- Advertisement -Newspaper WordPress Theme
ಅಂಕಣಗಳುಕರುನಾಡ ರತ್ನ“ಆಲಗೂರ ಜ್ಞಾನ”. ಇದು ಸರಕಾರಿ ಶಿಕ್ಷಕನ ವಿಶೇಷ ಶೋ…

“ಆಲಗೂರ ಜ್ಞಾನ”. ಇದು ಸರಕಾರಿ ಶಿಕ್ಷಕನ ವಿಶೇಷ ಶೋ…

“ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭೆಯನ್ನು ಹೊರಗಡುವುದೇ ಶಿಕ್ಷಣ” ಸ್ವಾಮಿ ವಿವೇಕಾನಂದರ ವಾಣಿಯಂತೆ ಶಾಲಾ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಲು, ಇಲ್ಲೊಂದು ಸರಕಾರಿ ಶಾಲೆಯಲ್ಲಿ (algur school) ನಿರಂತರವಾಗಿ ವಿನೂತನ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ, ದೂರದರ್ಶನದಲ್ಲಿ ಮೂಡಿ ಬರುವ ಹೆಸರಾಂತ ಕಾರ್ಯಕ್ರಮಗಳಾದ Super Minit ಹಾಗೂ Big Boss ನ ಚಟುವಟಿಕೆಗಳನ್ನು ಗಣಿತ ವಿಷಯಕ್ಕೆ ಅನ್ವಯಿಸಿ ಹಲವಾರು ಆಟಗಳನ್ನು ಆಡಿಸುತ್ತಾ ವಿಭಿನ್ನ ರೀತಿಯ ಶೈಕ್ಷಣಿಕ ಚಟುವಟಿಕೆಗಳಿಗೆ ಇಲ್ಲಿಯ ಸರಕಾರಿ ಶಾಲೆ ಮಾದರಿಯಾಗಿದೆ.

ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರ ಸರಕಾರಿ ಶಾಲೆಯಲ್ಲಿ(algur school) ವಿಭಿನ್ನವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ, ಮಕ್ಕಳಲ್ಲಿ ಕೌಶಲ್ಯತೆಯನ್ನು ಬೆಳೆಸುತ್ತಿದ್ದಾರೆ. ಪ್ರತಿ ದಿನವೂ ಒಬ್ಬ ಮಹಾತ್ಮರ, ಸಾಹಿತಿಗಳ, ಸ್ವಾತಂತ್ರ್ಯ ಹೋರಾಟಗಾರರ ಜನ್ಮದಿನವನ್ನು ಆಚರಿಸುತ್ತಾ, ಮಕ್ಕಳಿಗೆ ನಾಯಕರುಗಳ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಹೇಳಲಾಗುತ್ತಿದೆ.

ಇನ್ನು ವಿಶೇಷವೆಂದರೆ, ಈ ಶಾಲೆಯಲ್ಲಿ “ಮಕ್ಕಳ ಬ್ಯಾಂಕ್”ನ್ನು ಸ್ಥಾಪಿಸಲಾಗಿದೆ. ಇದರ ವಿಶೇಷತೆ ಎಂದರೆ ವಿವಿಧ ಸಾರ್ವಜನಿಕ ಬ್ಯಾಂಕ್‌ಗಳ ತೆ ಜಮಾ ಅರ್ಜಿ, ಹಿಂಪಡೆಯುವ ಅರ್ಜಿ, ಪಾಸ್ ಬುಕ್ ಹಾಗೂ ಜಮಾ ಖರ್ಚಿನ ಅರ್ಜಿಗಳನ್ನು ನಮೂದಿಸಲಾಗಿದೆ. ಈ ಬ್ಯಾಂಕಿನ್ ಜವಾಬ್ದಾರಿಯನ್ನು ತರಗತಿಯ ವಿದ್ಯಾರ್ಥಿಗಳೇ ನಿರ್ವಹಿಸುವುದು ವಿಶೇಷ.

ಶ್ರೀನಿವಾಸ್ ರಾಮಾನುಜನ್ ಎಂಬ ಗಣಿತ ಶಾಸ್ತ್ರಜ್ಞನ ಹೆಸರಿನಲ್ಲಿ ಗಣಿತ ಸಂಘವನ್ನು ಸ್ಥಾಪಿಸಿ ಪ್ರತಿ ತಿಂಗಳು ವಿಶಿಷ್ಟವಾದ ಗಣಿತ ಚಟುವಟಿಕೆಗಳನ್ನು ಹಮ್ಮಿಕೊಂಡು ಮಕ್ಕಳಲ್ಲಿ ಗಣಿತದ ಬಗ್ಗೆ ಆಸಕ್ತಿಯನ್ನು ಉಂಟುಮಾಡಲಾಗುತ್ತಿದೆ. ಡಿಸೆಂಬರ್ 22 ರಂದು ಶ್ರೀನಿವಾಸ ರಾಮಾನುಜನ್‌ರ ಜನ್ಮದಿನದ ಅಂಗವಾಗಿ ಮಕ್ಕಳಲ್ಲಿ ವ್ಯವಹಾರ ಜ್ಞಾನ ಬೆಳೆಸಲು ಆಲಗೂರ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಕ್ಕಳ ಸಂತೆ ಮೇಳ ಏರ್ಪಡಿಸಲಾಗಿತ್ತು. ಇದು ಜನರ ಮೆಚ್ಚುಗೆಗೆ ಪಾತ್ರವಾಯಿತು.

