- Advertisement -Newspaper WordPress Theme
ಅಂಕಣಗಳುಕರುನಾಡ ರತ್ನಸಂಗೀತವೆಂದೂ ನನ್ನ ಮನದಿಂದ ಅಳಿಯದು

ಸಂಗೀತವೆಂದೂ ನನ್ನ ಮನದಿಂದ ಅಳಿಯದು

ಸಂಗೀತವು ಇಲ್ಲರಿಗೂ ಸುಲಭವಾಗಿ ಕಲಿಯಬಹುದಾದ ಕಲೆಯೇ ಅಲ್ಲ. ಆದರೆ ಎಲ್ಲರೂ ಕೇಳಿ ಆನಂದಿಸಬಹುದೆಂಬುದು ಮಾತ್ರ ಸತ್ಯ. ಸಂಗೀತವನ್ನು(Music class) ಕೇಳುವುದು ಕೇವಲ ಖುಷಿಗಷ್ಟೇ ಅಲ್ಲ. ಸಂಗೀತಕ್ಕೆ ಮನಸು ಹಾಗೂ ದೇಹದ ಖಾಯಿಲೆಗಳನ್ನು ಕಡಿಮೆ ಮಾಡುವ ಶಕ್ತಿಯೂ ಇದೆ.

ಎಲ್ಲ ಬಗೆಯ ಮನೋಲ್ಲಾಸಗಳಂತೆ ಉತ್ತಮ ಸಂಗೀತವನ್ನು ಹಾಡುವುದು ಹಾಗೂ ಆಲಿಸುವುದು ಅಥವಾ ಸಂಗೀತ ವಾದ್ಯಗಳನ್ನು ನುಡಿಸುವುದು ನಮ್ಮ ಮೆದುಳನ್ನು ಪ್ರಚೋದಿಸುತ್ತದೆ ಜತೆಗೆ ನಮ್ಮ ಅರಿವಿನ, ಭಾವನಾತ್ಮಕ ಹಾಗೂ ಭೌತಿಕ ಚಟುವಟಿಕೆಗಳ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ.

ಮಾನವನ ಸರ್ವಾಂಗೀಣ ವಿಕಾಸಕ್ಕೆ ಸಂಗೀತವು (Music class) ಒಂದು ಸಾಧನವಾಗಿ ತನ್ನ ಕೊಡುಗೆಯನ್ನು ಸಲ್ಲಿಸಿರುತ್ತದೆ ಮತ್ತು ಇಂದಿಗೂ ಅದರ ಪ್ರಭಾವವು ಎಲ್ಲ ಕ್ಷೇತ್ರಗಳಲ್ಲಿಯೂ ಕಂಡುಬರುತ್ತದೆ. ಸಂಗೀತದ ಆಧಾರದಿಂದಲೇ ಮಾಹಾನ್ ಸಂತಶ್ರೇಷ್ಠರು ಆತ್ಮೋನ್ನತಿಯನ್ನು ಸಾಧಿಸಿ ಜೊತೆಗೆ ಜಗತ್ತಿಗೆ ಉಪದೇಶಾಮೃತ ವನ್ನು ನೀಡಿದ್ದಾರೆ.

ಶ್ರೀ ಮುಕ್ತೇಶ್ವರ ಕೇಶವರಾವ ಉಭಾಳೆ ಗುರುಗಳು ಸಂಗೀತ ಸರಸ್ವತಿಯ ಸೇವೆಯನ್ನು 20 ವರ್ಷಮಾಡಿ ಅಗಾಧವಾದ ಸಿದ್ಧಿಯನ್ನು ಸಂಪಾದಿಸಿದ್ದಾರೆ. ಸಂಗೀತ ಕಲಾರಂಗದಲ್ಲಿ ಅದರಲ್ಲಿಯೂ ಹಾರ್ಮೋನಿಯಮ್ ವಾದನದಲ್ಲಿ ವಿಜಯಪುರದಲ್ಲಿ ಇವರಿಗೆ ಯಾರು ಸರಿಸಾಟಿಯಿಲ್ಲ. ಅಷ್ಟು ಪ್ರಾವಿಣ್ಯತೆಯನ್ನು ಹಾರ್ಮೋ ನಿಯಮ್ ವಾದನದಲ್ಲಿ ಸಿದ್ದಿಸಿಕೊಂಡಿದ್ದಾರೆ. ಇವರ ಸಂಗೀತ ಗುರುಗಳಾದ ಶ್ರೀ ರಂಗಾಚಾರ್ಯ ಕಾಖಂಡಕಿ, ಶ್ರೀ ಲಿಂಗೈಕ್ಯ ಪುಟ್ಟರಾಜ ಗವಾಯಿಗಳ ಆಪ್ತ ಶಿಷ್ಯರಲ್ಲೊಬ್ಬರಾದ ಶ್ರೀ ಚನ್ನವೀರ ಬನ್ನೂರ ಗವಾಯಿಗಳ ಹತ್ತಿರ ಸಂಗೀತ ಸಾಧನೆ ಮಾಡಿದ್ದಾರೆ.

