- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಷ್ಟ್ರೀಯಡಿ.3 ರಂದು ಇನ್ಫಿನಿಟಿ ಫೋರಂ ಉದ್ಘಾಟಿಸಲಿರುವ ಮೋದಿ

ಡಿ.3 ರಂದು ಇನ್ಫಿನಿಟಿ ಫೋರಂ ಉದ್ಘಾಟಿಸಲಿರುವ ಮೋದಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2021ರ ಡಿಸೆಂಬರ್ 3 ರಂದು ಬೆಳಗ್ಗೆ 10 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಣಕಾಸು ತಂತ್ರಜ್ಞಾನ – ಫಿನ್ ಟೆಕ್ ಕುರಿತ ಚಿಂತನಾ ನಾಯಕತ್ವ ವೇದಿಕೆ – ಫಿನ್ ಟೆಕ್ ಫೋರಂನ್ನು ಉದ್ಘಾಟಿಸಲಿದ್ದಾರೆ.

https://gadinaadakranti.com/cm-clarified-lockdown-fears/

ಈ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರ ಪ್ರಾಧಿಕಾರ (ಐಎಫ್ ಎಸ್ ಸಿಎ) ಭಾರತ ಸರಕಾರದ ಸಹಭಾಗಿತ್ವದಲ್ಲಿ ಗಿಫ್ಟ್ ಸಿಟಿ ಮತ್ತು ಬ್ಲೂಮ್ ಬರ್ಗ್ ಸಹಯೋಗದಲ್ಲಿ 2021ರ ಡಿಸೆಂಬರ್ 3 ಮತ್ತು 4ರಂದು ಆಯೋಜಿಸಿದೆ. ವೇದಿಕೆಯ ಮೊದಲನೇ ಆವೃತ್ತಿಯಲ್ಲಿ ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ ಮತ್ತು ಯುಕೆ ಪಾಲುದಾರ ರಾಷ್ಟಗಳಾಗಿವೆ. ಫಿನ್ ಟೆಕ್ ವೇದಿಕೆ ನೀತಿ, ವ್ಯಾಪಾರ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಜಗತ್ತಿನ ನೈಪುಣ್ಯತೆ ಹೊಂದಿರುವವರನ್ನು ಒಗ್ಗೂಡಿಸಲಿದೆ ಮತ್ತು ಅವರು ಚರ್ಚೆ ನಡೆಸಲಿದ್ದಾರೆ.

https://gadinaadakranti.com/omicron-a-team-structure-of-10-experts/

ಎಲ್ಲರನ್ನು ಒಳಗೊಂಡ ಪ್ರಗತಿಗಾಗಿ ಹಣಕಾಸು, ತಂತ್ರಜ್ಞಾನ ಉದ್ಯಮ ಮತ್ತು ಮುಖ್ಯವಾಗಿ ಮನುಕುಲಕ್ಕೆ ಸೇವೆ ಸಲ್ಲಿಸಲು ಹೇಗೆ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಒಳನೋಟವನ್ನು ಬಳಸಿಕೊಳ್ಳಬಹುದು ಎಂಬ ಕುರಿತು ಚರ್ಚಿಸುವುದಾಗಿ ಪ್ರಧಾನಮಂತ್ರಿ ಕಛೇರಿಯಿಂದ ತಿಳಿದುಬಂದಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!