- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸೇನಾ ಕ್ಯಾಂಪ್ನಲ್ಲಿ ಮುದ್ದೇಬಿಹಾಳ ಸೈನಿಕ ಆತ್ಮಹತ್ಯೆ..!

ಸೇನಾ ಕ್ಯಾಂಪ್ನಲ್ಲಿ ಮುದ್ದೇಬಿಹಾಳ ಸೈನಿಕ ಆತ್ಮಹತ್ಯೆ..!

ಮುದ್ದೇಬಿಹಾಳ : ದೆಹಲಿಯ ಮಿರಟ್ ಬಳಿ ಇರುವ ಎಂ.ಇ.ಜಿ ಯೂನಿಟ್-9 ರ ಸೇನಾ ಕ್ಯಾಂಪ್‌ನಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ವೇಳೆಯೇ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಜಟ್ಟಗಿ ಗ್ರಾಮದ ಸೈನಿಕ ಮಂಜುನಾಥ ಯಲ್ಲಪ್ಪ ಹೂಗಾರ (22) ಭಾನುವಾರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ.

https://gadinaadakranti.com/deshakhadhis-who-built-the-pit-of-martyrdom-in-basavanad/

 ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ತರಬೇತಿ ಮುಗಿಸಿಕೊಂಡು ಸೇವೆಗೆ ಹಾಜರಾಗಿದ್ದ ಮಂಜುನಾಥ ಹೂಗಾರ ಇದೀಗ ಆತ್ಮಹತ್ಯೆಗೆ ಮಾಡಿಕೊಂಡಿರುವುದು ದಿಗ್ಬ್ರಮೆ ಮೂಡಿಸಿದೆ. ಈ ವಿಷಯವನ್ನು ಸೇನಾ ಕ್ಯಾಂಪನ ಅಧಿಕಾರಿಗಳು ಮುದ್ದೇಬಿಹಾಳ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ ಕುಟುಂಬದವರಿಗೆ ಮಾಹಿತಿ ತಲುಪಿಸಿದ್ದಾರೆ.

 ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಮಂಜುನಾಥ ಹೂಗಾರನ ಸಂಬಂಧಿಕರಾದ ಲಕ್ಕಪ್ಪ ಬೊಮ್ಮಣಗಿ, ಮಂಜುನಾಥನ ಸ್ನೇಹಿತ ಕುಮಾರ ಅವರು, ಸೇನಾ ವಲಯದ ಅಧಿಕಾರಿಗಳು ಸದ್ಯಕ್ಕೆ ಆತ ಕೆಲಸಕ್ಕೆ ಹೋದ ಸಂದರ್ಭದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.

https://gadinaadakranti.com/alamela-murder-case-9-arrest-of-the-accused/

ಚಿಕ್ಕ ವಯಸ್ಸಿನಲ್ಲಿಯೇ ಸೇನೆಗೆ ಸೇರಿದ್ದ ಮಂಜುನಾಥನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸಮಸ್ಯೆಗಳು ಇರಲಿಲ್ಲ. ಕುಟುಂಬದೊಂದಿಗೂ ಚೆನ್ನಾಗಿಯೇ ಇದ್ದ. ಆದರೆ ಯಾಕೆ ಹೀಗೆ ಮಾಡಿಕೊಂಡಿದ್ದಾನೆ ಎಂಬುದು ಗೊತ್ತಾಗಿಲ್ಲ ಎಂದು ತಿಳಿಸಿದರು. ಸಾವನ್ನಪ್ಪಿರುವ ಸೈನಿಕ ಮಂಜುನಾಥನಿಗೆ ಮದುವೆ ಆಗಿರಲಿಲ್ಲ. ಮಂಜುನಾಥಗೆ ತಂದೆ ಯಲ್ಲಪ್ಪ, ತಾಯಿ ನಾಗಮ್ಮ ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಇದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!