- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಅಮೋಘಸಿದ್ಧ ಜಾತ್ರಾ ಉತ್ಸವ : ಅಧಿಕಾರಿಗಳಿಂದ ಸಭೆ

ಅಮೋಘಸಿದ್ಧ ಜಾತ್ರಾ ಉತ್ಸವ : ಅಧಿಕಾರಿಗಳಿಂದ ಸಭೆ

ವಿಜಯಪುರ : ಜಿಲ್ಲೆಯ ತಿಕೋಟಾ ತಾಲೂಕಿನ ಜಾಲಗೇರಿ ಮತ್ತು ಅರಕೇರಿ ಗ್ರಾಮದಲ್ಲಿ ಡಿ.4 ರಿಂದ ಮೂರು ದಿನಗಳ ವರೆಗೆ ಜರುಗಲಿರುವ ಅಮೋಘಸಿದ್ಧ ಮುಮ್ಮಟಗುಡ್ಡ ದೇವಸ್ಥಾನದ ಜಾತ್ರಾ ಉತ್ಸವದಲ್ಲಿ 2 ರಿಂದ 3 ಲಕ್ಷದಷ್ಟು ಭಕ್ತಾಧಿಗಳು ಭಾಗವಹಿಸಲಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಪ್ರತಿಯೊಬ್ಬರು ಮಾಸ್ಕ ಧರಿಸಿ, ಸ್ಯಾನಿಟೈಜರ್ ಬಳಸಿ, ಸಾಮಾಜಿಕ ಅಂತರದೊಂದಿಗೆ ಈ ಜಾತ್ರಾ ಉತ್ಸವದಲ್ಲಿ ಪಾಲ್ಗೊಳ್ಳಲು ಮಾತ್ರ ಅವಕಾಶ ಇರುತ್ತದೆ ಎಂದು ತಿಕೋಟಾ ತಹಶೀಲ್ದಾರ ಅವರು ಹೇಳಿದರು.

https://gadinaadakranti.com/teachers-need-to-be-homeless-the-wonderful-words-of-gavisiddheshwar-swamiji/

ತಿಕೋಟಾದಲ್ಲಿ ಇಂದು ದೇವಸ್ಥಾನದ ಸಮಿತಿ ಹಾಗೂ ಗ್ರಾಮದ ಮುಖಂಡರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಕೋವಿಡ್ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಸರ್ಕಾರದ ಮಾರ್ಗಸೂಚಿಯಂತೆ ಪ್ರತಿಯೊಬ್ಬರು ಜಾತ್ರೆಯಲ್ಲಿ ಭಾಗವಹಿಸಿ, ಒಂದು ವೇಳೆ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿ, ಜಾತ್ರಾ ಉತ್ಸವ ನಡೆಸಿದ್ದು ಕಂಡುಬಂದಲ್ಲಿ ಸಂಬಂಧಪಟ್ಟ ದೇವಸ್ಥಾನದ ಸಮಿತಿಯವರ ಮೇಲೆ ಕಾನೂನಿನ ಪ್ರಕಾರ ಪ್ರಕರಣ ದಾಖಲಿಸಲಾಗುವುದು ಎಂದು ಅವರು ತಿಳಿಸಿದರು.

https://gadinaadakranti.com/why-juveniles-are-illegal/

ಈ ಸಂದರ್ಭದಲ್ಲಿ ವಿಜಯಪುರ, ಉಪವಿಭಾಗಾಧಿಕಾರಿಗಳು, ಡಿವೈಎಸ್ಪಿ, ದೇವಸ್ಥಾನದ ದೇವಸ್ಥಾನದ ಸಮಿತಿಯವರು ಹಾಗೂ ಗ್ರಾಮದ ಮುಖಂಡರು, ಹಿರಿಯರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!