- Advertisement -Newspaper WordPress Theme
ಅಂಕಣಗಳುಗುಮ್ಮಟ ನಗರಿಗೆ ಇನ್ನಷ್ಟು ಮೆರಗು. ಇದು ವಿಜಯಪುರ ಚಿತ್ರಕಲಾ ಶಿಕ್ಷಕನ ಸಾಧನೆ…

ಗುಮ್ಮಟ ನಗರಿಗೆ ಇನ್ನಷ್ಟು ಮೆರಗು. ಇದು ವಿಜಯಪುರ ಚಿತ್ರಕಲಾ ಶಿಕ್ಷಕನ ಸಾಧನೆ…

ವಿದ್ಯಾರ್ಥಿಗಳಲ್ಲಿ ವಿವೇಕ, ತಾಳ್ಮೆ, ದೂರದೃಷ್ಠಿ, ಮಾನವತೆಯನ್ನು ಭೋಧಿಸುತ್ತಾ ಸಮಾಜದಲ್ಲಿ ಬದುಕುವ ಬಗೆಯೊಂದಿಗೆ ಜೀವನ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರವೇ ಪ್ರಮುಖವಾಗಿದೆ. ಓರ್ವ ಶಿಕ್ಷಕ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿರುತ್ತಾನೆ. ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಹೊರಹಾಕುವಲ್ಲಿ ಗುರುವಿನ ಮಾರ್ಗದರ್ಶನ ಅತ್ಯವಶ್ಯಕ. (anand zande)

ಹೀಗೆ ಹತ್ತಾರು ವಿದ್ಯಾರ್ಥಿಗಳ ಕಲಾವಿದರ ಸಾಧನೆಗೆ ಸ್ಪೂರ್ತಿಯಾಗಿ, ಹಲವಾರು ಶಿಕ್ಷಕರಿಗೆ ಮಾರ್ಗದರ್ಶಕರಾಗಿ ಎಲೆ ಮರದ ಕಾಯಿಯಂತೆ ಕಲೆಯ ಶಿಖರದೆಡೆಗೆ ಹೆಜ್ಜೆ ಹಾಕುತ್ತಾ ಗುಮ್ಮಟ ನಗರಿಗೆ ಇನ್ನಷ್ಟು ಮೆರಗು ನೀಡುತ್ತಿರುವ ಶಿಕ್ಷಕ ಬೇರೆ ಯಾರೂ ಅಲ್ಲ. ನಮ್ಮ ವಿಜಯಪುರ ತಾಲೂಕಿನ ಟಕ್ಕಳಕಿ ಗ್ರಾಮದ ಸರಕಾರಿ ಪ್ರೌಡಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಆನಂದ ಝಂಡೆ (anand zande) ಯವರು.

ಕೈಯಲ್ಲಿ ಕುಂಚ ಹಿಡಿದು ಚಿತ್ತಾರ ಬಿಡಿಸಲು ನಿಂತರೆ ಎಂತವರೂ ಕೂಡಾ ದಂಗು ಬಡಿಯುವುದರಲ್ಲಿ ಅಚ್ಚರಿಯಿಲ್ಲ. ಇವರ ರಚನೆಯ ಅಸಂಖ್ಯಾತ ಚಿತ್ರಗಳು ಸೋಲಾಪುರದ ಶುಬರಾಯ್ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನಗೊಂಡಿವೆ, ಕಲೆಯೇ ಜೀವನ ಎಂದು ಬಾಳುತ್ತಿರುವ ಆನಂದ ಶಿಕ್ಷಕರ ಸಾಧನೆಯನ್ನು ಗಮನಿಸಿ ಕನ್ನಡ ಸಂಸ್ಕೃತಿ ಇಲಾಖೆಯವತಿಯಿಂದ ಇವರ ಚಿತ್ರಗಳ ಪ್ರದರ್ಶನಕ್ಕೆ ಧನ ಸಹಾಯ ನೀಡಿದೆ.

