- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯನರಸಲಗಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ನರಸಲಗಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ಬಸವನಬಾಗೇವಾಡಿ: ತಾಲೂಕಿನ ನರಸಲಗಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಸ್ತೂರಿಬಾಯಿ ದಾನಪ್ಪ ಲಮಾಣಿ, ಉಪಾಧ್ಯಕ್ಷರಾಗಿ ಲಕ್ಕಮ್ಮ ಶರಣಪ್ಪ ದಳವಾಯಿ ಅವಿರೋಧವಾಗಿ ಆಯ್ಕೆಯಾದರು.

ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಸ್ತೂರಿಬಾಯಿ ದಾನಪ್ಪ ಲಮಾಣಿ, ಉಪಾಧ್ಯಕ್ಷ ಸ್ಥಾನಕ್ಕೆ ಲಕ್ಕಮ್ಮ ಶರಣಪ್ಪ ದಳವಾಯಿ ಇವರಿಬ್ಬರೇ ನಾಮಪತ್ರ ಸಲ್ಲಿಸಿದ್ದರ ಪರಿಣಾಮ ಚುನಾವಣೆ ನಡೆಯದೇ ಅಭ್ಯರ್ಥಿಗಳು ಇಬ್ಬರು ಅವಿರೋಧವಾಗಿ ಆಯ್ಕೆಯಾದರು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಚುನಾವಣಾ ಅಧಿಕಾರಿ ಭಾರತಿ ಚಲುವಯ್ಯಾ ಘೋಷಿಸಿದರು.

ಗ್ರಾಮ ಪಂಚಾಯತಿಯೋ ಒಟ್ಟು ೨೪ ಸದಸ್ಯರ ಬಲ ಹೊಂದಿದ್ದು ೧೬ ಸದಸ್ಯರು ಚುನಾವಣೆ ಪ್ರಕ್ರಿಯೇಯಲ್ಲಿ ಭಾಗವಹಿಸಿದರೆ ೮ಜನ ಸದಸ್ಯರು ಗೈರು ಹಾಜರಾಗಿದ್ದರು ಎಂದು ಚುನಾವಣಾ ಅಧಿಕಾರಿ ತಿಳಿಸಿದರು. ಸಹಾಯಕ ಚುನಾವಣಾ ಅಧಿಕಾರಿಯಾಗಿ ಶಶಿಧರ ಪಾಟೀಲ, ಪಿಡಿಒ ಸಂಜೀವ ಶೇಗುಣಶಿ ಕಾರ್ಯ ನಿರ್ವಹಿಸಿದರು.

ಈ ಸಂದರ್ಭದಲ್ಲಿ ಸದಸ್ಯರಾದ ಕಮಲಾಬಾಯಿ ಕುಂಬಾರ, ಶಾಂತಾಬಾಯಿ ರಾಠೋಡ, ನಾಮದೇವ ರಾಠೋಡ, ಈರಪ್ಪ ಚವ್ಹಾಣ, ಲಕ್ಕವ್ವ ಬಂಡಿವಡ್ಡರ, ಸಂಗಪ್ಪ ಬಿರಾದಾರ, ನೀಲವ್ವ ಕಲಬುರ್ಗಿ, ಲಕ್ಕಪ್ಪ ರೆಡ್ಡಿ, ಲಕ್ಕಮ್ಮ ದಳವಾಯಿ, ರೇಣುಕಾ ಚವಣಬಾವಿ, ಪರಶುರಾಮ ಚಲವಾದಿ, ಕೀರಪ್ಪ ಚವ್ಹಾಣ, ಕಾಂತಪ್ಪ ಹಿರೇಕುರಬರ, ಅವ್ವಣ್ಣಗೌಡ ಬಿರಾದಾರ, ಗಣಪತಿ ದೇವಜಿ ಸೇರಿದಂತೆ ಇತರರು ಇದ್ದರು.

ಸಂಭ್ರಮಾಚರಣೆ: ಅಧ್ಯಕ್ಷ ಉಪಾಧ್ಯಕ್ಷರ ಫಲಿತಾಂಶ ಹೊರಬಿಳುತ್ತಿದ್ದಂತೆ ಪರಶುರಾಮ ಕಳ್ಳಿಗುಡ್ಡ, ಯಮನೂರಿ ಚಲವಾದಿ, ಕಾಂತಪ್ಪ ಸುಭಾನಪ್ಪರ, ಸಿದ್ಧನಗೌಡ ಪಾಟೀಲ ಹಾಗೂ ಅಭಿಮಾನಿಗಳು, ಬೆಂಬಲಿಗರು ಪಟಾಕಿ ಸಿಡಿಸಿ ಪರಸ್ಪರ ಗುಲಾ¯ ಎರಚಿ ಸಂಭ್ರಮಿಸಿದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!