ಪ್ರತಿ ವಾರ ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿಸಲು ರಸಪ್ರಶ್ನೆ ಸ್ಪರ್ಧೆ ಹಮ್ಮಿಕೊಳ್ಳಲಾಗುತ್ತಿದೆ. ಜೊತೆಗೆ ಇತ್ತಿಚೆಗಂತೂ ಕನ್ನಡದ ಕೋಟ್ಯಾಧಿಪತಿ ಮಾದರಿಯಂತೆ “ಆಲಗೂರ ಜ್ಞಾನ” (algur school) ಎಂಬ ರಸಪ್ರಶ್ನೆ ಸ್ಪರ್ಧೆ ನಡೆಸಲಾಗುತ್ತಿದೆ. ಟಿ.ವಿಯಲ್ಲಿನ ಶೋನಂತೆಯೇ ಆಧುನಿಕ ಉಪಕರಣಗಳನ್ನು ಬಳಸಿ ನಡೆಸುತ್ತಿರುವುದು ತುಂಬಾ ವಿಶೇಷವಾಗಿದೆ. ಈ ಕಾರ್ಯಕ್ರಮವನ್ನು ಪ್ರತಿ ತಿಂಗಳು ಮಾಡಲಾಗುತ್ತಿದ್ದು ಅತೀ ಹೆಚ್ಚು ಜನಪ್ರಿಯವಾಗಿ ಹೊರಹೊಮ್ಮಿದೆ.

ಬರೀ ಕಾರ್ಯಕ್ರಮಗಳು ಅಷ್ಟೇ ಅಲ್ಲದೆ ಸರ್ಕಾರ ಹಮ್ಮಿಕೊಳ್ಳುವ NMMS ಪರೀಕ್ಷೆಯಲ್ಲಿ ಇಲ್ಲಿಯವರೆಗೆ ನಮ್ಮ ಶಾಲೆಯ 17 ವಿದ್ಯಾರ್ಥಿಗಳು, ಮುರಾರ್ಜಿಯಲ್ಲಿ 12 ಮಕ್ಕಳು, RMSA ಯಲ್ಲಿ 6 ಮಕ್ಕಳು ಉತ್ತೀರ್ಣರಾಗಿದ್ದು, ಯಾವುದೇ ಖಾಸಗಿ ಕೋಚಿಂಗ್ ಸೆಂಟರ್ ಗಳಿಗೆ ಕಡಿಮೆ ಇಲ್ಲವೆಂದು ತೋರಿದೆ.

ಸುತ್ತಮುತ್ತಲಿನ ಶಾಲೆಗಳಲ್ಲಿ ಏರ್ಪಡಿಸುವ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಶಾಲೆಯ ಮಕ್ಕಳ ಸಾಧನೆ ಅಮೂಲ್ಯವಾದದ್ದು. ಈ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಊರಿನ ಹಲವಾರು ಜನರ ಹಣಕಾಸಿನ ನೆರವು ಹಾಗೂ ಪ್ರೋತ್ಸಾಹವೇ ಕಾರಣವಾಗಿದೆ. ಇಲಾಖೆಯ ಅಧಿಕಾರಿ ವರ್ಗದವರ ಪ್ರೇರಣೆ, ಸಲಹೆ ಈ ಎಲ್ಲ ಚಟುವಟಿಕೆಗಳು ಯಶಸ್ವಿಯಾಗಲು ಸಹಕಾರಿಯಾಗಿದೆ ಎಂಬುದು ನನ್ನ ಅಭಿಪ್ರಾಯವಾಗಿದೆ.

“ನಮ್ಮ ಶಾಲೆಯಲ್ಲಿ ಕಲಿಯಲು ಬರುವ ಬಹುತೇಕ ಮಕ್ಕಳು ಬಡಕುಟುಂಬದವರಾಗಿದ್ದಾರೆ. ಆದ್ದರಿಂದ ಮಕ್ಕಳಲ್ಲಿ ವಿವಿಧ ಕೌಶಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ನಮ್ಮ ಮುಖ್ಯ ಗುರುಗಳು ಹಾಗೂ ಶಿಕ್ಷಕರ ತಂಡದ ನಿರಂತರ ಶ್ರಮ, ಗ್ರಾಮಸ್ಥರ ಹಾಗೂ ಅಧಿಕಾರಿಗಳ ಸಹಕಾರದಿಂದ ನಿರಂತರ ವಿಭಿನ್ನ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿಸುವ ಮಹಾದಾಸೆಯನ್ನು ಹೊಂದಿದ್ದೇವೆ.”

ಆರ್.ಎಸ್.ದೇಸಾಯಿ, ಶಿಕ್ಷಕರು. ಹೆಚ್.ಪಿ.ಎಸ್ ಆಲಗೂರ

— ಗಡಿನಾಡ ಕ್ರಾಂತಿ ಟೀಮ್

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!