- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯವಿಜಯಪುರದ ಮಲ್ಲಿನಾಥ ಬಸದಿಯಲ್ಲಿ ಪೂಜೆಗೆ ಅವಕಾಶ ಕೇಳಿದ ಹಿಂದೂ ಮುಖಂಡರು

ವಿಜಯಪುರದ ಮಲ್ಲಿನಾಥ ಬಸದಿಯಲ್ಲಿ ಪೂಜೆಗೆ ಅವಕಾಶ ಕೇಳಿದ ಹಿಂದೂ ಮುಖಂಡರು

ವಿಜಯಪುರ: ಅಭಿನವ ಪಂಪ ನಾಗಚಂದ್ರರು (kavi nagachandra) ನಿರ್ಮಿಸಿದ ಮಲ್ಲಿನಾಥ ಬಸದಿಯಲ್ಲಿ (mallinath jinendra basadi) ಪೂಜೆಗೆ ಅವಕಾಶ ಕಲ್ಪಿಸಬೇಕೆಂದು (Vijayapura) ಇತಿಹಾಸಕಾರ ಡಾ. ಆನಂದ ಕುಲಕರ್ಣಿ ಜಿಲ್ಲಾಡಳಿತಕ್ಕೆ ಆಗ್ರಹಿಸಿದರು.

ವಿಜಯಪುರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ. ಆನಂದ ಕುಲಕರ್ಣಿ, ಕ್ರಿ.ಶ. 11 ನೇ ಶತಮಾನದ ಅಭಿನವ ಪಂಪ ಬಿರುದಾಂಕಿತ ನಾಗಚಂದ್ರ ಕವಿ ಅಂದು ವಿಜಯಪುರಕ್ಕೆ ಅಲಂಕಾರ ವಾಗುವಂತಹ ಮಲ್ಲಿನಾಥ ಬಸದಿಯನ್ನು ಕಟ್ಟಿಸಿದೆ ಎಂದು ನಾಗಚಂದ್ರರೇ ಬರೆದ ಮಲ್ಲಿನಾಥ ಪುರಾಣಂ ನಲ್ಲಿ ಉಲ್ಲೇಖಗಳು ಸಿಗುತ್ತವೆ ಎಂದರು.

ಈ ಮಲ್ಲಿನಾಥ ಬಸದಿಯ ಸಂಪೂರ್ಣ ವಿಡಿಯೋ ಇಲ್ಲಿದೆ ಮಿಸ್ ಮಾಡದೆ ನೋಡಿ

ಅಲ್ಲದೆ ಕರ್ನಾಟಕದ ಹಿರಿಯ ಸಂಶೋಧಕರಾಗಿದ್ದ ಎಂಎಂ ಕಲಬುರ್ಗಿಯವರು ತಮ್ಮ ಮಾರ್ಗ ಎರಡರ ಕೃತಿಯಲ್ಲಿ ಈ ಬಸದಿಯ (kavi nagachandra) ಕುರಿತಾಗಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೆ ಈ ನಾಡಿನ ಇತಿಹಾಸಕಾರರಾದ ಡಾ. ವಿಜಯಾ ದಬ್ಬೆ, ಡಿ.ವಿ. ಶೇಷಗಿರಿರಾವ್, ಸಿ.ಪಿ. ಕೃಷ್ಣಕುಮಾರ. ಡಾ‌. ಬಿ. ಹಂಡಿ, ಡಾ. ಎಸ್.ಕೆ. ಕೊಪ್ಪ, ಡಾ. ಕಮಲಾ ಹಂಪನಾ, ಹಂಪಾ ನಾಗರಾಜಯ್ಯ ಮತ್ತಿತರ ಸಂಶೋಧಕರು ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ವಿಶ್ವಹಿಂದೂ ಉತ್ತರ ಪ್ರಾಂತ ಪ್ರಮುಖರಾದ ಸುನಿಲ್ ಬೈರವಾಡಗಿ ಮಾತನಾಡಿ, ಇದೊಂದು ಹಿಂದೂ ಪ್ರಾಚೀನ ಸ್ಮಾರಕವಾಗಿದೆ, ಹೀಗೆ ಹಲವಾರು ಮಂದಿರಗಳಲ್ಲಿ ಮಸೀದಿ ನಿರ್ಮಾಣವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತವೆ. ಆದ್ದರಿಂದ ಜಿಲ್ಲಾಡಳಿತ ಸರ್ವೆ ಮಾಡಿ ಅವುಗಳನ್ನು ದೇವಸ್ಥಾನದ ಕಮಿಟಿಗಳಿಗೆ ಪೂಜೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕು, ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ವಿಶ್ವಹಿಂದೂ ಪರಿಷತ್ತಿನಿಂದ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಹಾವೀರ ತಂಗಾ, ಬಜರಂಗದಳದ ಉತ್ತರ ಕರ್ನಾಟಕ ಸಂಯೋಜಕ ಪುಂಡಲಿಕ ದಳವಾಯಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಸಂತೋಷ, ನಾಗಚಂದ್ರ ಪ್ರತಿಷ್ಠಾನದ ಮುಖಂಡರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here

Subscribe Today

GET EXCLUSIVE FULL ACCESS TO PREMIUM CONTENT

SUPPORT NONPROFIT JOURNALISM

EXPERT ANALYSIS OF AND EMERGING TRENDS IN CHILD WELFARE AND JUVENILE JUSTICE

TOPICAL VIDEO WEBINARS

Get unlimited access to our EXCLUSIVE Content and our archive of subscriber stories.

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!