- Advertisement -Newspaper WordPress Theme
Exclusiveಮರಾಠಿಗರ ಮನೆ-ಮನೆಯಲ್ಲು ಕನ್ನಡ ಝೆಂಕಾರ..!

ಮರಾಠಿಗರ ಮನೆ-ಮನೆಯಲ್ಲು ಕನ್ನಡ ಝೆಂಕಾರ..!

ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಪುಂಡಾಟ, ಎಮ್ ಇ ಎಸ್ ನ ನಾಡದ್ರೋಹಿತನ ನಿಮಗೆಲ್ಲ ಗೊತ್ತೆ ಇದೆ. ಆದ್ರೆ ಇದೆ ಮಹಾರಾಷ್ಟ್ರ ರಾಜ್ಯದಲ್ಲಿ ಈಗ ಕನ್ನಡ ಕಂಪು ಹರಡಿದೆ. ಮಹಾರಾಷ್ಟ್ರದ ಜತ್ತ ತಾಲೂಕಿನಲ್ಲಿ ಬೆಳಿಗ್ಗೆ ಎದ್ರೆ ಸಾಕು ಮನೆ ಮನೆಯಲ್ಲಿ ಕನ್ನಡದ ಡಿಂಡಿಮ ಮೊಳಗುತ್ತಿದೆ. ಪ್ರತಿ ನಿತ್ಯವು ಮರಾಠಿಗರ ಮನೆಯಲ್ಲಿ ಕನ್ನಡ ಝೆಂಕಾರ ಜೀಯ್ ಗುಟ್ಟುತ್ತಿದೆ.

ಹೌದು. ಇದ್ದು ಅಚ್ಚರಿಯಾದ್ರು ನಿಜವಾದ ಸಂಗತಿ. ವಿಜಯಪುರ ಜಿಲ್ಲೆಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಜತ್ತ್ ತಾಲೂಕಿನಲ್ಲಿ ಪ್ರತಿ ನಿತ್ಯವು ಕನ್ನಡದ ಪೂಜೆ ನಡೆಯುತ್ತಿದೆ. ಮನೆ ಮನೆಯಲ್ಲು ಕನ್ನಡದ ಝೇಂಕಾರ ಮೊಳಗುತ್ತಿದೆ. ಮರಾಠಿ ಪ್ರಾದೇಶಿಕ ರೇಡಿಯೋ ಕೇಂದ್ರದಲ್ಲಿ ಕನ್ನಡದ ಹಾಡುಗಳು ಪ್ರಸಾರವಾಗ್ತಿವೆ. ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಜಾಲೀಹಾಳ ಗ್ರಾಮದ ಸಮುದಾಯ ಬಾನುಲಿ ಕೇಂದ್ರದಲ್ಲಿ ಕನ್ನಡವನ್ನ ಮನೆ ಮನೆಗೆ ತಲುಪಿಸುವ ಕಾರ್ಯವೊಂದು ಕಳೆದ 10 ವರ್ಷಗಳಿಂದ ನಡೆಯುತ್ತಿದೆ. ಈ ಜಾಲೀಹಾಳ ಗ್ರಾಮದಲ್ಲಿ ಬೆಳಿಗ್ಗೆ 10 ಗಂಟೆಯಾದರೆ ಸಾಕು ಗ್ರಾಮದ ಸುತ್ತಮುತ್ತ 30 ಕಿಮೀ ವ್ಯಾಪ್ತಿಯ ಗ್ರಾಮಗಳಲ್ಲಿನ ರೇಡಿಯೋದಲ್ಲಿ ಕನ್ನಡದ ಕಂಪು ಕೇಳಿ ಬರುತ್ತದೆ. ಸುಮಾರು 50 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನಿತ್ಯ ಕನ್ನಡದ ಕಾರ್ಯಕ್ರಮಗಳನ್ನು ಇಲ್ಲಿಯ ಜನರು ರೇಡಿಯೋ ಮೂಲಕ ಕೇಳುತ್ತಾರೆ. ಅರೇ ಇದೇನಿದು ಮಹಾರಾಷ್ಟ್ರದಲ್ಲಿ ಮರಾಠಿಯೇ ಪ್ರಧಾನ ಭಾಷೆ, ಬೇರೆ ಭಾಷೆಯ ಕಾರ್ಯಕ್ರಮವನ್ನು ರೇಡಿಯೋದಲ್ಲಿ ಪ್ರಸಾರ ಮಾಡ್ತಾರಾ ಎಂದು ನೀವು ಆಶ್ಚರ್ಯ ಪಡಬಹುದು. ಆದ್ರೆ ಇಲ್ಲಿ ಪ್ರತಿನಿತ್ಯ ಗ್ರಾಮಗ ಜನರು ಇಷ್ಟು ಪಟ್ಟು ಕನ್ನಡದ ಹಾಡುಗಳನ್ನ ಕೇಳಿ ಸಂತಸ ಪಡ್ತಿದ್ದಾರೆ.

