- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಜಾನಪದ ಸಂಸ್ಕೃತಿಯನ್ನು ಉಳಿಸಿ. ಡಾ. ಹೊಸಮನಿ

ಜಾನಪದ ಸಂಸ್ಕೃತಿಯನ್ನು ಉಳಿಸಿ. ಡಾ. ಹೊಸಮನಿ

ಬಸವನಬಾಗೇವಾಡಿ: (Basavana Bagewadi) ಭಾವನಾತ್ಮಕ ಸಂಬಂಧ ಬೆಸೆಯುವ ಜಾನಪದ (Kannada Janapada) ಸಂಸ್ಕೃತಿ ಉಳಿಸಬೇಕು, ಜಾನಪದವನ್ನು ನಾವೆಲ್ಲರೂ ಬೆಳಸುವಂತ ಕಾರ್ಯದಲ್ಲಿ ತೊಡಗಿಕೊಳ್ಳಬೇಕೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ (Government PU College) ಪ್ರಾಂಶುಪಾಲ ಡಾ. ನೀಲಪ್ಪ ಹೊಸಮನಿ (Neelappa Hosamani) ಹೇಳಿದರು.

ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಸಮಿತಿ, ಕನ್ನಡ ವಿಭಾಗ ಹಾಗೂ ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ಸಹಯೋಗದಲ್ಲಿ ಜನಪದೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಜಾನಪದ ಕಾರ್ಯಕ್ರಮದಂತ ಕಾರ್ಯಕ್ರಮಗಳನ್ನು ಕಾಲೇಜುಗಳಲ್ಲಿ ಮಾಡುವುದರಿಂದ ವಿದ್ಯಾರ್ಥಿಗಳಲ್ಲಿ ನಮ್ಮ ಹಿರಿಯರು ಪ್ರತಿಯೊಂದು ಕಾರ್ಯದಲ್ಲಿ ಜಾನಪದ ಹಾಡು ಹೇಳುವ ಹಂತಿಪದ, ಶೋಭಾನಪದ, ಚೌಡಕಿ, ಗೀಗೀ ಸೇರಿದಂತೆ ಇತರೆ ಹಾಡುಗಳನ್ನು ತಿಳಿದುಕೊಳ್ಳುವ ಸಂಸ್ಕೃತಿ ಬೆಳೆಯುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿವೃತ್ತ ಹೆಸ್ಕಾಂ ಅಧಿಕಾರಿ ಕೃಷ್ಣಮೂರ್ತಿ ಎಸ್.ಡಿ ಅವರು ಜಾನಪದದಲ್ಲಿ (Kannada Janapada) ನೈತಿಕ ಹಾಸ್ಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ಬಸವರಾಜ ಹಾರಿವಾಳ ಕಾರ್ಯಕ್ರಮವನ್ನು ಉದ್ಘಾಟಿಸಿ ಹಂತಿ ಪದಗಳನ್ನು ಹೇಳಿದರು.

ಕಜಾಪ ತಾಲೂಕಾಧ್ಯಕ್ಷ ದೇವೇಂದ್ರ ಗೋನಾಳ, ಕಸಾಪ ಅಧ್ಯಕ್ಷ ಶಿವರುದ್ರಯ್ಯ ಹಿರೇಮಠ, ಹಳ್ಳೂರ, ಡಾ. ನಾಟೀಕಾರ, ಪ್ರೊ.ವಡವಡಗಿ, ಪ್ರೊ. ಪ್ರಶಾಂತ, ರೇಣುಕಾ ಅಂಬಲಿ, ಪ್ರೊ.ದೀಪಾ, ಪ್ರೊ.ವಿಜಯಲಕ್ಷ್ಮೀ, ಪ್ರೊ.ಬಾನು, ಪ್ರೊ.ಪರಶುರಾಮ ಸೇರಿದಂತೆ ಇತರರು ಇದ್ದರು. ಪ್ರೊ. ಲೀಲಾವತಿ ಸಿ, ಪ್ರಾಸ್ತವಿಕವಾಗಿ ಮಾತನಾಡಿದರು.

ಈರಮ್ಮ ಪತ್ತಾರ ಹಾಗೂ ಸಂಗಡಿಗರಿಂದ ಸಾಂಪ್ರದಾಯಿಕ ಜಾನಪದ ಹಾಡು ಹಾಡಿದರು. ಡಾ.ಯುವರಾಜ ಮಾದನಶೆಟ್ಟಿ ಸ್ವಾಗತಿಸಿದರು, ಪ್ರೊ. ಲಕ್ಷ್ಮೀ ಮೊರೆ ನಿರೂಪಿಸಿದರು, ಪ್ರೊ. ಭೀಮಾಶಂಕರ ಹಡಪದ ವಂದಿಸಿದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!