- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಒಳಚರಂಡಿ ಕಾಮಗಾರಿಗೆ ಶಾಸಕ  ಯತ್ನಾಳ ಚಾಲನೆ

ಒಳಚರಂಡಿ ಕಾಮಗಾರಿಗೆ ಶಾಸಕ  ಯತ್ನಾಳ ಚಾಲನೆ

ವಿಜಯಪುರ: ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ (MLA Basanagouda Patil Yatnal) ಅವರು (Vijayapura) 29ನೇ ವಾರ್ಡನ ವಿವಿಧೆಡೆ ಅಭಿವೃದ್ಧಿ (Ward Work) ಕಾಮಗಾರಿಗಳಿಗೆ ಚಾಲನೆ ನೀಡಿದರು.

ಮಹಾನಗರ ಪಾಲಿಕೆಯಿಂದ ಮಂಜೂರಿಯಾದ 23.75 ಲಕ್ಷ ರೂ ಮೊತ್ತದಲ್ಲಿ ವಾರ್ಡ್ ನಂ.29ರಲ್ಲಿ ಬರುವ ಸತ್ಯಸಾಯಿ ಶಾಲೆಯ ಹತ್ತಿರ ಶಾಲಾ ಕಂಪೌಂಡಿನಿಂದ ಮುಖ್ಯ ರಸ್ತೆಯವರೆಗಿನ ಒಳಚರಂಡಿ ಕಾಮಗಾರಿಗೆ, ಇದೆ ವಾರ್ಡನಲ್ಲಿ ಬರುವ ರಾಮನಗರದ ಬಸ್‌ಸ್ಟಾಪ್ ಹತ್ತಿರ ರಾಮನಗರದಿಂದ ಸರ್ದಾರ ವಲ್ಲಭಬಾಯಿ ವೃತ್ತದವರೆಗೆ 90 ಲಕ್ಷ ರೂ. ಮೊತ್ತದಲ್ಲಿ ಒಳಚರಂಡಿ ಕಾಮಗಾರಿಗೆ ಮತ್ತು ಅದೇ ವಾರ್ಡನಲ್ಲಿ 59.30 ಲಕ್ಷ ರೂ. ಮೊತ್ತದಲ್ಲಿ ರಾಜಾಜಿ ನಗರದ ಕೋಟೆ ಗೋಡೆಯಿಂದ ಅಲಿಕಾ ರೋಜಾವರೆಗೆ ಹಾಗೂ ಅನ್ನಪೂರ್ಣ ಕಿರಾಣಿ ಅಂಗಡಿವರೆಗೆ ಒಳಚರಂಡಿ ಕಾಮಗಾರಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಶಾಸಕರು (MLA Basanagouda Patil Yatnal), ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಕಾಲಕಾಲಕ್ಕೆ ಭೇಟಿ ನೀಡಿ ಪರಿಶೀಲಿಸಿ ಗುಣಮಟ್ಟದಿಂದ ಕಾಮಗಾರಿ ನಡೆಯುಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಪಕ್ಷದ ನಗರ ಘಟಕದ ಉಪಾಧ್ಯಕ್ಷರಾದ ಚಂದ್ರು ಚೌಧರಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಚಾಯಾ ಮಶಿಯವರ, ಪಾಲಿಕೆಯ ಮಾಜಿ ಸದಸ್ಯ ಪ್ರೇಮಾನಂದ ಬಿರಾದಾರ, ಮಂಜುನಾಥ ಯಕ್ಕುಂಡಿ, ಈಶ್ವರ ಕಬಾಡೆ, ಅಶೋಕ ಪೂಜಾರಿ ಸೇರಿದಂತೆ ವಿವಿಧ ಬಡಾವಣೆಗಳ ಹಿರಿಯರು, ನಾಗರಿಕರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!