- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬಂಗಾರದ ಕಡಿ ಬೆಳೆಯುವ ಭೂಮಿಯಾಗಲಿದೆ. ಶಾಸಕ ಶಿವಾನಂದ ಪಾಟೀಲ ಭವಿಷ್ಯ

ಬಂಗಾರದ ಕಡಿ ಬೆಳೆಯುವ ಭೂಮಿಯಾಗಲಿದೆ. ಶಾಸಕ ಶಿವಾನಂದ ಪಾಟೀಲ ಭವಿಷ್ಯ

ಬಸವನಬಾಗೇವಾಡಿ: ಬರಡು ಭೂಮಿವಿರುವಂತಹ ವಿಜಯಪುರ (Vijayapura) ಜಿಲ್ಲೆ ಬಂಗಾರದ ಕಡಿ ಬೆಳೆಯುವ ಭೂಮಿಯಾಗಲಿದೆ (Krishna Bhagya Jala Nigam) ಎಂದು ಶಾಸಕ ಶಿವಾನಂದ ಪಾಟೀಲ (MLA Shivanand Patil) ಭವಿಷ್ಯ ನುಡಿದರು.

ತಾಲೂಕಿನ ಮುತ್ತಗಿ ಗ್ರಾಮದ ಸಮೀಪವಿರುವ ಕಾಲುವೆಯ ಹತ್ತಿರ ಕೃಷ್ಣಾ ಭಾಗ್ಯ ಜಲ ನಿಗಮದಿಂದ ಮುಳವಾಡ ಏತ ನೀರಾವರಿ 3ನೇ ಹಂತ ರ ಅಡಿಯಲ್ಲಿ ಬರುವ ಹೂವಿನಹಿಪ್ಪರಗಿ ಶಾಖಾ ಕಾಲುವೆ ವಿತರಣಾ ಕಾಲುವೆ ನಂ-2 ರಿಂದ ಮುತ್ತಗಿ ಗ್ರಾಮದ ಕೆರೆ ತುಂಬುವ ಯೋಜನೆಯ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ ಮಾತನಾಡಿದರು.

ಕ್ಷೇತ್ರದ ಜನರು ತಮ್ಮ ಜಮೀನುಗಳನ್ನು ನೀರಾವರಿ ಯೋಜನೆಗಳಿಗೆ, ಉಷ್ಣ ವಿದ್ಯುತ್, ಪವನ ವಿದ್ಯುತ್, ಸೋಲಾರ ವಿದ್ಯುತ್ ಕೇಂದ್ರಗಳಿಗೆ ಬಿಟ್ಟು ಕೊಡುವುದರೊಂದಿಗೆ ರಾಜ್ಯಕ್ಕೆ ಹಾಗೂ ದೇಶಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಜನರ ಪರಿಶ್ರಮಕ್ಕೆ ಪತ್ರಿಫಲ ಸಿಗುವತ್ತಾಗಿದೆ, ಈ ಯೋಜನೆ ಚಿಕ್ಕದಾದರೂ ಮುತ್ತಗಿ ಗ್ರಾಮದ ಕೆರೆ ತುಂಬಿಸುವುದ್ದರಿಂದ ಮುತ್ತಗಿ, ಟಕ್ಕಳಕಿ, ನಾಗವಾಡ ಗ್ರಾಮದ ಸು.500 ಎಕರೆ ಜಮೀನಿಗೆ ಲಾಭವಾಗಲಿದೆ, ಗ್ರಾಮಸ್ಥರು ಕೆರೆ ತುಂಬಿಸುವಂತೆ ಮನವಿ ಮಾಡಿಕೊಂಡಿದ್ದರಿಂದಾಗಿ (Krishna Bhagya Jala Nigam) ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳರ ಗಮನಕ್ಕೆ ತಂದಾಗ ಅವರು ಮಂಜೂರು ಮಾಡಿದ್ದಾರೆ ಮುಂಬರುವಂತ ದಿನಗಳಲ್ಲಿ ನೀರಾವರಿಗೆ ಸಂಬಂಧಿಸಿದಂತೆ 290 ಕೋ. ರೂ.ಗಳ ಅನುದಾನ ಮಂಜೂರು ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಈಗಾಗಲೇ ಕ್ಷೇತ್ರದ ರೈತರು ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿರುವುದು ಕಂಡು ಬಂದಿದೆ, ಈ ಬಾರಿ ಉಕ್ರೇನ್ ಯುದ್ಧದಿಂದಾಗಿ ಈ ಭಾರಿ ಗೋಧಿಯನ್ನು ಬೆಳೆದರೆ ಗೋಧಿ ಬೆಳೆಗೆ ಬಂಗಾರದ ಬೆಲೆ ಬರಬಹುದು. ಅದಕ್ಕಾಗಿ ರೈತರು ಹೆಚ್ಚು ಗೋಧಿಯನ್ನು ಬೆಳೆದರೆ ಸೂಕ್ತ ಬೆಲೆ ಸಿಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ರಮೇಶ ಸೂಳಿಬಾವಿ, ಪ್ರೇಮುಗೌಡ ಮ್ಯಾಗೇರಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ತೇಜಶ್ವಿನಿ ಉಣ್ಣೀಭಾವಿ ಅಧ್ಯಕ್ಷತೆವಹಿಸಿದರು. ಗ್ರಾಪಂ ಉಪಾಧ್ಯಕ್ಷ ಕನಕಪ್ಪ ಬಂಡಿವಡ್ಡರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಹುಚ್ಚಪ್ಪಮುತ್ಯಾ ಕಮತಗಿ, ಎಸ್.ಜಿ.ಪಾಟೀಲ, ಬಸಪ್ಪ ದೇವಣಂಗಾವಿ, ನೀಲಾ ಪಾಟೀಲ, ರಾಜೇಶ್ವರಿ ಯರನಾಳ, ಎಇಇ ಶಿವನಗೌಡ ಬಿರಾದಾರ ಇದ್ದರು.

ಇದೆ ವೇಳೆ ಕುರಿ ನಿಗಮ ಮಂಡಳಿಯಿಂದ ಇತ್ತೀಚೆಗೆ ಜು.18ರಂದು ಕೂಡಗಿ ರೈಲು ಹಳಿಯಲ್ಲಿ ರೈಲ್ವೇಗೆ ಸಿಲುಕಿ ಅಪಘಾತದಲ್ಲಿ ಮೃತಪಟ್ಟ ಕುರಿಗಳ ಮಾಲೀಕರಿಗೆ 4,69,500ರೂ ಮೊತ್ತದ ಚಕ್‌ನ್ನು ಶಾಸಕರು ಹಾಗೂ ನಿಗಮ ಮಂಡಳಿಯ ಅಧಿಕಾರಿಗಳು ವಿತರಿಸಿದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!