- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಪಂಚ ಪಾಂಡವರಿಂದ ಗೆಲುವಾಗಿಲ್ಲ. ಉಸ್ತುವಾರಿಗಳಿಗೆ ಯತ್ನಾಳ್ ಟಾಂಗ್

ಪಂಚ ಪಾಂಡವರಿಂದ ಗೆಲುವಾಗಿಲ್ಲ. ಉಸ್ತುವಾರಿಗಳಿಗೆ ಯತ್ನಾಳ್ ಟಾಂಗ್

ವಿಜಯಪುರ :  ಸಿಂದಗಿಯಲ್ಲಿ ಐತಿಹಾಸಿಕ ಗೆಲುವಾಗಿದೆ. ಮತದಾರರು, ಪಕ್ಷದ ಕಾರ್ಯಕರ್ತರು ಗೆಲುವಿಗೆ ಕಾರಣ. ಯಾರೋ ಒಬ್ಬರಿಂದ ಗೆಲುವಾಗಿಲ್ಲ, ಪಂಚಪಾಂಡವರು, ಸಪ್ತ ಋಷಿಗಳಿಂದ ಸಿಂದಗಿ ಗೆಲುವು ಆಗಿಲ್ಲ. ಚುನಾವಣೆ ಉಸ್ತುವಾರಿ ಹೊತ್ತಿದ್ದ ಐವರು ಸಚಿವರಿಗೆ ಯತ್ನಾಳ್ ಟಾಂಗ್ ನೀಡಿದ್ದಾರೆ.

ಈ ಕುರಿತಾಗಿ ವಿಜಯಪುರದಲ್ಲಿ ಶಾಸಕ ಯತ್ನಾಳ್ ಹೇಳಿಕೆ ನೀಡಿದ್ದು, ಸಾಮೂಹಿಕ ನಾಯಕತ್ವದಿಂದ ಸಿಂದಗಿಯಲ್ಲಿ ಬಿಜೆಪಿ ಗೆಲುವಾಗಿದೆ. ಮೋದಿ ನೇತೃತ್ವ ಒಪ್ಪಿ ಜನರು ಮತ ನೀಡಿದ್ದಾರೆ ಎಂದು ಕುಟುಕಿದರು.

ಪೆಟ್ರೋಲ್, ಡಿಸೇಲ್ ದರ ಇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಮೋದಿ ಕೊಟ್ಟ ಮಾತಿನಂತೆ ನಡೆದಿದ್ದಾರೆ, ದೀಪಾವಳಿ ಒಳಗೆ ದರ ಇಳಿಕೆ ಮಾಡಿ ಮಾತು ಉಳಿಸಿಕೊಂಡಿದ್ದಾರೆ.

ಸಿಎಂ ಬೊಮ್ಮಾಯಿ ನಮ್ಮ ಶಾಸಕಾಂಗದ ನಾಯಕರು. ಯಾರು ಲೀಡರ್ ಇರ್ತಾರೋ ಅವರದೆ ನಾಯಕತ್ವ. ಬೊಮ್ಮಾಯಿ ನೇತೃತ್ವದ ಸಾಮೂಹಿಕ ನಾಯಕತ್ವ ಎಂದು ಯತ್ನಾಳ್ ಹೇಳಿದರು.

ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಸೋಲು ವಿಚಾರವಾಗಿ ಮಾತನಾಡಿದ ಅವರು ಅದೇನು ಹೀನಾಯ ಸೋಲು ಅಲ್ಲ. ದಿ ಸಿ.ಎಂ ಉದಾಸಿ ಗೆದ್ದ ಬಳಿಕ ಕ್ಷೇತ್ರದೊಂದಿಗೆ ಸಂಪರ್ಕ ಕಳೆದುಕೊಂಡಿದ್ದರು. ಅನಾರೋಗ್ಯದಿಂದ ಹಾನಗಲ್ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕ ಇರಲಿಲ್ಲ. ಇದು ಪಕ್ಷಕ್ಕೆ ಹಿನ್ನೆಡೆಯಾಯ್ತು ಎಂದು ಸಮರ್ಥಿಸಿಕೊಂಡರು.  

ಹಾನಗಲ್ ಸೋಲಿಗೆ ದಿ. ಸಿಎಂ ಉದಾಸಿ ಕ್ಷೇತ್ರದ ಸಂಪರ್ಕ ಕಳೆದುಕೊಂಡಿದ್ದೆ ಕಾರಣ. ಮತ್ತು ಅಲ್ಲಿಯ ಕಾಂಗ್ರೆಸ್ ಅಭ್ಯರ್ಥಿ ಕೊರೊನಾ ಸಮಯದಲ್ಲಿ ಉತ್ತಮ ಕಾರ್ಯ ಮಾಡಿದ್ದಾರೆ.  ಒಳ್ಳೆಯದು ಮಾಡಿದ್ದನ್ನ ಮಾಡಿದ್ದಾರೆ ಅಂತ ಹೇಳಬೇಕಾಗುತ್ತೆ. ಈ ಸಮಯದಲ್ಲಿ ಉದಾಸಿಯವರ  ಸಂಪರ್ಕ ಕೊರತೆಯಾಗಿದ್ದರಿಂದ ಸೋಲಾಯ್ತು ಎಂದು ಹೇಳಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!