- Advertisement -Newspaper WordPress Theme
ಅಂಕಣಗಳುಕೃಷಿ ಸಾಧಕವಿಜಯಪುರದಲ್ಲಿ ಕಾಶ್ಮಿರ ಆಪಲ್ ಬೆಳೆದು ಯಶಸ್ವಿಯಾದ ರೈತ

ವಿಜಯಪುರದಲ್ಲಿ ಕಾಶ್ಮಿರ ಆಪಲ್ ಬೆಳೆದು ಯಶಸ್ವಿಯಾದ ರೈತ

ಕಾಶ್ಮಿರದ ಹಿಮದ ವಾತಾವರಣದಿಂದ ಕೂಡಿದಂತಹ ಸ್ಥಳದಲ್ಲಿ ಬೆಳೆಯುವ ಸೇಬು ಹಣ್ಣನ್ನು ಕೃಷ್ಣಾ ತೀರದ ಕಪ್ಪು ಭೂಮಿಯಲ್ಲಿ ಬೆಳೆಯುವ ಮೂಲಕ ಪ್ರಗತಿಪರ ರೈತನೊಬ್ಬ (farmer balagond) ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ದ್ರಾಕ್ಷೀ ಬೆಳೆಗೆ ಪ್ರಸಿದ್ದವಾದ ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ಪ್ರಗತಿಪರ ರೈತನೊಬ್ಬ ಕಾಶ್ಮೀರಿ ಸೇಬು ಬೆಳೆದು ಇತರರಿಗೆ ಬೆರಗು ಮೂಡಿಸಿದ್ದಾರೆ. ಕಾಶ್ಮೀರದ ಹಿಮದಿಂದ ಕೂಡಿದ ಚಳಿಯ ವಾತಾವರಣದಲ್ಲಿ ಬೆಳೆಯುವ ಸೇಬನ್ನು ವಿಜಯಪುರ ಜಿಲ್ಲೆಯ ಕೋಲ್ಹಾರ ಗ್ರಾಮದ ಪ್ರಗತಿಪರ ರೈತ ಸಿದ್ದಪ್ಪ ಬಾಲಗೊಂಡ (farmer balagond) ಎಂಬಾತರು ಕಪ್ಪು ನೆಲದಲ್ಲಿ ಸೇಬು ಬೆಳೆದಿದ್ದಾರೆ.

ಸಮಶೀತೋಷ್ಣ ಪ್ರದೇಶದಲ್ಲಿ ಮಾತ್ರ ಸೇಬನ್ನು ಬೆಳೆಯಲಾಗುತ್ತದೆ. ಇದರ ಬೆಳವಣಿಗೆಗೆ 4 ರಿಂದ 21 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಟಾಂಶ ಸೂಕ್ತ, ಅಲ್ಲದೇ ವಾರ್ಷಿಕವಾಗಿ 100 ರಿಂದ 124 ಸೆ ಮಿ ನಷ್ಟು ವಾರ್ಷಿಕವಾಗಿ ಮಳೆ ಬೇಕಾಗುತ್ತದೆ. ಆದರೆ ಬರ ಪೀಡಿತ ಜಿಲ್ಲೆಯಲ್ಲಿ ಕಪ್ಪು ಮಣ್ಣಿನಲ್ಲಿ ರೈತ ಸಿದ್ದಪ್ಪ ಬಾಲಗೊಂಡು ಸೇಬು ಬೇಳೆಯುವ ಮೂಲಕ‌ ಇತರರಿಗೆ  ಮಾದರಿಯಾಗಿದ್ದಾರೆ.

ಇನ್ನೂ ಭಾರತದ ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಾಂಡ್, ಪಂಜಾಬ್, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮೇಘಾಲಯ ಸೇರಿದಂತೆ ದಕ್ಷಿಣ ಭಾರತದ ತಮಿಳುನಾಡಿನ‌ನೀಲಗಿರಿ ಬೆಟ್ಟದಲ್ಲಿ‌ ಮಾತ್ರ ಈ ಸೇಬು ಬೆಳೆಯುತ್ತಾರೆ. ಮೊದಲ ಬಾರಿಗೆ ಕೋಲ್ಹಾರದ ರೈತ ಸಿದ್ದಪ್ಪ ಬಾಲಗೊಂಡ ಅವರು ಒಂದು ಎಕರೆ ಹೊಲದಲ್ಲಿ ಪ್ರಾಯೋಗಿಕವಾಗಿ ಸೇಬು ಬೆಳೆದು ಹೊಸ ಆಶಾಭಾವ ಮೂಡಿಸಿದ್ದಾರೆ.

ಒಂದು ಎಕರೆಯಲ್ಲಿ ಸುಮಾರು 300 ಸೇಬು ಗಿಡಗಳನ್ನು ಎರಡು ವರ್ಷದ ಹಿಂದೆಯೇ ನಾಟಿ ಮಾಡಿದ್ದು ಇದೀಗ ಫಸಲು ಬಂದಿದೆ. ಪ್ರತಿ ಗಿಡದಲ್ಲಿ 10 ರಿಂದ 30 ಕಾಯಿ ಹಿಡಿದಿದ್ದು ಇನ್ನೊಂದು ತಿಂಗಳಲ್ಲು ಹಣ್ಣು ಕೊಯ್ಲಿಗಿ ಬರಲಿದೆ.

ಬಿಸಿಲಿನ ಈ ಭಾಗದಲ್ಲಿ ಸೇಬು ಬೆಳೆಯಲು ಸಾದ್ಯವೇ ಎಂಬ ರೈತರ ಪ್ರಶ್ನೆಗಳಿಗೆ ಉತ್ತರಿಸಲು ಕಾಶ್ಮೀರದಿಂದ ಗಿಡಗಳನ್ನು ತಂದು ನಾಟಿ ಮಾಡಿದ್ದು, ಪ್ರಯೋಗ ಯಶಶ್ವಿಯಾಗಿದ್ದು ಹಣ್ಣುಗಳಿಗೆ ಸ್ಥಳಿಯ ಮಾರುಕಟ್ಟೆಯಲ್ಲಿಯೇ ಬೇಡಿಕೆ ಇದ್ದು ಇಲ್ಲಿಯೇ ಮಾರಾಟ ಮಾಡುವ ಉದ್ದೇಶ ಹೊಂದಿದ್ದಾರೆ. ಒಟ್ಟಾರೆ ಹೊಸ ಸಾಹಸ ಮಾಡಿದ ಸಿದ್ದಪ್ಪ ಬಾಲಗೊಂಡ (farmer balagond) ಅವರ ಕಾರ್ಯ ನಿಜಕ್ಕೂ‌ ಶ್ಲಾಘನೀಯವೇ ಸರಿ.

– ಗಡಿನಾಡ ಕ್ರಾಂತಿ ಟೀಮ್


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!