- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಕೆ.ಎ.ಎಸ್. ಅಧಿಕಾರಿ ಶರಣಗೌಡ ಪಾಟೀಲಗೆ ಸತ್ಕಾರ

ಕೆ.ಎ.ಎಸ್. ಅಧಿಕಾರಿ ಶರಣಗೌಡ ಪಾಟೀಲಗೆ ಸತ್ಕಾರ

ವಿಜಯಪುರ: ಕೆ.ಎ.ಎಸ್. ಅಧಿಕಾರಿಯಾಗಿ ಇತ್ತೀಚೆಗೆ ಆಯ್ಕೆಗೊಂಡಂತಹ ಶರಣಗೌಡ ಮಹಾಂತಪ್ಪಗೌಡ ಪಾಟೀಲ (KAS Mahantagouda Patil) ಅವರು ಜಿಲ್ಲಾ ಕಾರ್ಮಿಕ ಅಧಿಕಾರಿಯಾಗಿ ನಿಯೋಜನೆಗೊಂಡು ಜಿಲ್ಲೆಗೆ  ಆಗಮಿಸಿದ ಹಿನ್ನೆಲೆಯಲ್ಲಿ ಯರನಾಳದ ಪರಮ ಪೂಜ್ಯರಾದ ಗುರು ಸಂಗನಬಸವ ಸ್ವಾಮಿಗಳು ಸತ್ಕರಿಸಿದರು.

ಶ್ರೀಗಳು ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳನ್ನು ನೈಜ ಕಾರ್ಮಿಕರಿಗೆ ತಲುಪಿಸಿ ಅವರ ಜೀವನ ಮಟ್ಟ ಸುಧಾರಿಸುತ್ತಾ ವೃತ್ತಿ ಜೀವನದಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸಿದರು.

ಇದೇ ವೇಳೆ ಸಿದ್ಧೇಶ್ವರ ಬ್ಯಾಂಕಿನ ನಿರ್ದೇಶಕರಾದ ಹರೀಶಗೌಡ ಎಸ್. ಪಾಟೀಲ ಸನ್ಮಾನಿಸಿ,  ಮಾತನಾಡಿದ ಅವರು,  ಮುಂಬರುವ ದಿನಗಳಲ್ಲಿ ಯಶಸ್ವಿ ಅಧಿಕಾರಿಯಾಗಿ, ಕಾರ್ಯನಿರ್ವಹಿಸುವ ಮೂಲಕ ಬಸವ ನಾಡಿಗೆ ಹೆಮ್ಮೆ ತರುವಂತಾಗಲಿ (KAS Mahantagouda Patil) ಎಂದು  ಮೆಚ್ಚುಗೆ ವ್ಯಕ್ತಪಡಿಸಿದರು.

ಪಂಚಮಸಾಲಿ ಯುವ ಘಟಕದ ಜಿಲ್ಲಾಧ್ಯಕ್ಷ ವಿರೇಶ ಎಸ್. ಕಸಬೆಗೌಡರ, ಬಸವರಾಜ ಕಲ್ಯಾಣಿ, ರವಿ ಆಲಗೂರ, ಸೋಮುಗೌಡ ಎಸ್. ಪಾಟೀಲ (ಯರನಾಳ) ಸನ್ಮಾನ ಸಮಾರಂಭದಲ್ಲಿ ಹಲವಾರು ಯುವಕರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!