- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯನೂತನ ಲೋಕಾಯುಕ್ತರಾಗಿರುವ ವಿಜಯಪುರದ ಬಿಎಸ್ ಪಾಟೀಲರ ಜರ್ನಿ

ನೂತನ ಲೋಕಾಯುಕ್ತರಾಗಿರುವ ವಿಜಯಪುರದ ಬಿಎಸ್ ಪಾಟೀಲರ ಜರ್ನಿ

ವಿಜಯಪುರ: ಅತ್ಯುನ್ಯತವಾದ (lokayukta karnataka) ಲೋಕಾಯುಕ್ತ (lokayukta bs patil) ಹುದ್ದೆಗೆ ಬಿ.ಎಸ್. ಪಾಟೀಲ್ ಅವರು ನೇಮಕವಾಗುವ ಮೂಲಕ (Vijayapura) ಗುಮ್ಮಟ ನಗರಿಯ ಕೀರ್ತಿ ಇನ್ನಷ್ಟು ಹೆಚ್ಚಿಸಿದಂತಾಗಿದೆ.

ಮೂಲತಃ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಪಡೇಕನೂರು ಗ್ರಾಮದರಾದ ಬಿಎಸ್ ಪಾಟೀಲರು, ಉಪಲೋಕಾಯುಕ್ತ ಹುದ್ದೆಯಿಂದ, ಲೋಕಾಯುಕ್ತ (lokayukta bs patil) ಹುದ್ದೆಗ ನೇಮಕವಾಗಿದ್ದಾರೆ. ಈ ಹಿಂದೆ ಎರಡುವರೆ ವರ್ಷಗಳಿಂದ ಉಪಲೋಕಾಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಬೆಂಗಳೂರಿನಲ್ಲಿ 1980 ಸೆಪ್ಟೆಂಬರ್ 5 ರಂದು ವಕೀಲ ವೃತ್ತಿ ಆರಂಭಿಸಿದ್ದರು. 2004ರಲ್ಲಿ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು.

13 ವರ್ಷ 7 ತಿಂಗಳು ಹೈಕೋರ್ಟ್ ನ್ಯಾಯಮೂರ್ತಿಯಾಗಿ ಉತ್ತಮ ಕಾರ್ಯ ಮಾಡಿದ ಪಾಟೀಲರು, 2019ರಲ್ಲಿ ಉಪಲೋಕಾಯುಕ್ತರಾಗಿ ನೇಮಕವಾಗಿದ್ದರು, ಇದೀಗ ಲೋಕಾಯುಕ್ತ ಹುದ್ದೆಗೆ ನೇಮಕ ಮಾಡಿ ಸರ್ಕಾರ ಆದೇಶ ಮಾಡಿದೆ. ಬಿ.ಎಸ್. ಪಾಟೀಲ ಎಂದೇ ಪ್ರಖ್ಯಾತಿ ಪಡೆದ ಇವರ ಪೂರ್ಣ ಹೆಸರು ಭೀಮನಗೌಡ ಸಂಗನಗೌಡ ಪಾಟೀಲ್. 1956 ಜೂನ್ 1 ರಂದು ಪಡೇಕನೂರು ಗ್ರಾಮದಲ್ಲಿ ಜನಿಸಿದ್ದಾರೆ.

ಬಿಎಸ್ ಪಾಟೀಲ್ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಣ ಸ್ವಗ್ರಾಮದಲ್ಲಿ ಕಲಿತರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕಲಾ ವಿಭಾಗ, ಲಾ ಕಾಲೇಜಿನಲ್ಲಿ ಎಲ್ ಎಲ್ ಬಿ ಪದವಿ ಪೂರೈಕೆ ಮಾಡಿದ್ದಾರೆರ. ಎಲ್ ಎಲ್ ಬಿ ಅಂತಿಮ ವರ್ಷದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಕೆಲ ದಿನಗಳ ಹಿಂದೆ ಬಾಣಂತಿಯರ ಹೊಲಿಗೆ ಬಿಚ್ಚಿ ನರಳಾಡಿದ ಪ್ರಕರಣ ಹಿನ್ನಲೆಯಲ್ಲಿ ವಿಜಯಪುರ ಜಿಲ್ಲಾಸ್ಪತ್ರೆಗೆ ಭೇಟಿ, ನೀಡಿ ಸಮಸ್ಯೆ ಆಲಿಸಿ, ಸ್ವಯಂಪ್ರೇರಿತ ದೂರು ದಾಖಲಿಸಿ, ಪ್ರಕರಣ ಸಂಬಂಧಿಸಿದಂತೆ ಬಿ.ಎಸ್. ಪಾಟೀಲರು ವರದಿ ಕೇಳಿದ್ದರು.

lokayukta bs patil Family
lokayukta bs patil Family

ವೃತ್ತಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಬಿಎಸ್ ಪಾಟೀಲರು ಲೋಕಾಯುಕ್ತರಾಗಿ ನೇಮಕವಾಗಿದ್ದರಿಂದ ಅವರ ಕುಟುಂಬಸ್ಥರು ಸೇರಿದಂತೆ ಗುಮ್ಮಟ ನಗರಿಯ ಜನತೆಯು ಹೆಮ್ಮೆ ಪಡುವಂತಾಗಿದೆ.

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!