- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯನೈತಿಕ ಜವಾಬ್ಧಾರಿ ಮಹತ್ವ ಸಾರಿದ ಮೋದಿ.  ಕೇಂದ್ರ ಸಚಿವ ಭಗವಂತ ಖೂಬಾ

ನೈತಿಕ ಜವಾಬ್ಧಾರಿ ಮಹತ್ವ ಸಾರಿದ ಮೋದಿ.  ಕೇಂದ್ರ ಸಚಿವ ಭಗವಂತ ಖೂಬಾ

ವಿಜಯಪುರ: ಯೋಗದಿಂದ (international yoga day) ಮಾನಸಿಕ ಹಾಗೂ ದೈಹಿಕ ಸದೃಢತೆ ಉಂಟಾಗಲಿದೆ‌. ಪ್ರತಿ ದಿನ ಯೋಗ ಮಾಡಬೇಕು. ಸಮಾಜವನ್ನು ಸದೃಢವಾಗಿಸಬೇಕು. ಜಾತಿ, ಮತ, ಪಂಥ ಮೀರಿದ ಶಕ್ತಿ ಯೋಗದಲ್ಲಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ (Bhagwanth Khuba) ಹೇಳಿದರು.

ವಿಜಯಪುರದ (Vijayapura) ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ಮಂಗಳವಾರ ಯೋಗ ದಿನದ ವಿಶ್ವ ದಿನ ಆಚರಿಸಿ, ಮಾತನಾಡಿದರು. ಅಲ್ಲದೇ, ದೇಶದಲ್ಲಿ ಸ್ವಚ್ಛತೆಯ ಅರಿವು ಮೂಡಿಸಿದವರು ಪ್ರಧಾನಿ ನರೇಂದ್ರ ಮೋದಿ. ಬಯಲು ಶೌಚ ಮುಕ್ತ ಹಳ್ಳಿಗಳ ನಿರ್ಮಾಣಕ್ಕೆ ಆದ್ಯತೆ ನೀಡಿದರು. ಹೀಗೆ ಅನೇಕ ನೈತಿಕ ಜವಾಬ್ದಾರಿಗಳ ಮಹತ್ವ ಸಾರಿದವರು ಮೋದಿ ಎಂದು (PM Modi) ಪ್ರಧಾನಿಯನ್ನು (Bhagwanth Khuba) ಹೊಗಳಿದರು.

ಈ  ವೇಳೆಯಲ್ಲಿ ಸಚಿವ ಉಮೇಶ ಕತ್ತಿ, ಶಾಸಕ ದೇವಾನಂದ ಚವಾಣ್, ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು.

ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಸಿಇಒ ರಾಹುಲ್ ಶಿಂಧೆ, ಎಸ್ ಪಿ ಎಚ್.ಡಿ. ಆನಂದಕುಮಾರ ಮತ್ತಿತರರು ಇದ್ದರು. ನೂರಾರು ಯೋಗ ಪ್ರಿಯರು ಭಾಗವಹಿಸಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!