- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಶಾಂತಿಯುತವಾಗಿ ಮುಕ್ತಾಯಗೊಂಡ ಮತದಾನ. ಇಲ್ಲಿದೆ ವಿವರ

ಶಾಂತಿಯುತವಾಗಿ ಮುಕ್ತಾಯಗೊಂಡ ಮತದಾನ. ಇಲ್ಲಿದೆ ವಿವರ

ವಿಜಯಪುರ: ಕರ್ನಾಟಕ ವಾಯುವ್ಯ ಶಿಕ್ಷಕ, (MLC Voting) ಪದವೀಧರರ ಮತಕ್ಷೇತ್ರದ ಚುನಾವಣೆಯ (Election) ಮತದಾನವು ಜಿಲ್ಲೆಯಾದ್ಯಂತ (Vijayapura) ಶಾಂತಿಯುತವಾಗಿ ನಡೆದು ಮುಕ್ತಾಯಗೊಂಡಿದೆ. ಶೇ.80.15 ರಷ್ಟು ಶಿಕ್ಷಕ ಮತದಾರರು ಮತ್ತು ಶೇ.62.36 ರಷ್ಟು ಪದವೀಧರ ಮತದಾರರು ತಮ್ಮ ಮತ ಹಕ್ಕನ್ನು ಚಲಾಯಿಸಿದ್ದಾರೆ.

ಬೆಳಗ್ಗೆ 8 ಗಂಟೆಗೆ ಮತದಾನ ಆರಂಭಗೊಂಡಿತು. ಕರ್ನಾಟಕ ವಾಯುವ್ಯ ಶಿಕ್ಷಕರ ಮತಕ್ಷೇತ್ರಕ್ಕೆ ಬೆಳಗಿನ 8 ರಿಂದ 10 ಗಂಟೆವರೆಗೆ ಶೇ.11.36ರಷ್ಟು, 12 ಗಂಟೆವರೆಗೆ ಶೇ.34.81ರಷ್ಟು, ಮಧ್ಯಾಹ್ನ 2 ಗಂಟೆವರೆಗೆ ಶೇ.59.17ರಷ್ಟು ಹಾಗೂ ಸಂಜೆ 4 ಗಂಟೆ ಅವಧಿಗೆ ಶೇ.73.73ರಷ್ಟು ಮತ್ತು ಅಂತಿಮವಾಗಿ ಶೇ.80.15ರಷ್ಟು ಮತದಾನದ ಪ್ರಮಾಣ ದಾಖಲಾಗಿದೆ.

ಅದೇ ರೀತಿ ವಾಯುವ್ಯ ಪದವೀಧರ ಮತಕ್ಷೇತ್ರಕ್ಕೆ ಬೆಳಗ್ಗೆ 8ರಿಂದ 10 ಗಂಟೆವರೆಗೆ ಶೇ.7.95ರಷ್ಟು, ಮಧ್ಯಾಹ್ನ 12 ಗಂಟೆವರೆಗೆ ಶೇ.24.08ರಷ್ಟು, ಮಧ್ಯಾಹ್ನ 2 ಗಂಟೆಯವರೆಗೆ ಶೇ.42.58ರಷ್ಟು ಹಾಗೂ ಸಂಜೆ 4 ಗಂಟೆಯ ಅವಧಿಗೆ ಶೇ.57.38 ರಷ್ಟು ಮತ್ತು ಅಂತಿಮವಾಗಿ ಶೇ.62.36ರಷ್ಟು ಮತದಾನದ (MLC Voting) ಪ್ರಮಾಣ ದಾಖಲಾಗಿದೆ.

ಕರ್ನಾಟಕ ವಾಯುವ್ಯ ಶಿಕ್ಷಕರ ಮತಕ್ಷೇತ್ರದಲ್ಲಿ ಒಟ್ಟು 4985 ಪುರುಷ ಮತದಾರರ ಪೈಕಿ 4126 ಮತದಾರರು ಹಾಗೂ ಒಟ್ಟು 1943 ಮಹಿಳಾ ಮತದಾರರ ಪೈಕಿ 1427 ಮತದಾರರು ಮತ್ತು ಒಟ್ಟು ಗಂಡು ಹೆಣ್ಣು ಸೇರಿ 6928 ಮತದಾರರ ಪೈಕಿ 5553 ಮತದಾರರು ತಮ್ಮ ಮತ ಹಕ್ಕನ್ನು ಚಲಾಯಿಸಿದ್ದಾರೆ.

More Read: ಶಾಲೆಯ ಬಿಸಿಯೂಟದ ಅಕ್ಕಿ ಸಾಗಾಟ ಆರೋಪ..!

ಅದೇ ರೀತಿ ಕರ್ನಾಟಕ ವಾಯುವ್ಯ ಪದವೀಧರ ಮತಕ್ಷೇತ್ರದಲ್ಲಿ ಒಟ್ಟು 15,722 ಪುರುಷ ಮತದಾರರ ಪೈಕಿ 10,339 ಮತದಾರರು ಹಾಗೂ ಒಟ್ಟು 5100 ಮಹಿಳಾ ಮತದಾರರ ಪೈಕಿ 2647 ಮತದಾರರು, ಒಟ್ಟು ಗಂಡು ಹೆಣ್ಣು ಮತ್ತು ಇತರೆ 1 ಸೇರಿ 20,823 ಮತದಾರರ ಪೈಕಿ ಒಟ್ಟು 12,986 ಮತದಾರರು ತಮ್ಮ ಮತದಾನ ಹಕ್ಕನ್ನು ಚಲಾಯಿಸಿದ್ದಾರೆ.

ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ ಬೆಳಗಿನ 10 ಗಂಟೆವರೆಗೆ 12 ತಾಲೂಕುಗಳ ಪೈಕಿ ಬಾಗೇವಾಡಿ ತಾಲೂಕಿನಲ್ಲಿ ಅತೀ ಹೆಚ್ಚು 15.79ರಷ್ಟು, ಮಧ್ಯಾಹ್ನ 12 ಗಂಟೆಯವರೆಗೆ ಬಬಲೇಶ್ವರ ತಾಲೂಕಿನಲ್ಲಿ ಅತೀ ಹೆಚ್ಚು ಶೇ.42.21ರಷ್ಟು ಹಾಗೂ ಅಂತಿಮವಾಗಿ ಶೇ.95ರಷ್ಟು ಮತದಾನವಾಗಿದೆ.

ಅದೇ ರೀತಿ ಪದವೀಧರ ಮತಕ್ಷೇತ್ರ ಚುನಾವಣೆಯಲ್ಲಿ ಬೆಳಗಿನ 10 ಗಂಟೆಯವರೆಗೆ 12 ತಾಲೂಕುಗಳ ಪೈಕಿ ತಾಳಿಕೋಟೆ ತಾಲೂಕಿನಲ್ಲಿ ಅತೀ ಹೆಚ್ಚು 12.24ರಷ್ಟು, ಮಧ್ಯಾಹ್ನ 12 ಗಂಟೆಯವರೆಗೆ ಚಡಚಣ ತಾಲೂಕಿನಲ್ಲಿ ಅತಿ ಹೆಚ್ಚು ಶೇ.28.73ರಷ್ಟು ಹಾಗು ಅಂತಿಮವಾಗಿ ತಾಳಿಕೋಟಿ ತಾಲೂಕಿನಲ್ಲಿ ಅತಿ ಹೆಚ್ಚು ಶೇ.70.24ರಷ್ಟು ಮತದಾನವಾಗಿರುತ್ತದೆ (MLC Voting) ಎಂದು ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!