- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸ್ನಾನ ಮಾಡಲು ಹೋದ ವ್ಯಕ್ತಿ ಮೊಸಳೆಗೆ ಬಲಿ

ಸ್ನಾನ ಮಾಡಲು ಹೋದ ವ್ಯಕ್ತಿ ಮೊಸಳೆಗೆ ಬಲಿ

ಮುದ್ದೇಬಿಹಾಳ: ಸ್ನಾನ‌ ಮಾಡಲು ಹೊಳೆ ದಂಡೆಗೆ ಹೋದ ವ್ಯಕ್ತಿಯೋರ್ವ ಮೊಸಳೆಗೆ (Crocodile) ಬಲಿಯಾದ (Crime) ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ (Muddebihal) ತಾಲೂಕಿನ ನಾಗರಾಳ ಗ್ರಾಮದ ನದಿಯಲ್ಲಿ ನಡೆದಿದೆ.

ಮಲ್ಲನಗೌಡ ಶಿವರಾಯ ಬಿರಾದಾರ (54) ಮೊಸಳೆಗೆ ಬಲಿಯಾದ ವ್ಯಕ್ತಿ ಎಂದು ತಿಳಿದುಬಂದಿದ್ದು, ಕಳೆದ ಎರಡು ದಿನಗಳ ಹಿಂದೆಯೇ ಈ ಘಟನೆ ನಡೆದಿದೆ. ಪ್ರತಿನಿತ್ಯದಂತೆ ಸ್ನಾನ‌ ಮಾಡಲು ಹೋದವ ಮನೆಗೆ ಬಾರದಿದ್ದಾಗ ಶಂಕಿತಗೊಂಡ ಗ್ರಾಮಸ್ಥರು, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸ್ ಇಲಾಖೆ ಅಧಿಕಾರಿಗಳು, ಮೃತನ ಶವಕ್ಕಾಗಿ ಸ್ಥಳೀಯ ಈಜುಗಾರರ ನೆರವಿನೊಂದಿಗೆ, ಅರಣ್ಯ ಇಲಾಖೆ ಸಿಬ್ಬಂದಿ, ಅಗ್ನಿ ಶಾಮಕ‌ ದಳದ ಸಿಬ್ಬಂದಿ ಯವರ ಸಹಾಯದೊಂದಿಗೆ ಶವವನ್ನು ಪತ್ತೆ ಹಚ್ಚಿ ಹೊರ ತೆಗೆದಿದ್ದಾರೆ.

ಸ್ಥಳಕ್ಕೆ ಮುದ್ದೇಬಿಹಾಳ (Muddebihal) ಸಿಪಿಐ ಆನಂದ ವಾಗ್ಮೋಡೆ ಹಾಗೂ ಆರ್.ಎಫ್.ಓ ರಾಜೀವ ಬಿರಾದಾರ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!