- Advertisement -Newspaper WordPress Theme
ಹೋರಾಟ ವೀರರುಮಹಾತ್ಮನಿಂದ ಆಹ್ವಾನ ಪಡೆದಿದ್ದ ಸ್ವಾತಂತ್ರ್ಯ ವೀರ ಮೈಲಾರ ಮಹಾದೇವಪ್ಪ

ಮಹಾತ್ಮನಿಂದ ಆಹ್ವಾನ ಪಡೆದಿದ್ದ ಸ್ವಾತಂತ್ರ್ಯ ವೀರ ಮೈಲಾರ ಮಹಾದೇವಪ್ಪ

ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ಕರ್ನಾಟಕದ ಮೈಲಾರ ಮಹಾದೇವಪ್ಪ (mylar mahadevappa)ಇಂದೂ ಕೂಡ ಜನಮನದಲ್ಲಿ ಹಸಿರಾಗಿ ಉಳಿದುಕೊಂಡಿದ್ದಾರೆ. ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನವರಾದ ಮೈಲಾರ ಮಹಾದೇವಪ್ಪನವರು ಅನೇಕ ದೇಶಭಕ್ತ ಅಧ್ಯಾಪಕರ ಪ್ರಭಾವಕ್ಕೊಳಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕಿದರು. ದಾರವಾಡದಲ್ಲಿ ಸ್ಥಾಪಿಸಲಾಗಿದ್ದ ಭಾರತೀಯ ತರುಣ ಸಂಘವನ್ನು ಸೇರಿ ಸ್ವಾತಂತ್ರ್ಯ ಹೋರಾಟ ಆರಂಭಿಸಿದ್ದರು.

ನಂತರ ಮಹಾತ್ಮಾ ಗಾಂಧಿಜೀಯವರು ಆರಂಭಿಸಿದ್ದ ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿ ದೇಶಾಭಿಮಾನಿಗಳ ಗಮನ ಸೆಳೆದರು. ಕರ್ನಾಟಕವನ್ನು ಪ್ರತಿನಿಧಿಸಿದ್ದ ಈ ಸತ್ಯಾಗ್ರಹಿ ಸಾಂಕೇತಿವಾಗಿ ಉಪ್ಪನ್ನು ತಯಾರಿಸಿ ಬ್ರಿಟಿಷ್ ಕಾಯಿದೆ ಭಂಗಗೊಳಿಸಿದ್ದರು. ಮುಂದೆ ಇವರನ್ನು ಸರಕಾರ ಸೆರೆಮನೆಗೆ ದೂಡಿತ್ತು. ಸೆರೆಮನೆಯಿಂದ ಹೊರಬಂದ ನಂತರ ಮಹಾದೇವಪ್ಪನವರು (mylar mahadevappa) ವಿಮುಖರಾಗಲಿಲ್ಲ, ಮತ್ತೆ ಹೋರಾಟ, ಸೆರೆಮನೆ  ಹೀಗೆ ದೇಶ್ಯಾದ್ಯಂತ ಗಮನ ಸೆಳೆದ ಇವರಿಗೆ ಗಾಂಧಿಜೀ ಆಹ್ವಾನ ಕೊಟ್ಟಿದ್ದರು.

ಈ ಸುದ್ದಿಯನ್ನೂ ನೋಡಿ… ವಿಜಯನಗರ ಸಾಮ್ರಾಜ್ಯ ರಕ್ಷಕ. ವಿಜಯಪುರದ ಹನುಮಪ್ಪನಾಯಕ

ನಂತರ ಮಹಾದೇವಪ್ಪನವರು ಖಾದಿ ಉತ್ಪಾದನೆಗೆ ಪೂರ್ಣ ಮನಸ್ಸು ಕೊಟ್ಟರು. ಕೊಟ್ಟೂರಿನಲ್ಲಿ ಒಂದು ಆಶ್ರಮ ಸ್ಥಾಪಿಸಿದರು. ವೈಯಕ್ತಿಕ ಹೋರಾಟ ಆರಂಭಿಸಿದ್ದರಿಂದ ಮತ್ತೆ ಸೆರೆಮನೆಯನ್ನು ಪ್ರವೇಶಿಸಬೇಕಾಯಿತು. ನಂತರ “ಭಾರತ ಬಿಟ್ಟು ತೊಲಗಿ” ಚಳುವಳಿಯ ಕಾವು ದೇಶಭಕ್ತರನ್ನು ಬಡಿದೆಬ್ಬಿಸ ತೊಡಗಿತು. ಆಗ ಮಹಾದೇವಪ್ಪನವರು ಭಲವಾದ ತಂಡ ಕಟ್ಟಿ ಬ್ರಿಟಿಷರನ್ನು ಎದುರಿಸಿದ್ದರು. ಹಲವಾರು ಪ್ರಕರಣಗಳನ್ನು ಎದುರಿಸಿ ಬ್ರಿಟಿಷ್ ಸರಕಾರ ಎದೆಗುಂದುವಂತೆ ಮಾಡಿದ್ದರು. ದಾರವಾಡ ಮತ್ತು ಬಳ್ಳಾರಿ ಜಿಲ್ಲೆಗಳು ಇವರ ಕಾರ್ಯಕ್ಷೇತ್ರಗಳಾಗಿದ್ದವು. ಹೀಗೆ ಸ್ವಾತಂತ್ರ್ಯ ಹೋರಾಟದಲ್ಲಿಯೇ ವೀರ ಮರಣವನ್ನಪ್ಪಿದ ಮೈಲಾರ ಮಹಾದೇವಪ್ಪನವರ (mylar mahadevappa) ದೇಶಪ್ರೇಮಕ್ಕೆ ನಮ್ಮದೊಂದು ನಮನ.

— ಗಡಿನಾಡ ಕ್ರಾಂತಿ ಟೀಮ್

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!