ರಾಜ್ಯಮಟ್ಟದಲ್ಲಿ ಗಮನ ಸೆಳೆಯುತ್ತಿರುವ ಈ ಶಿಕ್ಷಕ ಜಿಲ್ಲೆಯ ಚಿತ್ರಕಲಾ ಶಿಕ್ಷಕರಿಗೆ ಪೋಟೊಗ್ರಾಫಿ ವಿಷಯದಲ್ಲಿ ತರಬೇತಿ ನೀಡುತ್ತಾರೆ. ಅದರೊಂದಿಗೆ ಪಾಠ ಪ್ರವಚನಗಳೊಂದಿಗೆ ಅನೇಕ ಲೇಖಕರ ಪುಸ್ತಕಗಳಿಗೆ ರೇಖಾ ಚಿತ್ರಗಳನ್ನು ರಚಿಸಿಕೊಟ್ಟು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶಿಕ್ಷಕರಾದ ಆನಂದ ಅವರು, ತಮ್ಮ ಸಾಧನೆಯೊಂದಿಗೆ ನೂರಾರು ವಿದ್ಯಾರ್ಥಿಗಳ ಕಲೆಯ ಕನಸಿಗೆ ಗೂಡು ಕಟ್ಟಿದ್ದಾರೆ. ತಮ್ಮ ವಿದ್ಯಾರ್ಥಿಗಳ ಸಾಧನೆಗಾಗಿ ಸದಾ ಶ್ರಮಿಸುತ್ತಿದ್ದಾರೆ. ಪ್ರತಿ ವರ್ಷ ಜಿಲ್ಲಾ ಮಟ್ಟದಲ್ಲಿ ನಡೆಯುವ ಚಿತ್ರಕಲಾ ಸ್ಪರ್ಧೆಯಲ್ಲಿ ಇವರ ವಿದ್ಯಾರ್ಥಿಗಳು ಪಾಲ್ಗೊಂಡು ನಿರಂತರವಾಗಿ ಪ್ರಶಸ್ತಿ ಪಡೆಯುವುದರ ಮೂಲಕ ಗುರುವಿನ ಕೀರ್ತಿ ಹೆಚ್ಚಿಸಿದ್ದಾರೆ. ಇವರ ಗರಡಿಯಲ್ಲಿ ಪಳಗಿದ ಓರ್ವ ವಿದ್ಯಾರ್ಥಿ ಚಿತ್ರಕಲಾ ಸ್ಪರ್ಧೇಯಲ್ಲಿ ಬಾಗವಹಿಸಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡು ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಪಡೆದು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾನೆ.(anand zande)

ತಾಲೂಕು, ಜಿಲ್ಲೆ ಸೆರಿದಂತೆ ರಾಜ್ಯ ಮಟ್ಟದಲ್ಲಿಯೂ, ಇವರ ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಸಮಾಜದ ಅರಿವಿಗಾಗಿ ಸರಕಾರದ ಹಲವಾರು ಯೋಜನೆಗಳಾದ ಆಧಾರ ಯೋಜನೆ, ಜಲಸಂರಕ್ಷಣೆ, ವಿಶ್ವ ಪ್ರವಾಸೋಧ್ಯಮ, ಚುನಾವಣಾ ಮತದಾನ ಜಾಗೃತಿ, ಇಂಧನ ಉಳಿತಾಯ ಹೀಗೆ ಹತ್ತು ಹಲವಾರು ವಿಷಯಗಳ ಕುರಿತು ಇವರ ಮಾರ್ಗದರ್ಶನದಲ್ಲಿಯೇ ವಿದ್ಯಾರ್ಥಿಗಳು ಚಿತ್ರ ಬಿಡಿಸಿ ಪ್ರಶಸ್ತಿ ಪಡೆದು ಗಮನ ಸೆಳೆದಿದ್ದಾರೆ.

ಮುಂದಿನ ದಿನಗಳಲ್ಲಿ ಈ ಯುವ ಕಲಾ ಶಿಕ್ಷಕನ ಕಲೆ ನಿತ್ಯ ಅರಳಲಿ, ಕಲಾ ಪ್ರೇಮಿಗಳಿಗೆ ಇವರ ಸಾಧನೆ ಪ್ರೇರಣೆ ನೀಡಲಿ, ಇವರ ವೃತ್ತಿ ಜೀವನ ಚಿತ್ರಕಲಾ ಶಿಕ್ಷಕರಿಗೆ ಮಾದರಿಯಾಗಲಿ ಎಂದು ಅವರಿಗೆ ಶುಭ ಹಾರೈಸೋಣ…

— ಗಡಿನಾಡ ಕ್ರಾಂತಿ ಟೀಮ್

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!