- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದ ಮುಖಂಡರು

ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಿದ ಮುಖಂಡರು

ವಿಜಯಪುರ: ವಾಯುವ್ಯ ಪದವೀಧರ ಹಾಗೂ ಶಿಕ್ಷಕರ ಮತಕ್ಷೇತ್ರದ ಚುನಾವಣೆಯ ನಿಮಿತ್ಯವಾಗಿ ಭಾರೆತೀಯ ಜನತಾ ಪಕ್ಷದ (Vijayapura BJP)  ಅಭ್ಯರ್ಥಿಗಳ ಪರವಾಗಿ ನಗರದಲ್ಲಿ ವಿವಿದೆಡೆ, ಮುಖಂಡರಿಂದ ಮತಯಾಚನೆ ಮಾಡಲಾಯಿತು.

 ಮತಯಾಚಚನೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಸೇರಿದಂತೆ ವಿವಿಧ ಮುಖಂಡರು ಬಾಗವಹಿಸಿ, ಪದವೀಧರ ಅಭ್ಯರ್ಥಿ ಹಣಮಂತ ನಿರಾಣಿ, ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಅರುಣ ಶಹಾಪೂರ ಪರವಾಗಿ ಮತಯಾಚಿಸಿದರು.

ಇದೇ ವೇಳೆ ಮಾತನಾಡಿ ಸಂಸದರು, ಶಿಕ್ಷಣ ಕ್ಷೇತ್ರಕ್ಕೆ ಬಿಜೆಪಿ ಕೊಡುಗೆ ಅನನ್ಯ, ಅತೀ ಹೆಚ್ಚು ಪ್ರೌಡಶಾಲೆಗಳ ಸ್ಥಾಪನೆ, ಅತಿಥಿ ಉಪನ್ಯಾಸಕರ ವೇತವನ್ನು ವೈಜ್ಞಾನಿಕವಾಗಿ ನಿಗದಿ, ಸರ್ವ ಶಿಕ್ಷಣ ಅಭಿಯಾನದ ಮೂಲಕ ಶಿಕ್ಷಣ ವಲಯಕ್ಕೆ ಹೊಸ ಸ್ಪರ್ಶ ನೀಡಿದ ಕೊಡುಗೆ ಬಿಜೆಪಿಗೆ ಸಲ್ಲುತ್ತದೆ. ಪದವೀಧರರ ಬಗ್ಗೆ ಹಾಗೂ ಶಿಕ್ಷಕರ ಪರವಾಗಿ ನೈಜ ಕಾಳಜಿ ಹೊಂದಿರುವ ಬಿಜೆಪಿಗೆ ಪದವೀಧರರು ಹಾಗೂ ಶಿಕ್ಷಕರು ಬೆಂಬಲಿಸಬೇಕು (Vijayapura BJP) ಎಂದು ಮತದಾರರಲ್ಲಿ ವಿನಂತಿಸಿಕೊಂಡರು.  

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ, ಮುಖಂಡರಾದ ಚಂದ್ರಶೇಖರ್ ಕವಟಗಿ, ಪ್ರಕಾಶ ಅಣ್ಣಾ ಅಕ್ಕಲಕೋಟ್, ವಿವೇಕಾನಂದ ಡಬ್ಬಿ, ಡಾ.ಸುರೇಶ್ ಬಿರಾದಾರ್, ಪಾಪುಸಿಂಗ್ ರಜಪೂತ, ಸಂತೋಷ್ ನಿಂಬರಗಿ, ರಾಜಶೇಖರ್ ತಾಳಿಕೋಟಿ ರಾಜೇಶ್ ತಾವಸೆ , ಬಿಜೆಪಿ ನಗರ ಮಂಡಲ ಅಧ್ಯಕ್ಷ ಮಲ್ಲನಗೌಡ ಪಾಟೀಲ್, ಗೋಪಾಲ ಘಟಕಾಂಬ್ಳೆ, ಭೀಮಾಶಂಕರ ಹದನೂರ, ವಿನಾಯಕ ಗೌಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!