- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಕುರ್ಚಿ, ಬ್ಯಾನರ್ ಗಾಗಿ ಜಗಳ. ಕಾರ್ಯಕ್ರಮದಿಂದ ಹೊರನಡೆದ ಸಚಿವ ಸಿಸಿ ಪಾಟೀಲ

ಕುರ್ಚಿ, ಬ್ಯಾನರ್ ಗಾಗಿ ಜಗಳ. ಕಾರ್ಯಕ್ರಮದಿಂದ ಹೊರನಡೆದ ಸಚಿವ ಸಿಸಿ ಪಾಟೀಲ

ವಿಜಯಪುರ: ಖುರ್ಚಿಗಾಗಿ ಹಾಗೂ ಬ್ಯಾನರ್ ವಿಚಾರವಾಗಿ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ (Vijugouda Patil) ಹಾಗೂ ಶಾಸಕ ಎಂಬಿ ಪಾಟೀಲ್ (MB Patil) ನಡುವೆ ನಡುವೆ ಗಲಾಟೆಯಿಂದಾಗಿ ಸಚಿವ ಸಿಸಿ ಪಾಟೀಲ್ (CC Patil) ಕಾರ್ಯಕ್ರಮದಿಂದ ಎದ್ದು ಹೊರ ನಡೆದ ಘಟನೆ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಕನಮಡಿ ಗ್ರಾಮದಲ್ಲಿ ನಡೆದಿದೆ.

More Read: ಆತ್ಮಹತ್ಯೆ ಪ್ರಕರಣ. ವಿಜಯಪುರ ಪೊಲೀಸರಿಂದ ಮೂವರು ಆರೋಪಿಗಳ ಬಂಧನ

ರಸ್ತೆ ಭೂಮಿ ಪೂಜೆಗಾಗಿ ಆಗಮಿಸಿದ್ದ ಸಚಿವ ಸಿಸಿ ಪಾಟೀಲ್ ಎದುರು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಹಾಗೂ ಎಂಬಿ ಪಾಟೀಲ್ ನಡುವೆ ವಾಗ್ವಾದ ನಡೆದಿದೆ. ಪ್ರೋಟೋಕಾಲ್ ನಂತೆ ಸಚಿವ ಸಿಸಿ ಪಾಟೀಲ್, ಶಾಸಕ ಎಂ ಬಿ ಪಾಟೀಲ್ ಸೇರಿ ಸ್ವಾಮೀಜಿ ಉಪಸ್ಥಿತಿ ಇತ್ತು.

ಭೂಮಿ ಪೂಜೆ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ, ಬ್ಯಾನರ್ ನಲ್ಲಿ ಪೋಟೋ ಹಾಗೂ ವೇದಿಕೆ ಮೇಲೆ ಕುರ್ಚಿ ಹಾಕಿಲ್ಲ ಎಂದು ಗಲಾಟೆ ನಡೆಯಿತು. ಗಲಾಟೆಗೆ ಬೇಸತ್ತು ಸಚಿವ ಸಿಸಿ ಪಾಟೀಲ್ ವೇದಿಕೆಯಿಂದ ಹೊರ ನಡೆದರು.

ಸಿಸಿ ಪಾಟೀಲ ಹೊರ ನಡೆಯುತ್ತಿದ್ದಂತೆಯೇ ಶಾಸಕ ಎಂಬಿ ಪಾಟೀಲ್ (MB Patil) ಮತ್ತೆ ಅವರನ್ನು ವೇದಿಕೆಗೆ ಕರೆ ತಂದರು. ಈ ಘಟನೆಯಿಂದಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕೆಲ ಹೊತ್ತು ಗೊಂದಲ ಉಂಟಾಯಿತು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!