ಈ ಸುದ್ದಿಯನ್ನೂ ನೋಡಿ… ವಿಜಯಪುರದ ಸಂಗೀತ ಮಹಲ

ಮುಕ್ತೇಶ್ವರರವರು ಶ್ರೀ ಗುರು ಪಂಚಾಕ್ಷರಿ ಸಂಗೀತ ಪಾಠಶಾಲೆಯನ್ನು ಹುಟ್ಟುಹಾಕಿ. ವಿಜಯಪುರ ಜಿಲ್ಲೆಯ ಸಂಗೀತಾಭ್ಯಾಸಿಗಳಿಗೆ ಇಲ್ಲಿ ನಿತ್ಯವು ಸಂಗೀತ ಕಲಿಕೆಗೆ ಶಾಲೆಯನ್ನು ತೆರೆದಿದ್ದಾರೆ. ಇವರು ಸಂಗೀತ ಕ್ಷೇತ್ರದಲ್ಲಿ ತಮ್ಮನ್ನು ಅರ್ಪಿಸಿಕೊಂಡು ರಾಗ, ತಾಳ, ಲಯ ಎಲ್ಲವೂ ಸಂಗೀತಾಭ್ಯಾಸಿಗಳಿಗೆ ಉಣಬಡಿಸುತ್ತಿದ್ದಾರೆ. ಸದಾ ನಗುಮುಖದಲ್ಲಿರುವ ಈ ಸಾತ್ವಿಕ ವ್ಯಕ್ತಿಯಲ್ಲಿ ಸಂಗೀತವು (Music class) ಸತ್ವಪೂರ್ಣವಾಗಿ ಅಡಗಿರುವದೆಂಬುದನ್ನು ತಕ್ಷಣ ನೋಡಿದವರಿಗೆ ತಿಳಿಯಲಾರದು. ಅದಕ್ಕೆ ಅವರ ಸರಳ ವೃತ್ತಿಯೇ ಕಾರಣ.

ಈ ಸಂಗೀತ ಶಾಲೆಯಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ತಮ್ಮ ವೃತ್ತಿಯಾಗಿ ಸಂಗೀತ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ವಿಜಯಪುರ ಜಿಲ್ಲೆಯಲ್ಲಿ ಹಾಗೂ ಬೇರೆ ರಾಜ್ಯಗಳಲ್ಲಿಯೂ ಕೂಡ ಗುರುತಿಸಕೊಂಡಿದ್ದಾರೆ. ಇದು ಶ್ರಿ ಗುರು ಪಂಚಾಕ್ಷರಿ ಸಂಗೀತ ಪಾಠಶಾಲೆಯ ಕೀರ್ತಿಯನ್ನು ಮತ್ತಷ್ಟು ಉತ್ತುಂಗಕ್ಕೆ ಕೊಂಡ್ಯೊದಿದ್ದಾರೆ ಅವರ ಶಿಷ್ಯವೃಂದ.

