- Advertisement -Newspaper WordPress Theme
ಆರೋಗ್ಯಆರೋಗ್ಯಕ್ಕೆ ಬಹು ಉಪಕಾರಿ ಮೊಳಕೆ ಕಾಳು

ಆರೋಗ್ಯಕ್ಕೆ ಬಹು ಉಪಕಾರಿ ಮೊಳಕೆ ಕಾಳು

ಮೊಳಕೆ ಕಾಳು ಇದು ಆರೋಗ್ಯಕ್ಕೆ ತುಂಬಾ ಉಪಯೋಗವಾಗುವಂತಹ ಆಹಾರ ಪದಾರ್ಥವಾಗಿದೆ. ನಮ್ಮ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು, ಖನಿಜಗಳು, ಪ್ರೋಟೀನ್, ವಿಟಮಿನ್‍ ಎ, ಬಿ ಕಾಂಪ್ಲೆಕ್ಸ್ ಸಿ ಗಳನ್ನು ಒದುಗಿಸುವಲ್ಲಿ ಇದರ ಪಾತ್ರ ಹೆಚ್ಚಾಗಿದೆ.

Read More: ಉತ್ತಮ ಆರೋಗ್ಯಕ್ಕೆ ಬಾದಾಮಿ ಬಳಸಿ

ಅಲ್ಲದೇ, ಅಮೈನೊ ಆಮ್ಲಗಳೂ ಹೆಚ್ಚಿನ ಪ್ರಮಾಣದಲ್ಲಿ ದೊರೆಯುವದು ಇವುಗಳಿಂದಲೆ. ದೇಹದ ಚೈತನ್ಯ ರಕ್ಷಿಸುವಲ್ಲಿ ಅಮೈನೊ ಆಮ್ಲಗಳು ಸಹಕಾರಿ. ಮೊಳಕೆ ಕಾಳುಗಳಲ್ಲಿರುವ ಪೋಷಕಾಂಶಗಳು ಆಹಾರವನ್ನು ಸರಿಯಾಗಿ ಜೀರ್ಣ ಮಾಡಲು ಸಹಕಾರಿಯಾಗಿವೆ ಆದ್ದರಿಂದ ಆಸಿಡಿಟಿ ಸಮಸ್ಯೆ ಇರುವವರು ಇವುಗಳನ್ನು ಹೆಚ್ಚಾಗಿ ಉಪಯೊಗಿಸಬೇಕು.

ತೂಕ ಕಡಿಮೆ ಮಾಡಿಕೊಳ್ಳಬಯಸುವವರು ಇವುಗಳ ಲಾಭ ಪಡೆದುಕೊಳ್ಳಬಹುದು. ಇವು ಹೆಚ್ಜು ಫೈಬರ್ ಅಂಶ ಹೊಂದಿರುವದರಿಂದ ಮಲ ಬದ್ದತೆ ಸಮಸ್ಯೆ ನಿವಾರಣೆ ಆಗುತ್ತದೆ ಮತ್ತು ಕಡಿಮೆ ಕ್ಯಾಲರಿ ಇದ್ದರೂ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇವುಗಳಲ್ಲಿ ಸತು, ವಿಟಮಿನ್ ಸಿ ಇರುವದರಿಂದ ರೋಗ ನಿರೋಧಕ ಶಕ್ತಿಯನ್ನೂ ವೃದ್ಧಿಗೊಳಿಸುತ್ತದೆ.

Read More: ಸಿಹಿಗಾಗಿ ಸಕ್ಕರೆ ಬದಲು ಇದನ್ನು ಬಳಸಬಹುದು…!

ವಿಟಮಿನ್ ಎ,ಬಿ,ಸಿ ಗಳು ಹೇರಳವಾಗಿ ದೊರೆಯುವದರಿಂದ ಕೂದಲಿನ ಬೆಳವಣಿಗೆ, ಚರ್ಮ ಮತ್ತು ಕಣ್ಣಿನ ಆರೊಗ್ಯಕ್ಕೂ ಒಳ್ಳೆಯದು. ಇಷ್ಟೆಲ್ಲಾ ಆರೊಗ್ಯದಾಯಕ ಅಂಶಗಳಿರುವ ಮೊಳಕೆ ಕಾಳುಗಳನ್ನು ನಿತ್ಯವೂ ಸೇವಿಸುವದು ಒಳ್ಳೆಯದು.

ಆದರೆ ಕೆಲವರಿಗೆ ಹಸಿ ಕಾಳುಗಳ ಸೇವನೆಯಿಂದ ಹೊಟ್ಟೆ ಕೆಡುತ್ತದೆ. ಹಾಗಾಗುತ್ತಿದ್ದರೆ ತುಸು ಬೇಯಿಸಿಕೊಂಡು ಸೇವಿಸುವುದರಿಂದ ನಿಮ್ಮ ಆರೋಗ್ಯ ಚನ್ನಾಗಿರುತ್ತದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!