- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಪುಟ್ಬಾಲ್ ಆಟಗಾರರು ಗುಮ್ಮಟನಗರಿಯ ಕೀರ್ತಿ ಹೆಚ್ಚಿಸಲಿ. ಮಾಜಿ ಸಚಿವ ಅಪ್ಪಾಸಾಹೇಬ ಹಾರೈಕೆ

ಪುಟ್ಬಾಲ್ ಆಟಗಾರರು ಗುಮ್ಮಟನಗರಿಯ ಕೀರ್ತಿ ಹೆಚ್ಚಿಸಲಿ. ಮಾಜಿ ಸಚಿವ ಅಪ್ಪಾಸಾಹೇಬ ಹಾರೈಕೆ

ವಿಜಯಪುರ: ನಗರದ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ, ಫುಟ್ಬಾಲ್ ಸಂಸ್ಥೆ ವತಿಯಿಂದ ಜಿಲ್ಲಾ 2ನೇ ಮಿನಿ ಓಲಿಂಪಿಕ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ತೆರಳುತ್ತಿರುವ ಜಿಲ್ಲೆಯ 14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಗೆ ಮಾಜಿ ಸಚಿವ ಹಾಗೂ ಫುಟ್ಬಾಲ್ ಸಂಸ್ಥೆಯ ವಿಜಯಪುರ ಜಿಲ್ಲಾಧ್ಯಕ್ಷ ಅಪ್ಪು ಪಟ್ಟಣಶೆಟ್ಟಿ ಸಮವಸ್ತ್ರವನ್ನು ಅನಾವರಣಗೊಳಿಸಿ, ವಿತರಿಸಿದರು.

ನಂತರ ಮಾತನಾಡಿದ ಅಪ್ಪು ಪಟ್ಟಣಶೆಟ್ಟಿ, ಈ ಮೊದಲು ವಿಜಯಪುರದಲ್ಲಿ ಫುಟ್ಬಾಲ್ ಜನಪ್ರಿಯತೆಗೊಂಡಿತ್ತು, ನಂತರದ ದಿನಗಳಲ್ಲಿ ಕ್ರಿಕೆಟ್ ಹೆಚ್ಚು ಜನಪ್ರೀಯತೆ ಪಡೆದುಕೊಂಡಿತು.  ಆದರೂ ಫುಟ್ಬಾಲ್ ಗೆ ಹೆಸರಾಗಿರುವ ಬಸವ ನಾಡಿನಲ್ಲಿ ಮತ್ತೆ ಜನಪ್ರೀಯತೆ ತಂದು ಕೊಡುವುದಾಗಿ ಭರವಸೆ ವ್ಯಕ್ತಪಡಿಸಿದರು.

ನಾನು ಸಂಸ್ಥೆಯ ಅಧ್ಯಕ್ಷನಾದ ಬಳಿಕ ಆಸಕ್ತರನ್ನು ಗುರುತಿಸಿ ಸರಿಯಾದ ಮಾರ್ಗದರ್ಶನ ನೀಡುವುದರ ಜೊತೆಯಲ್ಲಿಯೇ ಆಸಕ್ತಿ ಬೆಳೆಸಲು ಪ್ರಯತ್ನ ಮಾಡಿದ್ದೇನೆ.  ನನ್ನ ಜೊತೆಗೆ ನಗರದ  ಬಹುತೇಕರು ಕೈಜೋಡಿಸಿದ್ದಾರೆ.  ಇನ್ನೂ ಹೆಚ್ಚಿನ ಜನರು ಪ್ರೋತ್ಸಾಹ ನೀಡಬೇಕು.  ಈಗಾಗಲೇ ನಗರದ ಉದ್ಯಮಿ ರಾಜು ಬಿಜ್ಜರಗಿ, ಆಬೀದ ಸಂಗಮ, ಉಮೇಶ ಕಾರಜೋಳ, ವಿವೇಕ ಹರಕಾರಿ ಅವರಂಥ  ಫುಟಬಾಲ್ ಪ್ರೀಯರು ಕ್ರೀಡಾಪಟುಗಳಿಗೆ ಸಮವಸ್ತ್ರವಿತರಿಸುವ ಮೂಲಕ ಸ್ಪಂದಿಸಿದ್ದಾರೆ. ಗುಮ್ಮಟ ನಗರಿಯ ಕ್ರೀಡಾಪಟುಗಳು ತಮ್ಮಲ್ಲಿರುವ ಕೌಶಲ್ಯದ ಮೂಲಕ ಅತ್ಯುತ್ತಮ ಆಟ ಪ್ರದರ್ಶಿಸಿ ವಿಶ್ವಮಟ್ಟದಲ್ಲಿ ಹೆಸರು ಮಾಡಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ವಹಿಸಿದ್ದರು.  ಪ್ರಾಯೋಜಕರಾದ ರಾಜು ಬಿಜ್ಜರಗಿ, ಆಬೀದ ಸಂಗಮ, ಉಮೇಶ ಕಾರಜೋಳ,  ವಿವೇಕ ಹರಿಕಾರಿ, ಸತೀಶ ಬಾಗಿ ಮುಂತಾದವರು ಉಪಸ್ಥಿತರಿದ್ದರು.

ಸಂಘಟಕರಾದ ಮಿಲಿಂದ ಚಂಚಲಕರ, ಕಷ್ಣಾ ಗಾಡಿವಡ್ಡರ, ಡುಮ್ಮ ದರ್ಗಾ, ಸತೀಶ ಪಾಟೀಲ, ಸುಂದರ ಹಲವಾಯಿ, ಅನೀಲ ಹರನಾಳ, ಜಗದೀಶ ಮುಚ್ಚಂಡಿ, ಸನ್ನಿ ಗವಿಮಠ, ವಿನೋದ ಮಣೂರ ಮುಂತಾದವರು ಭಾಗವಹಿಸಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!