- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತ. ಬನ್ನೂರ ವಿಶ್ವಾಸ

ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತ. ಬನ್ನೂರ ವಿಶ್ವಾಸ

ಬಸವನಬಾಗೇವಾಡಿ: ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಎರಡು ಬಾರಿ ಅಲ್ಪ ಮತದಲ್ಲಿ ಸೋತರು ಶಿಕ್ಷಕರ ಕ್ಷೇತ್ರ ಬಿಟ್ಟಿಲ್ಲ ಅವರ ಸಮಸ್ಯೆಗಳಿಗೆ ಧ್ವನಿಯಾಗುವ ಜತೆಗೆ ನಿಕಟ ಸಂಪರ್ಕ, ಉತ್ತಮ ಒಡನಾಟ ಹೊಂದಿರುವ ನಾನು ಇದೇ ಜೂನ್‌ನಲ್ಲಿ ನಡೆಯುವ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತವಾಗಿದೆ ಎಂದು ಚುನಾವಣಾ ಆಕಾಂಕ್ಷಿ ಎನ್.ಬಿ. ಬನ್ನೂರ ವಿಶ್ವಾಸ ವ್ಯಕ್ತಪಡಿಸಿದರು..

ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಅನುದಾನ ರೂಪದಲ್ಲಿ ನೀಡುತ್ತಿರುವ ಸಂಬಳದ ವ್ಯವಸ್ಥೆ ಹೋಗಬೇಕು, ಅನುದಾನ ಬದಲು ವೇತನ ವ್ಯವಸ್ಥೆ ಜಾರಿಗೆ ಬರಬೇಕು, ವೇತನ ಶಿಕ್ಷಕರ ಹಕ್ಕಾಗಬೇಕು, ಇದಕ್ಕೆ ಅನುದಾನ ಸಂಹಿತೆ ತಿದ್ದುಪಡಿ ಅಗತ್ಯವಾಗಿದ್ದು ಶಿಕ್ಷಕ ಶಿಕ್ಷಕೇತರ ಸಮುದಾಯಕ್ಕೆ ವೇತನ ರಕ್ಷಣೆ ಆಗಬೇಕು, ಶಿಕ್ಷಣ ಇಲಾಖೆಯಲ್ಲಿ 21 ವರ್ಷಗಳಲ್ಲಿ ಹಲವಾರು ವಿಭಾಗಗಳಲ್ಲಿ ಸೇವೆ ಸಲ್ಲಿಸುವ ಶಿಕ್ಷಕರ ಸಮಸ್ಯೆಗಳಿಗೆ ನಿವಾರಣೆಗೆ ಪ್ರಮಾಣಿಕ ಪ್ರಯತ್ನಮಾಡುತ್ತ ಬಂದಿದ್ದೇನೆ. ಶಿಕ್ಷಕರ ಒತ್ತಾಸೆಯ ಮೇರೆಗೆ ಈ ಬಾರಿ ವಾಯವ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ತ ಚುನಾವಣೆಗೆ ಸ್ಪರ್ಧಿಸಿದ್ದು ಶಿಕ್ಷಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಮತ ನೀಡಿ ಆಶೀರ್ವಾದಿಸಬೇಕೆಂದು ಮನವಿ ಮಾಡಿದರು.

ಶಿಕ್ಷಣ ಸಂಸ್ಥೆಗಳ ಮಾನ್ಯತೆ ನವೀಕರಣವನ್ನು ಸರಳಿಕರಣಗೊಳಿಸಲು, ನ್ಯಾಯ ಸಮ್ಮತ ಕಾಲ್ಪನಿಕ ವೇತನಕ್ಕಾಗಿ, ಖಾಲಿ ಇರುವ ಶಿಕ್ಷಕರ ಹುದ್ದೆಗೆ ಭರ್ತಿ, ಶಾಶ್ವತ ಅನುದಾನ ರಹಿತ ಶಾಲೆ ಕಾಲೇಜುಗಳನ್ನು ಅನುದಾನಕ್ಕೊಳಪಡಿಸುವುದು ಸೇರಿದಂತೆ ಹತ್ತು ಹಲವಾರು ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಾಮಾಣಿಕವಾಗಿ ಸದನದಲ್ಲಿ ಹೊರಾಡಲು ತಮ್ಮ ಪ್ರಥಮ ಪ್ರಾಸಸ್ಥ್ಯದ ಮತಗಳನ್ನು ನನಗೆ ನೀಡಬೇಕೆಂದು ಶಿಕ್ಷಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಶಾರೀರಿಕ ಶಿಕ್ಷಕ ಎಸ್.ಎಸ್.ಮಾಳಜಿ ಸೇರಿದಂತೆ ಇನ್ನಿತರ ಶಿಕ್ಷಕರು ಇದ್ದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!