- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಮತದಾನ ಪ್ರಕ್ರಿಯೆ ವೀಕ್ಷಿಸಿದ ಡಿಸಿ, ಎಸ್ಪಿ

ಮತದಾನ ಪ್ರಕ್ರಿಯೆ ವೀಕ್ಷಿಸಿದ ಡಿಸಿ, ಎಸ್ಪಿ

ವಿಜಯಪುರ: (MLC Election) ವಾಯವ್ಯ ಶಿಕ್ಷಕರ ಹಾಗೂ ಪದವೀಧರ ಮತಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಗರದ ದರಬಾರ್ ಹೈಸ್ಕೂಲ್ ನಲ್ಲಿ ನಡೆದ ಮತದಾನ (MLC Voting) ಪ್ರಕ್ರಿಯೆಯನ್ನು (Vijjayapura) ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನ್ನಮ್ಮನವರ ಹಾಗೂ ಎಸ್ಪಿ ಆನಂದಕುಮಾರ ವೀಕ್ಷಿಸಿದರು.

ವೇಳೆ ಮತಗಟ್ಟೆ ನಂ 126 ರಲ್ಲಿ ಒಟ್ಟು 1170 ಮತದಾರರು ಮತ ಚಲಾಯಿಸುತ್ತಿರುವ ಕಾರಣ ಉದ್ದನೇ ಕ್ಯೂನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದರು. ಗಂಟೆಗಟ್ಟಲೇ ಕ್ಯೂನಲ್ಲಿ ನಿಂತು ಬೇಸರದಿಂದ ಮತ ಚಲಾಯಿಸುತ್ತಿರುವ ಮಾಹಿತಿ ಪಡೆದ ಡಿಸಿ ವಿಜಯಮಹಾಂತೇಶ ದಾನ್ನಮ್ಮನವರ (Vijayamahantesh B Danammanavar, IAS) ಹಾಗೂ ಎಸ್ಪಿ ಆನಂದಕುಮಾರ (H.D. ANANDA KUMAR, IPS) ಮೊದಲು ಮತಗಟ್ಟೆ ನಂ 126ಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ತಹಶೀಲ್ದಾರರ ಅವರಿಗೆ ಡಿಸಿ ಕರೆ ಮಾಡಿ ಒಂದೇ ಮತಗಟ್ಟೆಯಲ್ಲಿ (MLC Election) ಇಷ್ಟು ಮತದಾರರು ಇರುವ ಕಾರಣ ಅದನ್ನು ಎ.ಬಿ‌.ಯಾಗಿ ಪರಿವರ್ತಿಸಿ ಮತದಾರ ರಿಗೆ ಹೆಚ್ಚು ತಡ ಮಾಡದೇ ಮತದಾನದ ಹಕ್ಕು ಚಲಾಯಿಸಲು ಅನುಕೂಲ ಮಾಡಿ ಕೊಡಬೇಕೆಂದು ಸೂಚಿಸಿದರು.

ನಂತರ ವಿವಿಧ ಮತಗಟ್ಟೆಗಳಿಗೆ ಭೇಟಿ ಮತದಾನ ಪ್ರಕ್ರಿಯೆ ಬಗ್ಗೆ ಪರಿಶೀಲನೆ ನಡೆಸಿ ಚುನಾವಣಾ ಕಾರ್ಯ ದಲ್ಲಿ ತೊಡಗಿರುವ ಸಿಬ್ಬಂದಿಗಳಿಗೆ ಸಲಹೆ ಸೂಚನೆ ನೀಡಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!