ಮುಕ್ತೇಶ್ವರರವರು ಆಕಾಶವಾಣಿ, ದೂರದರ್ಶನಗಳಲ್ಲಿ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿಕೊಟ್ಟಿದ್ದಾರೆ. ಇತ್ತೀಚಿಗೆ ಶಶಿಕಾಂತ ಯಂಭತ್ನಾಳ ಮೆಮೋರಿಯಲ್ ಟ್ರಸ್ಟ ವತಿಯಿಂದ “ಕರೆಯದಿರು ನನ್ನನು” ಕವನ ಸಂಕಲನದ ಆಯ್ದ ಕೆಲ ಭಾವಗೀತೆಗಳಿಗೆ ರಾಗ ಸಂಯೋಜನೆ ಮಾಡಿ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಅವರು ರಾಗ ಸಂಯೋಜನೆ ಮಾಡಿದ ಬಾ ಸಾವೆ ಬಾ”, “ರಂಗೇರಿದ ನೇಸರ”, “ಹೋಗಬೇಕಲ್ಲವೆ ನಿನ್ನೂರಿಗೆ” ಈ ಹಾಡುಗಳು ನಾಡಿನ ಜನತೆಯ ಮನದಲ್ಲಿ ಮನೆಮಾಡಿದೆ. ಸದ್ಯ ಇವರು “ಕರೆಯದಿರು ನನ್ನನು” ಭಾಗ – 2ರ ರಾಗ ಸಂಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇವರ ಸಂಗೀತ ಕ್ಷೇತ್ರದ ಸೇವೆಗೆ 2002 ನವರಸಪುರ ಉತ್ಸವ ವಿಜಯಪುರದಲ್ಲಿ ತಾನಾಪೂರಾ ಪ್ರಶಸ್ತಿ, 2006ರಲ್ಲಿ ಶಿವಮೊಗ್ಗದಲ್ಲಿ ನಡೆದಿರುವ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉತ್ತಮ ಹಾರ್ಮೋನಿಯಮ್ ಪ್ರಶಸ್ತಿ. 2007ರಲ್ಲಿ ಉಡುಪಿಯಲ್ಲಿ ನಡೆದ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಉತ್ತಮ ಶ್ರುತಿವಾದಕ ಪ್ರಶಸ್ತಿ. 2007ರಲ್ಲಿ ಚಂದನ ವಾಹನಿಯಲ್ಲಿ ಹಾರ್ಮೋನಿಯಮ್ ವಾದಕ ಪ್ರಶಸ್ತಿ. ಇನ್ನೂ ಅನೇಕ ಪ್ರಶಸ್ತಿಗಳು ಸಂದಿವೆ. ಇವರ ಸಂಗೀತ ಸೇವೆ ಹೀಗೆ ಈ ಜಿಲ್ಲೆಗೆ, ನಾಡಿಗೆ ನಿರಂತರ ಸಿಗುವಂತಾಗಲಿ.

“ಈಗಿನ ಮಕ್ಕಳಲ್ಲಿ ಸಂಗೀತ ಕಲಿಯಲು ಆಸಕ್ತಿ ಇದೆ ಆದರೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಶಾಲೆಯಲ್ಲೂ ಒತ್ತದ ಇರುತ್ತದೆ. ಕಲಿಕೆಯಲ್ಲಿ ಸ್ಪರ್ಧೆ ಇರುತ್ತದೆ. ಓದು, ಅಭ್ಯಾಸ, ಹೋಮ್‌ವರ್ಕ್ ಇವೆಲ್ಲದರ ಮಧ್ಯೆಯೂ ಬಿಡುವು ಮಾಡಿಕೊಂಡು ಮಕ್ಕಳು ಸಂಗೀತ ಕಲಿಯಲು ಬರುವುದು ನಿಜಕ್ಕೂ ಮೆಚ್ಚುವಂಥದ್ದು.”

— ಬಸವಂತರಾಯ ಹೂಗಾರ. ತಬಲಾ ವಾದಕರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.

— ವಾಯ್.ಪಿ.ವಿರುಪಾಕ್ಷಿ

LEAVE A REPLY

Please enter your comment!
Please enter your name here

Subscribe Today

GET EXCLUSIVE FULL ACCESS TO PREMIUM CONTENT

SUPPORT NONPROFIT JOURNALISM

EXPERT ANALYSIS OF AND EMERGING TRENDS IN CHILD WELFARE AND JUVENILE JUSTICE

TOPICAL VIDEO WEBINARS

Get unlimited access to our EXCLUSIVE Content and our archive of subscriber stories.

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!