- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಭಗವಾನ್ ತೀರ್ಥಂಕರ ಅದ್ಧೂರಿ ಮೆರವಣಿಗೆ

ಭಗವಾನ್ ತೀರ್ಥಂಕರ ಅದ್ಧೂರಿ ಮೆರವಣಿಗೆ

ಮುದ್ದೇಬಿಹಾಳ:  ಪಟ್ಟಣದಲ್ಲಿ ಜೈನ್ ಶ್ವೇತಾಂಬರ ಮಂದಿರ ಜೀರ್ಣೋದ್ಧಾರ ನಿಮಿತ್ತ ಭಗವಾನ್ ತೀರ್ಥಂಕರ ಮೂರ್ತಿ ಮೆರವಣಿಗೆ ನಗರದ ಜೈನ್ ಮಂದಿರದಿಂದ ವೈಭವಪೂರಿತವಾಗಿ ಜರುಗಿತು.

ಆನೆ ,ಕುದರೆಗಳು, ಸಕಲ ಮಂಗಲ ವಾದ್ಯಗಳ ಮೇಳದಲ್ಲಿ ಹೆಜ್ಜೆಹಾಕಿದ ಹಿರಿಯರು ಕಿರಿಯರು, ಆಕರ್ಷಕ ಮೆರವಣಿಗೆಯಲ್ಲಿ ಪಾಲ್ಗೋಂಡು ಭಕ್ತರು, ಪರಮಪೂಜ್ಯರ ಆಶೀರ್ವಾದ ದರ್ಶನ ಪಡೆದರು.

ಇದನ್ನೂ ಓದಿ… ಸ್ವಾತಂತ್ರ್ಯ ಹೋರಾಟ: ಕ್ರಾಂತಿ ಕೇಸರಿ ಮತ್ತು ಹಂಡ ವಜೀರ ಸೈನಿಕರು

ಮೆರವಣಿಯಲ್ಲಿ ದಾರಿವುದ್ದಕ್ಕೂ ಮಹಿಳೆಯರು, ಯುವಕರು ಎನ್ನದೆ ಎಲ್ಲರೂ ಸಂತಸ ಸಡಗರದಿಂದ ಭಗವಾನ್ ತೀರ್ಥಂಕರ ಮೂರ್ತಿ ಭವ್ಯ ಮೆರವಣಿಗೆ ಮಾಡಿದರು. ಮೆರವಣಿಗೆಯಲ್ಲಿ ಜೈನ್ ಧರ್ಮದ ಪೂಜ್ಯರಾದ ಶ್ರೀ ಅಜಿತ್ ಶೇಖರ ಸೂರಿ ಮಹಾರಾಜರು ಮೆರವಣಿಗೆ ಮಾಡಲಾಯಿತು. ಬೆಳ್ಳಿಯ ಸಾರೋಟದಲ್ಲಿ ಭಗವಾನ್ ತೀರ್ಥಂಕರ ಮೂರ್ತಿಯ ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಬಾಬುಲಾಲ್ ಓಸ್ವಾಲ್, ಬೋರಮಲ್ ಓಸ್ವಾಲ್, ಗುಲಾಬಚಂದ್ ಓಸ್ವಾಲ್, ಮಹೇಂದ್ರ ಓಸ್ವಾಲ್, ಸತೀಶ್ ಓಸ್ವಾಲ್, ಡಾ.ಕಿರಣ್ ಓಸ್ವಾಲ್, ಸಂಜಯ್ ಓಸಯ,ವಿಕ್ರಮ್ ಓಸ್ವಾಲ್, ಪಟ್ಟಣದ ಗಣ್ಯರಾದ ಎಂ.ಬಿ ನಾವದಗಿ, ಬಸವರಾಜ ಮೋಟಗಿ, ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಸಂಗಮ್ಮ ದೇವರಳ್ಳಿ, ಸೇರಿದಂತೆ ಜೈನ ಸಮುದಾಯದ ಜನರು, ಮುದ್ದೇಬಿಹಾಳ ಪಟ್ಟಣದ ಸಾರ್ವಜನಿಕರು ಪಾಲ್ಗೊಂಡಿದ್ದರು.

https://gadinaadakranti.com/bhagavad-gita-competition-vaishnavi-elected-to-the-district-level/

ಜೈನ್ ಮಹಿಳಾ ಉದ್ಯೋತ್ ಮಂಡಲ ಹಾಗೂ ಮಹಿಳಾ ಬಾಲಕಿಯರ ಮಂಡಲ ಮತ್ತು ಜೈನ್ ಮಹಾವೀರ ಮಂಡಲದ ಪದಾಧಿಕಾರಿಗಳು ಪಟ್ಟಣದ ಗಣ್ಯರು ಪ್ರಮುಖರು ಭಾಗವಹಿಸಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!