- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯNMMS ನಲ್ಲಿ ಬಸವನಾಡಿನ ವಿದ್ಯಾರ್ಥಿನಿಯ ಸಾಧನೆ

NMMS ನಲ್ಲಿ ಬಸವನಾಡಿನ ವಿದ್ಯಾರ್ಥಿನಿಯ ಸಾಧನೆ

ಬಸವನಬಾಗೇವಾಡಿ : ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಸಂಸ್ಥೆ (ಎನ್‌ಎಂಎಂಎಸ್) ನಡೆಸಿದ 2021-22 ನೇ ಸಾಲಿನ ಪರೀಕ್ಷೆಯಲ್ಲಿ ತಾಲೂಕಿನ ನಂದಿಹಾಳ ಪಿ.ಯು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಕು.ಶಂಕುತಲಾ ಚನ್ನಪ್ಪ ಸಾರವಾಡ ಶೇ.86 ಅಂಕಗಳೊಂದಿಗೆ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದು ಪ್ರತಿ ತಿಂಗಳಿಗೆ 1000ರೂ. ಯಂತೆ 4ವರ್ಷಗಳ ವರೆಗೆ ವಿದ್ಯಾರ್ಥಿ ವೇತನ ಪಡೆಯಲು ಅರ್ಹತೆ ಪಡೆದಿದ್ದಾಳೆ.

ನಂದಿಹಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಧಕ ವಿದ್ಯಾರ್ಥಿನಿಗೆ ಸನ್ಮಾನ ಸಮಾರಂಭ ಜರುಗಿದ್ದು, ಈ ಸಂದರ್ಭದಲ್ಲಿ ಮುಖ್ಯಗುರುಗಳಾದ ಎನ್.ಸಿ.ಬಿರಾದಾರ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಗಳ ಗುರಿಯಾದ ಸಾರ್ವತ್ರಿಕ ಗುಣಾತ್ಮಕ ಶಿಕ್ಷಣ ನೀಡುತ್ತಿರುವುದು ವಿದ್ಯಾರ್ಥಿಗಳಿಗೆ ಬಹಳ ಉಪಯುಕ್ತವಾಗಿದೆ, ಶಿಕ್ಷಣ ಇಲಾಖೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಗುಣಾತ್ಮಕ ಶಿಕ್ಷಣ ನೀಡುತ್ತಾ ದಾಪುಗಾಲು ಇಟ್ಟಿದೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.

ಇಂದಿನ ಮಕ್ಕಳು ಸ್ಪರ್ಧಾತ್ಮಕ ಯುಗದಲ್ಲಿದ್ದಾರೆ, ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಇದ್ದಂತೆ ಶಿಕ್ಷಣ ಕ್ಷೇತ್ರದಲ್ಲಿಯೋ ಆರೋಗ್ಯಕರ ಸ್ಪರ್ಧೆ ಅತ್ಯಗತ್ಯವಾಗಿದೆ, 8ನೇ ತರಗತಿ ಮಕ್ಕಳ (ಎನ್‌ಎಂಎಂಎಸ್) ರಾಜ್ಯ ಮಟ್ಟದ ಪರೀಕ್ಷೆ ಇದಾಗಿದ್ದು ಇದರಲ್ಲಿ ಕು.ಶಂಕುತಲಾ ಸಾರವಾಡ ವಿದ್ಯಾರ್ಥಿನಿ ಶೇ.86 ಅಂಕ ಪಡೆದು ತಾಲೂಕಿಗೆ ದ್ವಿತೀಯ ಸ್ಥಾನ ಪಡೆದಿರುವುದು ಸಂತಸ ತಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಎಂ. ಪ್ರೇಮಲತಾ, ವೈ.ಬಿ.ಬಾಗೇವಾಡಿ, ಡಿ.ಎನ್. ಸಂಗಳದ, ಎಸ್.ಎನ್. ಹೊಸೂರ, ಆರ್.ಬಿ. ಸಜ್ಜನ, ಆರ್.ಆರ್. ನಾಗರಾಳ, ಸಂಗಪ್ಪ ನಾಗರಾಳ, ಆರ್.ಎಂ. ಕುದರಿ ಇದ್ದರು.

ವರದಿ : ನಾಗೇಶ ನಾಗೂರ

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!