- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯತಾಲೂಕಾ ಸರ್ಕಾರಿ ಆಸ್ಪತ್ರೆಗೆ ಕಾಯಕಲ್ಪ ಪ್ರಶಸ್ತಿ ಭಾಗ್ಯ

ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಕಾಯಕಲ್ಪ ಪ್ರಶಸ್ತಿ ಭಾಗ್ಯ

ಬಸವನಬಾಗೇವಾಡಿ: ರೋಗಿಗಳಿಗೆ ಉತ್ತಮ ಚಿಕಿತ್ಸೆ, ವಾತಾವರಣ ಕಲ್ಪಸಿಕೊಡುವ ಆಸ್ಪತ್ರೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರಕಾರ ಸ್ವಚ್ಛ ಭಾರತ ಅಭಿಯಾನದೆಡಿ 2015ರಿಂದ ಕಾಯಕಲ್ಪ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ಪ್ರಶಸ್ತಿಗೆ ಬಸವನಬಾಗೇವಾಡಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯು ಕರ್ನಾಟಕ ರಾಜ್ಯಕ್ಕೆ 2020-21 ನೇ ಸಾಲಿನಲ್ಲಿ 2ನೇ ಸ್ಥಾನ ಪಡೆದುಕೊಂಡು ಕಾಯಕಲ್ಪ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಈ ಸರಕಾರಿ ಆಸ್ಪತ್ರೆಯಲ್ಲಿ 120ಕ್ಕೊ ಹೆಚ್ಚು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ದಿನದ 24 ಗಂಟೆಗಳ ಕಾಲವು ಚಿಕಿತ್ಸೆ ನೀಡುತ್ತಿದೆ. ನಿತ್ಯ ಈ ಆಸ್ಪತ್ರೆಗೆ 500ಕ್ಕೂ ಹೆಚ್ಚು ಹೊರ ಮತ್ತು ಒಳ ರೋಗಿಗಳು ಬಂದು ಚಿಕಿತ್ಸೆ ಪಡೆದು, ಉಚಿತವಾಗಿ ಸರಕಾರ ನೀಡುವ ಔಷಧಿಗಳನ್ನು ಪಡೆದುಕೊಳ್ಳುತ್ತಾರೆ.

ಕಾಯಕಲ್ಪ ಪ್ರಶಸ್ತಿಗೆ ಆಸ್ಪತ್ರೆಯ ಗುಣಮಟ್ಟದ ಚಿಕಿತ್ಸೆ, ಸ್ವಚ್ಚತೆ, ತ್ಯಾಜ್ಯ ವಿಲೇವಾರಿ, ರೋಗಿಗಳ ಆರೈಕೆ, ತಜ್ಞರ ಲಭ್ಯತೆ, ಸಂಪನ್ಮೂಲಗಳ ಬಳಕೆ, ಶೌಚಾಲಯ ಸೇರಿದಂತೆ ಒಟ್ಟು 16 ಮಾನದಂಡಗಳನ್ನು ಪರಿಗಣಿಸಲಾಗಿದೆ ಈ ಮಾನ ದಂಡಗಳಲ್ಲಿ 96.42ಅಂಕ ಪಡೆದು ಕರ್ನಾಟಕದ ಒಟ್ಟು 278 ಆಸ್ಪತ್ರೆಗಳ ಪೈಕಿ ಬಸವನಬಾಗೇವಾಡಿ ತಾಲೂಕ ಸಾರ್ವಜನಿಕ ಆಸ್ಪತ್ರೆಯು ಕರ್ನಾಟಕ ರಾಜ್ಯಕ್ಕೆ 20-2021ನೇ ಸಾಲಿನಲ್ಲಿ 2ನೇ ಸ್ಥಾನವನ್ನು ಪಡೆದುಕೊಂಡು ಕಾಯಕಲ್ಪ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ಕೂಡುವುದರ ಜತೆಗೆ ಆಸ್ಪತ್ರೆಯ ವೈದ್ಯಕೀಯ, ಅರೆ ವೈದ್ಯಕೀಯ ಮತ್ತು ನಾನಾ ಕ್ಲಿನಿಕ್ ಸಿಬ್ಬಂಧಿಯ ಪರಿಶ್ರಮದೂಂದಿಗೆ ಸ್ವಚ್ಚತೆಗೆ ಆದ್ಯತೆ ನೀಡಿ ಸಾರ್ವಜನಿಕ ತಾಲೂಕಾ ಆಸ್ಪತ್ರೆಯು ಕರ್ನಾಟಕ ರಾಜ್ಯಕ್ಕೆ 2020-21 ನೇ ಸಾಲಿನ ಕಾಯಕಲ್ಪ ಪ್ರಶಸ್ತಿಯಲ್ಲಿ 2ನೇ ಸ್ಥಾನವನ್ನು ಪಡೆದಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!