ್ಷೆಯಲ್ಲಿ 385 ನೇ ರ್ಯಾಂಕ್ ಪಡೆದಿದ್ದು, ಮೂಲತಃ ಹಿಂಗಣಿ ಗ್ರಾಮದವರಾಗಿದ್ದಾರೆ. ಹುಟ್ಟಿ ಬೆಳೆದಿದ್ದು ಅಜ್ಜಿಯ ಊರಾದ ಚವಡಿಹಾಳ ಗ್ರಾಮದಲ್ಲಿ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ತವರಿನಲ್ಲಿಯೇ ಸಾಗರ ಪೂರೈಸಿದ್ದಾರೆ.

ಸಾಗರ ವಾಡಿಯವರ ತಂದೆ ಸರ್ಕಾರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸತತ ಎರಡು ಬಾರಿ ಯುಪಿಎಸ್ ಸಿ ಪರೀಕ್ಷೆ ಬರೆದು ವಿಫಲರಾಗಿದ್ದ ಸಾಗರ ಮೂರನೇ ಅವಧಿಗೆ ತೇರ್ಗಡೆಯಾಗಿದ್ದಾರೆ. ಸಾಗರ ಸಾಧನೆ ಇಡೀ ಜಿಲ್ಲೆಯೇ ಹೆಮ್ಮೆ ಪಡುವಂತೆ ಮಾಡಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!