- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಜ್ಯಕಸಾಪ ರಾಜ್ಯಾಧ್ಯಕ್ಷರಿಂದ ಕೋಟಿ ಸದಸ್ಯ ಸಂಕಲ್ಪ

ಕಸಾಪ ರಾಜ್ಯಾಧ್ಯಕ್ಷರಿಂದ ಕೋಟಿ ಸದಸ್ಯ ಸಂಕಲ್ಪ

ವಿಜಯಪುರ: ಕನ್ನಡದ ಕಾಯಕ ಮಾಡಲು ಕೋಟಿ ಸದಸ್ಯರನ್ನು ಮಾಡುವ ಸಂಕಲ್ಪ ನನ್ನದಾಗಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಭರವಸೆ ವ್ಯಕ್ತಪಡಿಸಿದರು.

ನಗರದ ಕಂದಗಲ್ ಶ್ರೀ ಹಣಮಂತರಾಯ ರಂಗಮಂದಿರದಲ್ಲಿ ಇಂದು ಜರುಗಿದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ಜನಸಾಮಾನ್ಯರು ಭಾಗವಹಿಸುವಂತೆ ಮಾಡುವ ಕನಸು ನನ್ನದು. ರಾಜ್ಯಾಧ್ಯಕ್ಷ, ಅಧ್ಯಕ್ಷ ಹಾಗೂ ತಾಲೂಕಾ ಅಧ್ಯಕ್ಷರುಗಳು ಒಂದು ಬಾರಿ ಆಯ್ಕೆಗೆ ಮಾತ್ರ ಅರ್ಹರು. ಇದನ್ನು ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮಂಡಿಸಲಾಗುವುದು ಎಂದು ಹೇಳಿದರು.

https://gadinaadakranti.com/rajeshwari-tejaswi-is-no-more/

ಈಗಾಗಲೇ ಇದಕ್ಕೆ ತಜ್ಞರ ಸಮಿತಿಯನ್ನು ನೇಮಕ ಮಾಡಲಾಗಿದೆ. ಸಾಹಿತ್ಯದ ಚಟುವಟಿಕೆಗಳನ್ನು ಅರ್ಥಪೂರ್ಣವಾಗಿ ನಡೆಸಲು ಎಲ್ಲಾ ಜಿಲ್ಲಾಧ್ಯಕ್ಷರಿಗೆ ಸೂಚಿಸಲಾಗುವುದು. ಪ್ರತಿ ತಾಲೂಕಿನ ಸಾಹಿತ್ಯ ಪರಿಷತ್ತ ಕೇಂದ್ರಗಳಿಗೆ ಭೇಟಿ ನೀಡಿ ಸಾಹಿತ್ಯದ ಕುರಿತು ಅಭಿರುಚಿ ಮೂಡಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆಯ ಉಪ ಆಯುಕ್ತರಾದ ಮಹಾವೀರ ಬೋರಣ್ಣವರ, ಡಾ. ವಿ.ಡಿ. ಐಹೊಳ್ಳಿ, ಭಾರತಿ ಪಾಟೀಲ, ವಿದ್ಯಾವತಿ ಅಂಕಲಗಿ, ವಿಜಯಕುಮಾರ ಘಾಟಗೆ, ದಿಲಾವರ ಖಾಜಿ, ಡಾ. ಡಿ.ಆರ್. ನಿಡೋಣಿ, ಆರ್.ವಾಯ್. ಕೊಣ್ಣೂರ, ಕಬೂಲ ಕೊಕಟನೂರ, ಮಹಾದೇವ ರೆಬಿನಾಳ, ಡಾ. ಆನಂದ ಕುಲಕರ್ಣಿ, ಕೆ.ಸುನಂದಾ, ಮಲ್ಲಿಕಾರ್ಜುನ ಅವಟಿ, ಸಂಗಮೇಶ ಸಗರ ಮುಂತಾದವರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!