- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯತೆಲೆ ಎತ್ತಿ ಬದುಕಲು, ಬಲಿದಾನ ಸ್ಮರಿಸಿ. ಶಾಸಕ ಶಿವಾನಂದ ಪಾಟೀಲ

ತೆಲೆ ಎತ್ತಿ ಬದುಕಲು, ಬಲಿದಾನ ಸ್ಮರಿಸಿ. ಶಾಸಕ ಶಿವಾನಂದ ಪಾಟೀಲ

ಬಸವನಬಾಗೇವಾಡಿ: (azadi ka amrit mahotsav)ನಮ್ಮ ಹಿರಿಯರ ಬಲಿದಾನ ನಾವೂ ಸ್ವತಂತ್ರವಾಗಿ ಇಂದು ತೆಲೆ ಎತ್ತಿ ಬದುಕುತ್ತಿದ್ದೇವೆ. 75 ವರ್ಷಗಳ ನಂತರ ಸ್ವಾತಂತ್ರ್ಯ ಹೋರಾಟಗಾರನ್ನು (Masabinal Freedom Fighters) ಸ್ಮರಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಶಾಸಕ ಶಿವಾನಂದ ಪಾಟೀಲ (Shivanand S. Patil) ಹೇಳಿದರು.

ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಶನಿವಾರ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇತೃತ್ವದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಡೆದ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಮ್ಮ ಪೂರ್ವಜ್ಜರಿಗೆ ಕೃತಜ್ಞತೆ ಸಲ್ಲಿಸಲೇಬೇಕು, ಸ್ವಾತಂತ್ರ್ಯ ಹೋರಾಟಗಾರರಿಂದ ಮಸಬಿನಾಳ ಗ್ರಾಮ ರಾಷ್ಟ್ರಮಟ್ಟದಲ್ಲಿ ಹೆಸರು ಕೇಳಿ ಬರುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಾಹಿತಿ ಶಂಕರ ಬೈಚಬಾಳ, ಹವ್ಯಾಸಿ ಅಂಕಣಕಾರ ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಮಾತನಾಡಿದರು. ವಿರಕ್ತಮಠದ ಸಿದ್ಧರಾಮ ಸ್ವಾಮೀಜಿ, ಉಪವಿಭಾಗಾಧಿಕಾರಿ ಬಲರಾಮ ಚವ್ಹಾಣ, ತಹಶೀಲ್ದಾರ ವಿಜಯಕುಮಾರ ಕಡಕೋಳ, ಡಿವೈಎಸ್‌ಪಿ ಅರುಣಕುಮಾರ ಕೋಳೂರ, ತಾಪಂ ಇಒ ಭಾರತಿ ಚಲುವಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಸಂಗಮೇಶ ಪೂಜಾರಿ, ಗ್ರಾಪಂ ಅಧ್ಯಕ್ಷೆ ಪಾರವ್ವ ಮೂರಮಾನ ಇದ್ದರು.

ಸಂಗೀತಾ ಹಿರೇಮಠ, ಸುಮಾ ನಿರಾಡೆ ನಿರೂಪಿಸಿದರು, ಶಿವಾನಂದ ಮಂಗಾನವರ ವಂದಿಸಿದರು, ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ 5ಕೋ, ರೂಗಳ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಗ್ರಾಮದ ಯುವಕರ ಆಶೆಯದಂತೆ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದ್ದೆಂದು ಭರವಸೆ ನೀಡಿದರು.

ಭೂ ದಾನ: ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಹಾಗೂ ಗ್ರಾಮದ ಯುವಕರ ಆಶೆಯದಂತೆ ಭವನ ನಿರ್ಮಾಣ ಮಾಡುವುದಾಗಿ ಶಾಸಕರು ಹೇಳುತ್ತಿದಂತೆ ಪಿಡಬ್ಲೂಡಿ ಇಂಜನೀಯರ್ ಗ್ರಾಮದ ಮುಖಂಡ ಭೀಮನಗೌಡ ಬಿರಾದಾರ ಅವರು ಭವನ ನಿರ್ಮಾಣಕ್ಕೆ ಜಾಗೆ ನೀಡುವುದಾಗಿ ತಿಳಿಸಿದರು.

ಎಬಿವಿಪಿ ಘೋಷಣೆಗಳು: ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) ಘೋಷಣೆಗಳಾದ “ಸ್ವಾತಂತ್ರ ಯೋಧರ ಬಲಿದಾನ, ಮರೆಯೋಗಿಲ್ಲ ಹಿಂದೂಸ್ತಾನ”, “ಹಲವು ಭಾಷೆ, ಹಲವು ವೇಷ, ಆದರೂ ನಮ್ಮದು ಒಂದೇ ದೇಶ” ಎಂಬಿತ್ಯಾದಿ ಘೋಷಣೆಗಳು ಯುವಕರನ್ನು ಹುರಿದುಂಬ್ಬಿಸದವು.

ಮೆರವಣಿಗೆ: (Masabinal Freedom Fighters) ಕಾರ್ಯಕ್ರಮದ ಅಂಗವಾಗಿ ನಡೆದ ಸ್ವಾತಂತ್ರ್ಯ ಯೋಧರ ವೃತ್ತದಿಂದ ಮಹಿಳೆಯರ ಕುಂಭ, ವೀರಗಾಸೆ, ಗೊಂಬೆ, ಡೊಳ್ಳು ಕುಣಿತ, ಕರಡಿ ಮಜಲು, ಶಾಲಾ ಮಕ್ಕಳಿಂದ ರಾಷ್ಟç ಧ್ವಜದೊಂದಿಗೆ ಪ್ರಭಾತ ಪೇರಿ, ಸ್ವಾತಂತ್ರ್ಯ ಜ್ಯೋತಿ, ಮಕ್ಕಳಿಂದ ಘೋಷವಾದ್ಯ, ಸ್ವಾತಂತ್ರ್ಯ ಯೋಧರ ಮನೆಗೆ ತೆರಳಿ ಕುಟುಂಬಸ್ಥರನ್ನು ಕರೆತರುವುದು, ಪೊಲೀಸ್ ಘೋಷವಾದ್ಯ, ಭಾರತ ಸೇವಾದಳದ ಘೋಷದೊಂದಿಗೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ತಾಲೂಕಾಡಳಿತ ಅಧಿಕಾರಿಗಳು, ಶಿಕ್ಷಕರು ಪಾಲ್ಗೊಂಡಿದ್ದರು.

ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರಿಗೆ ಸನ್ಮಾನಿಸಿ ಗೌರವಿಸಿದರು. ಮಂಜುಳಾ ಹಿಪ್ಪರಗಿ ಹಾಗೂ ಸಂಗಡಿಗರಿಂದ ದೇಶ ಭಕ್ತಿ, ನೃತ್ಯ, ಡಿ.ಹೆಚ್ ಕೋಲ್ಹಾರ ಹಾಗೂ ಸಂಗಡಿಗರಿಂದ ಸಂಗೋಳ್ಳಿ ರಾಯಣ್ಣ ಐತಿಹಾಸಿಕ ನಾಟಕ ಜರುಗಿತು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!