ಸಾಂಗ್ಲಿ ಮೂಲದ ಯೇರಳಾ ಪ್ರೋಜೆಕ್ಟರ್ ಸೋಸೈಟಿ ಮೂಲಕ ಸಮುದಾಯ ಬಾನುಲಿಯನ್ನು 2011ರ ಜೂನ್ 31 ರಂದು  ಪ್ರಾರಂಭಿಸಲಾಗಿದೆ. ಯೇರಳಾವಾಣಿ ಹೆಸರಿನ 91.2 ಸಮುದಾಯ ಬಾನುಲಿ ಕೇಂದ್ರ ಆರಂಭದಿಂದಲು ಕನ್ನಡ ಹಾಡುಗಳನ್ನ, ಕನ್ನಡದ ಕಾರ್ಯಕ್ರಮಗಳನ್ನ ಪ್ರಸಾರ ಮಾಡುತ್ತಿದೆ. ಗಡಿ ಭಾಗದಲ್ಲಿ ಹೆಚ್ಚು ಕನ್ನಡಿಗರೇ ಇದ್ದ ಕಾರಣ  ಕನ್ನಡ ಭಾಷೆಯಲ್ಲಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಭಿತ್ತರಿಸಲಾಗ್ತಿದೆ. ಸಮುದಾಯ ಬಾನುಲಿಯ ಮೂಲಕ ಅತೀ ಕಡಿಮೆ ಸಮಯದಲ್ಲಿ ಹೆಚ್ಚು ಜನರನ್ನು ತಲುಪಿ ಅಭಿವೃದ್ಧಿ ಮಾಡಲು ಕನ್ನಡ, ಮರಾಠಿ ಮತ್ತು ಡಾಯ್ಲೇಟ್ ಅಂದ್ರೆ ಕನ್ನಡ ಮತ್ತು ಮರಾಠಿ ಮಿಶ್ರೀತ ಭಾಷೆಯಲ್ಲಿಯೇ ಎಲ್ಲ ಕಾರ್ಯಕ್ರಮಗಳನ್ನ ಪ್ರಸಾರ ಮಾಡಲಾಗ್ತಿದೆ. ಕೃಷಿ, ಆರೋಗ್ಯ, ಶಿಕ್ಷಣ ಹಾಗೂ ಕನ್ನಡ ಮನರಂಜನಾ ಕಾರ್ಯಕ್ರಮಗಳನ್ನ ಭಿತ್ತರಿಸುವ ಮೂಲಕ ಗಡಿ ಭಾಗದಲ್ಲಿ ಈ ಬಾನುಲಿ ಕೇಂದ್ರ ಜನರ ಅಚ್ಚು ಮೆಚ್ಚಾಗಿದೆ. ಬೆಳಿಗ್ಗೆ 10 ಗಂಟೆಯಿಂದ 12 ಗಂಟೆಯ ವರೆಗು ಕನ್ನಡ ಕಾರ್ಯಕ್ರಮಗಳು ಕೇಳಿ ಬರುತ್ವೆ. ನಂತ್ರ ಸಾಯಂಕಾಲದಿಂದ ರಾತ್ರಿ 9 ಗಂಟೆಯ ವರೆಗು ಕನ್ನಡ ಚಿತ್ರಗೀತೆಗಳು, ಮನರಂಜನಾ ಕಾರ್ಯಕ್ರಮಗಳು ಪ್ರಸಾರವಾಗುತ್ವೆ. ಈ ಮಧ್ಯೆ ಮರಾಠಿ ಭಾಷೆಯಲ್ಲು ಕಾರ್ಯಕ್ರಮಗಳು ಪ್ರಸಾರವಾಗುತ್ವೆ.

ಇನ್ನು ಜಾಲೀಹಾಳ ಹಾಗೂ ಸುತ್ತಮುತ್ತಲ 30 ಕಿಲೋ ಮೀಟರ್ ವ್ಯಾಪ್ತಿಯ ಗ್ರಾಮಗಳಲ್ಲಿ ಇಂದಿಗೂ ಜನರೆಲ್ಲಾ ಅಚ್ಚ ಕನ್ನಡವನ್ನು ಮಾತನಾಡುತ್ತಾರೆ. ಆಡಳಿತ ಭಾಷೆ ಮರಾಠಿಯಾದರೇ ಅವರೆಲ್ಲಾ ಇಂದಿಗೂ ನಾವು ಕನ್ನಡಿಗರೇ ಎಂದು ಹೇಳುತ್ತಾರೆ. ನಮ್ಮ ತಾಲೂಕು ಮತ್ತು ಜಿಲ್ಲೆಗಳೂ ಸುಮಾರು ದೂರವಿರೋದ್ರಿಂದ ನಿತ್ಯದ ವಹಿವಾಟು ಮಾಡುವುದು ನೆರೆಯ ವಿಜಯಪುರ ಜಿಲ್ಲೆಯಲ್ಲಿಯೇ ಎನ್ನತ್ತಾರೆ ಇಲ್ಲಿನ ಜನರು. ಸ್ಥಳೀಯ ಬಾನುಲಿ ಕೇಂದ್ರವೊಂದು ಮಹಾರಾಷ್ಟ್ರ ರಾಜ್ಯದಲ್ಲಿ ಕನ್ನಡ ಕಾರ್ಯಕ್ರಮಗಳನ್ನ ನಡೆಸಿ ಕೊಡ್ತಿರೋದು ನಿಜಕ್ಕು ಹೆಮ್ಮೆಯ ವಿಚಾರ.

— ಗಡಿನಾಡ ಕ್ರಾಂತಿ ಟೀಮ್

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!