- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಷ್ಟ್ರೀಯಮಹಾ ರಾಜಕೀಯದಲ್ಲಿ ಕ್ಷಣಕ್ಕೊಂದು ಟ್ವಿಸ್ಟ್. ಅಧಿಕಾರಕ್ಕೆ ಅಂಟಿಕೊಂಡಿಲ್ಲ ಎಂದ ಉದ್ಧವ್ ಠಾಕ್ರೆ

ಮಹಾ ರಾಜಕೀಯದಲ್ಲಿ ಕ್ಷಣಕ್ಕೊಂದು ಟ್ವಿಸ್ಟ್. ಅಧಿಕಾರಕ್ಕೆ ಅಂಟಿಕೊಂಡಿಲ್ಲ ಎಂದ ಉದ್ಧವ್ ಠಾಕ್ರೆ

ಮಹಾರಾಷ್ಟ್ರ ರಾಜ್ಯ (Maharashtra Political Crisis) ರಾಜಕಾರಣದಲ್ಲಿ ಇದೀಗ ಭಾರಿ ಬದಲಾವಣೆ ಉಂಟಾಗಿದ್ದು, (Shiv Sena) ಕಷ್ಟಪಟ್ಟು ಸಿಎಂ ಗದ್ದುಗೆ ಹಿಡಿದಿದ್ದ ಉದ್ಧವ್ ಠಾಕ್ರೆ (Uddhav Thackeray) ಬೆಳವಣಿಗೆಯಿಂದ ಶಾಕ್ ಆಗಿದ್ದಾರೆ. ಅಷ್ಟೇ ಅಲ್ಲದೇ ರಾಜೀನಾಮೆಗೂ ಸಿದ್ಧ ಎಂತಲೂ ಹೇಳಿದ್ದಾರೆ.

ಮುಂಬೈ: ಅತೃಪ್ತ ಶಾಸಕರಲ್ಲಿ ಒಬ್ಬರು ಮುಂದೆ ಬಂದು ಒತ್ತಾಯಿಸಿದರೆ ರಾಜೀನಾಮೆ ನೀಡಲು ಸಿದ್ಧ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದರು.

ರಾಜಕೀಯ ಬೆಳವಣಿಗೆಗಳ ಕುರಿತಾಗಿ ಮಾತನಾಡಿದ ಅವರು, ಅಧಿಕಾರಕ್ಕೆ ನಾನು ಅಂಟಿಕೊಂಡು ಕುಳಿತುಕೊಂಡಿಲ್ಲ, ಪಕ್ಷದ ಇನ್ನೊಬ್ಬ ಶಾಸಕನನ್ನು ಸಿಎಂ ಮಾಡೋದಕ್ಕೆ ನಾನು ಸಿದ್ಧವಾಗಿದ್ದೇನೆ. ಹಿಂದುತ್ವವು ನಮ್ಮ ಗುರುತಾಗಿದೆ ಮತ್ತು ಶಿವಸೇನೆ ಎಂದಿಗೂ ಹಿಂದೂತ್ವವನ್ನು ಬಿಡುವುದಿಲ್ಲ ಅಂತ ಉದ್ಧವ್ ಠಾಕ್ರೆ ಸ್ಪಷ್ಟಪಡಿಸಿದರು.

ತಮ್ಮ ಪಕ್ಷದ 30 ಶಾಸಕರು ಬಂಡಾಯವೆದ್ದ ಏಕನಾಥ್ ಶಿಂಧೆಯನ್ನು ತಮ್ಮ ನಾಯಕ ಎಂದು ಘೋಷಿಸಿದ ಬೆನ್ನಲ್ಲೇ ಶಿವಸೇನಾ ಮುಖ್ಯಸ್ಥ ಠಾಕ್ರೆ ನಾನು ರಾಜೀನಾಮೆಗೆ ಸಿದ್ಧ ಎಂದು ಹೇಳಿದ್ದಾರೆ.

ಗುವಾಹಟಿ ತಲುಪಿದ ಅತೃಪ್ತ ಶಾಸಕರು..!: ಮಹಾರಾಷ್ಟ್ರ MLC ಚುನಾವಣೆಯಲ್ಲಿ ಅಡ್ಡ ಮತದಾನದ ನಂತರ ಶಾಸಕ ಏಕನಾಥ್ ಶಿಂಧೆ ಅವರು ಸಿಎಂ ವಿರುದ್ಧ ಬಂಡಾಯವೆದ್ದಿದ್ದಾರೆ. ಸುಮಾರು 34 ಕ್ಕೂ ಅಧಿಕ ಸ್ವಪಕ್ಷದ ಶಾಸಕರೊಂದಿಗೆ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. (Maharashtra Political Crisis)

ಮೊದಲು ಗುಜರಾತನ ಸೂರತ್ ಹೋಟೆಲ್ನಲ್ಲಿ ಇತರ ಶಾಸಕರೊಂದಿಗೆ ತಂಗಿದ್ದರು. ಬಳಿಕ ಅಲ್ಲಿಂದ ಗುವಾಹಟಿ ತಲುಪಿದ್ದಾರೆ. ರೆಬೆಲ್ ಶಾಸಕರ ತಂಡದಲ್ಲಿ 46 ಶಾಸಕರು ಇದ್ದಾರೆ ಎನ್ನಲಾಗುತ್ತಿದೆ. ಮುಂದೆ ಏನಾಗಲಿದೆ ಎಂಬುದು ಕಾದು ನೋಡಬೇಕಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!